ಬೇರೆ ಭಾಷೆಗಳ ಮುಂದೆ ಎದೆ ಎತ್ತಿ ನಿಲ್ಲುವಂತೆ ಮಾಡಿದ ಯುವರತ್ನ: ಪ್ರಕಾಶ್ ರೈ
''ಒಬ್ಬ ಕನ್ನಡಿಗನಾಗಿ ಬೇರೆ ಭಾಷೆಗಳ ಮುಂದೆ ನಾನು ಎದೆ ಉಬ್ಬಿಸಿ ನಿಂತುಕೊಳ್ಳುವ ತರ ಮಾಡಿದ ಸಿನಿಮಾ ಯುವರತ್ನ'' ಎಂದು ನಟ ಪ್ರಕಾಶ್ ರೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಪ್ರಕಾಶ್ ರೈ ಸಂತಸ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಮಾತನಾಡಿದ ರೈ ''ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ಯುವರತ್ನ ಬಹಳ ಖುಷಿ ಕೊಟ್ಟ ಸಿನಿಮಾ'' ಎಂದರು.

''ಬಿಗ್ ಬಜೆಟ್ ಚಿತ್ರಗಳು, ಅದ್ಧೂರಿ ಚಿತ್ರಗಳು ನನಗೆ ಹೊಸತಲ್ಲ, ಬಹಳಷ್ಟು ಸಿನಿಮಾ ಮಾಡಿದ್ದೇನೆ, ದೇಶ ಸುತ್ತಿ ಬಂದಿದ್ದೇನೆ. ಇದು ಬಹಳಷ್ಟು ವಿಶೇಷ ಹಾಗೂ ಇಂದಿನ ಸಮಾಜಕ್ಕೆ ಅಗತ್ಯವಿರುವ ಸಿನಿಮಾ. ಅದಕ್ಕಾಗಿ ಈ ಚಿತ್ರ ಮಾಡಿದೆ'' ಎಂದು ಪ್ರಕಾಶ್ ರೈ ಹೇಳಿದರು.
''ಡ್ಯಾನ್ಸ್ ಬರುತ್ತೆ, ಫೈಟ್ ಬರುತ್ತೆ, ಅಭಿಮಾನಿಗಳು ಹೆಚ್ಚು ಇದ್ದಾರೆ, ಮಾರ್ಕೆಟ್ ಇದೆ ಎಂಬ ಕಾರಣಕ್ಕಾಗಿ ಈ ಸಿನಿಮಾ ಮಾಡದೆ, ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನಿಸುವ, ಒಳ್ಳೆಯ ಮೌಲ್ಯವನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡೋದು ಅಪ್ಪು ಅವರ ದೊಡ್ಡ ಗುಣ'' ಎಂದು ಪ್ರಕಾಶ್ ರೈ ಹೊಗಳಿದ್ದಾರೆ.
ಅಂದ್ಹಾಗೆ, ಯುವರತ್ನ ಸಿನಿಮಾ ಏಪ್ರಿಲ್ 1 ರಂದು ತೆರೆಗೆ ಬರ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಪುನೀತ್ ಸಿನಿಮಾ ರಿಲೀಸ್ ಆಗುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಾರೆ. ಪುನೀತ್ ಜೊತೆ ಸಯೇಶಾ, ಧನಂಜಯ್, ದಿಗಂತ್, ಪ್ರಕಾಶ್ ರೈ, ರಂಗಾಯಣ ರಘು, ಸೋನು ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











