ಹೊಸ ಶೈಲಿ ಸಿನಿಮಾಗೆ ಕೈ ಹಾಕಿದ ಪ್ರಜ್ವಲ್ ದೇವರಾಜ್: 80 ದಿನ ಬರೀ ಸೆಟ್ಟಲ್ಲೇ ಶೂಟಿಂಗ್
ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೂವರೆಗೂ ಆಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾಗಳಲ್ಲೇ ನಟಿಸುತ್ತಿದ್ದ ನಟ ಹೊಸ ಶೈಲಿಯ ಸಿನಿಮಾ ಕಡೆ ನಿಧಾನವಾಗಿ ಮುಖ ಮಾಡುತ್ತಿದ್ದಾರೆ.
ಮೇಘನಾ ರಾಜ್ ಕಮ್‌ಬ್ಯಾಕ್ ಮಾಡುತ್ತಿರುವ 'ತತ್ಸಮ ತದ್ಬವ' ಅಂತಹ ವಿಭಿನ್ನ ಕಥೆಯುಳ್ಳ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆನೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪ್ರಜ್ವಲ್ ಈ ಬಾರಿ ಸಾಮಾಜಿಕ ಕಳಕಳಿ ಇರುವ ಸ್ಟೋರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಹುಶ: ಪ್ರಜ್ವಲ್ ವೃತ್ತಿ ಬದುಕಿನಲ್ಲೇ ಇಂತಹ ಸಿನಿಮಾದಲ್ಲಿ ನಟಿಸುತ್ತಿರೋದು ಇದೇ ಮೊದಲು.
ಅಂದ್ಹಾಗೆ, ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಸಾಮಾಜಿಕ ಕಳಕಳಿ ಕಥಾಹಂದರವಿರುವ ಸಿನಿಮಾಗೆ ನೃತ್ಯ ನಿರ್ದೇಶಕ ಕಲೈ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಕಲೈ ಮಾಸ್ಟರ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಅಂದ್ಹಾಗೆ ಈ ಸಿನಿಮಾವನ್ನು ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪ್ರತಿಭಾ ಎನ್ನುವವರು ಈ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಿರ್ಮಾಪಕಿ ಪ್ರತಿಭಾ ಮಂಗಳೂರಿನ ಮೂಲದವರು. ಇಪ್ಪತ್ತು ವರ್ಷಗಳಿಂದ ರಾಜಲಕ್ಷ್ಮೀ ಟ್ರಾವಲ್ಸ್ ನಡೆಸುತ್ತಿದ್ದು, ಇದು ಇವರು ನಿರ್ಮಿಸುತ್ತಿರುವ ಮೂರನೇ ಸಿನಿಮಾ. ಈ ಚಿತ್ರದ ಶೂಟಿಂಗ್ ಅಕ್ಟೋಬರ್ ತಿಂಗಳಿನಿಂದ ಆರಂಭ ಆಗಲಿದೆ.
ಕನ್ನಡದ ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರುವ ಕಲೈ ಮಾಸ್ಟರ್ ಈಗ ಡೈರೆಕ್ಷನ್ ಕಡೆ ವಾಲಿದ್ದಾರೆ. ಇದೂವರೆಗೂ ಸುಮಾರು 300ಕ್ಕೂ ಅಧಿಕ ಸ್ಟಾರ್ ಸಿನಿಮಾಗಳ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಈಗ ಪ್ರಜ್ವಲ್ ದೇವರಾಜ್ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿರೋ ಮಾಡಿದ್ದಾರೆ. ಮದನ್ -ಹರಿಣಿ, ಚಿನ್ನಿಪ್ರಕಾಶ್, ತ್ರಿಭುವನ್, ಫೈವ್ ಸ್ಟಾರ್ ಗಣೇಶ್ ಅಂತಹ ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಅನುಭವವಿದೆ.
ಪ್ರಜ್ವಲ್ ದೇವರಾಜ್ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಅದ್ದೂರಿ ಸೆಟ್‌ಗಳಲ್ಲೇ ನಡೆಯಲಿದೆ. ಸುಮಾರು 80 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ನಡೆಯಲಿದೆ. ಆರು ದುಬಾರಿ ಫೈಟ್ ಹಾಗೂ ಆರು ಹಾಡುಗಳು ಈ ಸಿನಿಮಾದಲ್ಲಿ ಇರಲಿದೆ. 'ಕೆಜಿಎಫ್' ಖ್ಯಾತಿಯ ಶಂಕರ್ ಹಾಗೂ ಚಂದ್ರಮೌಳಿ ಈ ಸಿನಿಮಾಗೆ ಡೈಲಾಗ್ ಬರೆಯುತ್ತಿರೋದು ಸಿನಿಮಾದ ಮತ್ತೊಂದು ಹೈಲೈಟ್.


Click it and Unblock the Notifications











