twitter
    For Quick Alerts
    ALLOW NOTIFICATIONS  
    For Daily Alerts

    ತೆರೆಮೇಲೆ ಖತರ್ನಾಕ್ ಕೇಡಿ ಆಗಿದ್ದರೂ, ನಿಜ ಜೀವನದಲ್ಲಿ ಪ್ರಕಾಶ್ ರೈ 'ಹೀರೋ'.!

    By Harshitha
    |

    ಕನ್ನಡ, ತೆಲುಗು, ತಮಿಳು ಭಾಷೆಯ ಅನೇಕ ಚಿತ್ರಗಳಲ್ಲಿ ಖತರ್ನಾಕ್ ಕೇಡಿ ಪಾತ್ರಗಳಲ್ಲಿ ಅಭಿನಯಿಸಿರುವ ನಟ ಪ್ರಕಾಶ್ ರೈ, ನಿಜ ಜೀವನದಲ್ಲಿ ಮಾತ್ರ 'ರಿಯಲ್ ಹೀರೋ'.! ನಾವು ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ.

    ಮೊನ್ನೆಯಷ್ಟೇ ರಂಜಾನ್ ಹಬ್ಬ ಇತ್ತಲ್ಲ... ಆ ದಿನ ಪ್ರಕಾಶ್ ರೈ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಬಡ ಮುಸ್ಲಿಂ ಕುಟುಂಬವೊಂದರ ಮನೆಯನ್ನು ನವೀಕರಿಸಿ ಕೊಟ್ಟಿದ್ದಾರೆ ನಟ ಪ್ರಕಾಶ್ ರೈ.

    Prakash Rai builts home for needy family in Kondareddypalli

    ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!

    ತೆಲಾಂಗಣದ ಕೊಂಡಾರೆಡ್ಡಿಪಲ್ಲಿ ಎಂಬ ಗ್ರಾಮವನ್ನು ನಟ ಪ್ರಕಾಶ್ ರೈ ದತ್ತು ಪಡೆದಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಆ ಗ್ರಾಮವನ್ನ ಅಭಿವೃದ್ಧಿ ಮಾಡಲು ಹೊರಟಿರುವ ಪ್ರಕಾಶ್ ರೈ, ಅದೇ ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿದ್ದ ಬಡ ಮುಸ್ಲಿಂ ಕುಟುಂಬವೊಂದರ ಮನೆಯನ್ನು ನವೀಕರಿಸಿ ಕೊಟ್ಟಿದ್ದಾರೆ.

    ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?ಪ್ರಕಾಶ್ ರೈ ಬಗ್ಗೆ ವಿಚ್ಛೇದಿತ ಪತ್ನಿ ಲಲಿತಾ ಕುಮಾರಿ ಹೇಳಿದ್ದೇನು.?

    ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ನಟ ಪ್ರಕಾಶ್ ರೈ, ''ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಕುಟುಂಬವೊಂದಕ್ಕೆ ಮನೆ ನೀಡಿ, ಸಂತೋಷವನ್ನು ಮರಳಿ ನೀಡಿ, ಕೊಂಡಾರೆಡ್ಡಿಪಲ್ಲಿಯಲ್ಲಿ ರಂಜಾನ್ ಹಬ್ಬವನ್ನು ಆಚರಿಸಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.

    ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ಇಂತಹ ಸಾಮಾಜಿಕ ಕಾರ್ಯಗಳ ಮೂಲಕ ಅನೇಕರ ಪಾಲಿಗೆ ಪ್ರಕಾಶ್ ರೈ 'ಹೀರೋ' ಆಗಿದ್ದಾರೆ.

    English summary
    Prakash Rai builts home for needy family in Kondareddypalli
    Wednesday, June 28, 2017, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X