ಹುಟ್ಟುಹಬ್ಬದಂದು ಡಬಲ್ ಸಂಭ್ರಮದಲ್ಲಿ ಡೈನಾಮಿಕ್ ಪ್ರಿನ್ಸ್
Recommended Video

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 31ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಜ್ವಲ್ ಅವರ ಈ ಬಾರಿಯ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿದೆ. ಎರಡೆರೆಡು ಸಂಭ್ರದಲ್ಲಿರುವ ಪ್ರಜ್ವಲ್ ಬರ್ತಡೇಯನ್ನು ನಿನ್ನೆಯಿಂದಲೇ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ.
ಸ್ಟಾರ್ ಗಳ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ತುಂಬಾನೇ ಸ್ಪೆಷಲ್ ಅದೇ ರೀತಿಯಲ್ಲಿ ಪ್ರಜ್ವಲ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು. ಪ್ರಜ್ವಲ್ ಖಾಕಿ ಹಾಕಿ ಅಭಿಮಾನಿಗಳ ಮುಂದೆ ಎಂಟ್ರಿ ಕೊಡುತ್ತಿದ್ದಾರೆ.

ಬರ್ತಡೇ ದಿನವೇ ಪ್ರಜ್ವಲ್ ಅಭಿನಯ ಮಾಡುತ್ತಿರುವ ಹೊಸ ಚಿತ್ರ 'ಜಂಟಲ್ ಮ್ಯಾನ್' ಕೂಡ ಸೆಟ್ಟೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮುಹೂರ್ತಕ್ಕೆ ಆಗಮಿಸಿ ಡೈನಾಮಿಕ್ ಪ್ರಿನ್ಸ್ ಗೆ ಶುಭಕೋರಿದ್ದಾರೆ.

ಒಟ್ಟಾರೆ ಪ್ರಜ್ವಲ್ ಇನ್ನು ಮುಂದೆ ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ಈಗಾಗಲೇ ಸಿಕ್ಕಿದೆ. ಸದ್ಯ ಬಿಡುಗಡೆ ಆಗಿರುವ ಮತ್ತು ಸೆಟ್ಟೇರಿರುವ ಚಿತ್ರಗಳಲ್ಲಿಯೂ ಪ್ರಜ್ವಲ್ ಡಿಫ್ರೆಂಟ್ ಆಗಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.


Click it and Unblock the Notifications











