For Quick Alerts
  ALLOW NOTIFICATIONS  
  For Daily Alerts

  ಬರ್ಬರವಾಗಿ ಹತ್ಯೆಗೀಡಾಗಿದ್ದ ಯುವ ನಟ ಸತೀಶ್ ವಜ್ರ ಮನೆಗೆ ಪ್ರಜ್ವಲ್ ದೇವರಾಜ್ ಭೇಟಿ, ಹಣದ ನೆರವು

  |

  ಇದೇ ವರ್ಷದ ಜೂನ್ ತಿಂಗಳಿನಲ್ಲಿ ಯುವ ನಟ ಸತೀಶ್ ವಜ್ರ ಪಟ್ಟಣಗೆರೆಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಲಗೋರಿ ಎಂಬ ಟೆಲಿಫಿಲ್ಮ್‌ನಲ್ಲಿ ನಾಯಕನಾಗಿ ಅಭಿನಯಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸತೀಶ್ ವಜ್ರ ಚಿತ್ರರಂಗ ಪ್ರವೇಶಿಸಿ ಒಬ್ಬ ಒಳ್ಳೆಯ ಕಲಾವಿದನಾಗಿ ಗುರುತಿಸಿಕೊಳ್ಳಬೇಕೆಂಬ ಗುರಿಯನ್ನು ಹೊಂದಿದ್ದಂತಹ ನಟ.

  ಇನ್ನು ಪ್ರಜ್ವಲ್ ದೇವರಾಜ್ ಅವರ ಪಕ್ಕಾ ಅಭಿಮಾನಿಯಾಗಿದ್ದ ಸತೀಶ್ ವಜ್ರ ತನ್ನ ಮನೆಯ ಗೋಡೆ ಮತ್ತು ಟಿವಿ ಟೇಬಲ್ ಮೇಲೆಲ್ಲಾ ತಾನು ಪ್ರಜ್ವಲ್ ದೇವರಾಜ್ ಜತೆ ತೆಗೆಸಿಕೊಂಡಿದ್ದ ಚಿತ್ರಗಳನ್ನು ಫ್ರೇಮ್ ಹಾಕಿಸಿ ಇಟ್ಟುಕೊಂಡಿದ್ದರು. ಹೀಗೆ ತನ್ನ ಕಟ್ಟಾ ಅಭಿಮಾನಿಯಾದ ಸತೀಶ್ ವಜ್ರ ನಿಧನ ಹೊಂದಿದ ನಂತರ ಇದೀಗ ಪ್ರಜ್ವಲ್ ದೇವರಾಜ್ ಆತನ ಸ್ವಗೃಹಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

  ಪ್ರಜ್ವಲ್ ದೇವರಾಜ್ ನಿನ್ನೆ ( ಸೆಪ್ಟೆಂಬರ್ 14 ) ರಾತ್ರಿಯ ವೇಳೆ ಸತೀಶ್ ವಜ್ರ ಮನೆಗೆ ಭೇಟಿ ನೀಡಿರುವ ಫೋಟೊ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ವಿಡಿಯೋ ಪೈಕಿ ಪ್ರಜ್ವಲ್ ದೇವರಾಜ್ ಸತೀಶ್ ವಜ್ರ ಅವರ ತಾಯಿಗೆ ಹಣ ನೀಡಿ ಧೈರ್ಯ ತುಂಬುತ್ತಿದ್ದ ದೃಶ್ಯವಿದೆ. ಹಣ ನೀಡಿ 'ನೀವು ಧೈರ್ಯದಿಂದಿರಿ, ನೀವೇ ಧೈರ್ಯ ಕಳೆದುಕೊಂಡರೆ ಇವರ ಗತಿ ಏನು' ಎಂದು ಸತೀಶ್ ವಜ್ರ ಅವರ ಪೋಷಕರಿಗೆ ಪ್ರಜ್ವಲ್ ದೇವರಾಜ್ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

  ಪ್ರಜ್ವಲ್ ದೇವರಾಜ್ ನಡೆಗೆ ಮೆಚ್ಚುಗೆ

  ಪ್ರಜ್ವಲ್ ದೇವರಾಜ್ ನಡೆಗೆ ಮೆಚ್ಚುಗೆ

  ಇನ್ನು ಪ್ರಜ್ವಲ್ ದೇವರಾಜ್ ತಾವೇ ಖುದ್ದಾಗಿ ನಟ ಸತೀಶ್ ವಜ್ರ ಮನೆಗೆ ಭೇಟಿ ನೀಡಿ ಆತನ ಪೋಷಕರ ಜತೆ ನಡೆದುಕೊಂಡಿರುವ ರೀತಿಯನ್ನು ವೀಕ್ಷಿಸಿದ ನೆಟ್ಟಿಗರು 'ಒಳ್ಳೆಯ ಕೆಲಸ ಪ್ರಜ್ವಲ್ ಸರ್' ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಭಾಮೈದನಿಂದಲೇ ಹತ್ಯೆಗೀಡಾಗಿದ್ದರು ಸತೀಶ್ ವಜ್ರ

  ಭಾಮೈದನಿಂದಲೇ ಹತ್ಯೆಗೀಡಾಗಿದ್ದರು ಸತೀಶ್ ವಜ್ರ

  ಸತೀಶ ವಜ್ರ ತನ್ನ ಭಾಮೈದನಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಸತೀಶ್ ವಜ್ರ ಹತ್ಯೆಯಾಗುವುದಕ್ಕೂ ಕೆಲ ತಿಂಗಳುಗಳ ಹಿಂದೆ ಆತನ ಪತ್ನಿ ಸುಧಾಮಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ತನ್ನ ಸೋದರಿಯ ಸಾವಿಗೆ ಸತೀಶ್ ವಜ್ರ ಅವರೇ ಕಾರಣ ಎಂಬ ದ್ವೇಷವನ್ನು ಇಟ್ಟುಕೊಂಡಿದ್ದ ಸುಧಾಮಣಿ ಸಹೋದರ ಸುದರ್ಶನ್ ತನ್ನ ಸ್ನೇಹಿತ ನಾಗೇಂದ್ರನ ಜತೆಗೂಡಿ ಸತೀಶ್ ವಜ್ರ ವಾಸವಿದ್ದ ಪಟ್ಟಣಗೆರೆಯ ನಿವಾಸಕ್ಕೆ ರಾತ್ರಿ ವೇಳೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.

  ಮಗುವಿನ ವಿಷಯವಾಗಿ ಸಾಕಷ್ಟು ಬಾರಿ ಕಲಹ

  ಮಗುವಿನ ವಿಷಯವಾಗಿ ಸಾಕಷ್ಟು ಬಾರಿ ಕಲಹ

  ಇನ್ನು ಸತೀಶ್ ವಜ್ರ ಅವರ ಪತ್ನಿ ನಿಧನ ಹೊಂದಿದ ನಂತರ ತನ್ನ 5 ವರ್ಷದ ಮಗುವನ್ನು ತನ್ನ ಬಳಿಗೆ ಕಳುಹಿಸಿ ಕೊಡಿ ಎಂದು ಸತೀಶ್ ವಜ್ರ ಸಾಕಷ್ಟು ಬಾರಿ ಸುಧಾಮಣಿ ಪೋಷಕರ ಬಳಿ ಮನವಿ ಮಾಡಿದ್ದರು. ಈ ವಿಷಯವಾಗಿಯೇ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳಗಳು ಕೂಡ ನಡೆದಿದ್ದವು. ಈ ಕಿಚ್ಚು ಹಾಗೂ ತನ್ನ ಸಹೋದರಿಯ ಸಾವಿನ ದ್ವೇಷವನ್ನು ಹೊಂದಿದ್ದ ಸತೀಶ್ ವಜ್ರ ಬಾಮೈದ ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಿಟ್ಟಿದ್ದ.

  English summary
  Actor Prajwal Devaraj visits late Satish Vajra home and made financial help to thier parents. Read on
  Friday, September 16, 2022, 9:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X