ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ 'ಗಲಾಟೆ'

By Rajendra

ಇದೇ ಜನವರಿ 11ರಿಂದ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ಭಾರಿ 'ಗಲಾಟೆ' ನಡೆಯಲಿದೆ. ಅಂತಿಂಥ ಗಲಾಟೆಯಲ್ಲ, ಇದು ಪ್ರೀತಿಗಾಗಿ ಯುದ್ಧ. ನಾವೀಗ ಹೇಳಹೊರಟಿರುವುದು ನಿಜವಾದ ಗಲಾಟೆ ಬಗ್ಗೆ ಅಲ್ಲ; ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರದ ಬಗ್ಗೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಲಕ್ಷ್ಮಿ' ಚಿತ್ರ ಈ ವರ್ಷದ ಮೊದಲ ಚಿತ್ರ ಎಂಬ ಸುದ್ದಿ ಠುಸ್ ಆಗಿದೆ. ಶಿವಣ್ಣ ಅಭಿನಯದ 'ಲಕ್ಷ್ಮಿ' ಚಿತ್ರ ಜ.18ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಪ್ರಜ್ವಲ್ ದೇವರಾಜ್ ಅವರ 'ಗಲಾಟೆ' ಶುರುವಾಗುತ್ತಿದೆ.

ಈ ಮೂಲಕ 2013ನೇ ಸಾಲಿನ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ಗಲಾಟೆ' ಪಾತ್ರವಾಗುತ್ತಿದೆ. ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ನಿರ್ಮಾಪಕರು ಎಂ.ಎಸ್. ರಾಜೇಂದ್ರಕುಮಾರ್. ಜೆಸ್ಸಿ ಗಿಫ್ಟ್ ಅವರ ಸಂಗೀತ ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಅಪೂರ್ವ ಕಲಾಕೃತಿಯಂತಿರುವ ಕೃತಿ ಖರಬಂದ ಚಿತ್ರದ ನಾಯಕಿ. 'War of Love' ಎಂಬುದು ಚಿತ್ರದ ಅಡಿಬರಹ. ಚಿತ್ರದ ಪೋಷಕ ಪಾತ್ರಗಳಲ್ಲಿ ಶಶಿಕುಮಾರ್ ಹಾಗೂ ತಾರಾ ಅಭಿನಯಿಸಿದ್ದಾರೆ. ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ 'ಗಲಾಟೆ' ಶುರುವಾಗುತ್ತಿದೆ.

ಇನ್ನು ನಿರ್ಮಾಪಕ ರಾಜೇಂದ್ರ ಕುಮಾರ್ ಅವರು ಈ ಹಿಂದೆ ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿ ನಿರ್ಮಿಸಿದ್ದರು. ಈಗ ಅವರ ಚೊಚ್ಚಲ ನಿರ್ಮಾಣದಲ್ಲಿ ಗಲಾಟೆ ಚಿತ್ರ ಬರುತ್ತಿದೆ. ನಿಶಾ ಶೆಟ್ಟಿ, ಸುಮನ್ ರಂಗನಾಥ್, ಶೋಭರಾಜ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. (ಏಜೆನ್ಸೀಸ್)

More from Filmibeat

English summary
Prajwal Devaraj and Kriti Kharbanda lead Kannada film Galate slated for release on 11th January, 2013. The Romantic comedy film directed and written by M. D. Sridhar. The music is composed by Jassie Gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X