ಶ್ರುತಿ ಪರ ಎಂದಿದ್ದ ಪ್ರಕಾಶ್ ರೈ ಈಗ ಉಲ್ಟಾ ಹೊಡೆದರು

ಸ್ಯಾಂಡಲ್ ವುಡ್ ಮೀ ಟೂ ಅಭಿಯಾನ ದಿನಕ್ಕೊಂದು ಅಲ್ಲ.. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರವಾಗಿ ಈಗ ನಟ ಪ್ರಕಾಶ್ ರೈ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಪ್ರಕರಣದ ಬಗ್ಗೆ ಬಹುಭಾಷ ನಟ ಪ್ರಕಾಶ್ ರೈ ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದರು. ಶ್ರುತಿ ಹರಿಹರನ್ ಪರ ಮಾತನಾಡಿದ್ದ ಅವರು ಅರ್ಜುನ್ ಸರ್ಜಾ ಕ್ಷಮೆ ಕೇಳಬೇಕು ಎಂದಿದ್ದರು.

ಪ್ರಕಾಶ್ ರೈ ಅವರ ಈ ಹೇಳಿಕೆ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ನಟ ಜಗ್ಗೇಶ್ ಈ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಇಷ್ಟೆಲ್ಲ ಆದ ಮೇಲೆ ಪ್ರಕಾಶ್ ರೈ ಉಲ್ಟಾ ಹೊಡೆದಿದ್ದಾರೆ. ಮುಂದೆ ಓದಿ...

ಪ್ರಕಾಶ್ ರೈ ಟ್ವೀಟ್

ಪ್ರಕಾಶ್ ರೈ ಟ್ವೀಟ್

''ಆಚಾರ..ವಿಚಾರಗಳಿಲ್ಲದ ನಾಲಿಗೆಗಳು..ತಮ್ಮ ನೀಚ ಬುದ್ದಿಯಿಂದ ತಮ್ಮ ತಮ್ಮ ಹಿತಾಸಕ್ತಿಗಳ ಬೆಳೆ ಬೇಯಿಸಿಕೊಳ್ಳುತ್ತಾ ಮೀಟೂ ಅಭಿಯಾನವನ್ನು ದಾರಿ ತಪ್ಪಿಸುವ ಮುನ್ನ'' ಎಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ ಅರ್ಜುನ್ ಸರ್ಜಾ ಹಾಗೂ ತಮ್ಮ ಸ್ನೇಹದ ಬಗ್ಗೆ ಬರೆದುಕೊಂಡಿದ್ದಾರೆ.

ನನ್ನ ಬಹುಕಾಲದ ಗೆಳೆಯ

ನನ್ನ ಬಹುಕಾಲದ ಗೆಳೆಯ

''ಅರ್ಜುನ್ ನನ್ನ ಬಹುಕಾಲದ ಗೆಳೆಯ. ಸಹ ಪ್ರಯಾಣಿಕ. ಆತನನ್ನು ನಾನು ತುಂಬಾ ಚೆನ್ನಾಗಿ ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ. ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ.'' - ಪ್ರಕಾಶ್ ರೈ, ನಟ

ಶ್ರುತಿ ಅವಕಾಶವಾದಿ ಹೆಣ್ಣು ಮಗಳಲ್ಲ

ಶ್ರುತಿ ಅವಕಾಶವಾದಿ ಹೆಣ್ಣು ಮಗಳಲ್ಲ

''ಯಾರ ಬಗ್ಗೆಯು ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ. ಶ್ರುತಿ ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ. ಅಪ್ಪಟ ಪ್ರತಿಭಾವಂತೆ. ದಿಟ್ಟ ಹೆಣ್ಣು. ನಮ್ಮೆಲ್ಲರಂತೆ ಇವರನ್ನೂ ಬೆಳೆಸಿರುವುದು ಕೂಡ ನಮ್ಮ ಸಮಾಜವೇ.'' - ಪ್ರಕಾಶ್ ರೈ, ನಟ

ಇಬ್ಬರನ್ನು ಕರೆಸಿ ತಕ್ಷಣವೆ ಇತ್ಯರ್ಥಿಸಿ

ಇಬ್ಬರನ್ನು ಕರೆಸಿ ತಕ್ಷಣವೆ ಇತ್ಯರ್ಥಿಸಿ

''ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರು ಮಾಡಲು ಸಾಧ್ಯವಿರುವವರು. ಈ ಸತ್ಯದ ಹಿನ್ನಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು. ಪಕ್ಷ ಪಕ್ಷಪಾತವಿಲ್ಲದೆ ಪೂರ್ವಗ್ರಹ ಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ಕೂರಿಸಿ ತಕ್ಷಣವೆ ಇತ್ಯರ್ಥಿಸಿ.'' - ಪ್ರಕಾಶ್ ರೈ, ನಟ

ಈ ಹಿಂದೆ ಪ್ರಕಾಶ್ ರೈ ಹೇಳಿದ್ದೇನು

ಈ ಹಿಂದೆ ಪ್ರಕಾಶ್ ರೈ ಹೇಳಿದ್ದೇನು

''ಅರ್ಜುನ್ ರವರು ಈ ಆರೋಪವನ್ನು ಅಲ್ಲಗಳೆದರೂ.. ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ. ನಾನು ಶ್ರುತಿ ಹರಿಹರನ್ ರವರ ಪರವಾಗಿ.. ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ'' - ಪ್ರಕಾಶ್ ರಾಜ್, ನಟ

More from Filmibeat

English summary
Kannada Actor Prakash Rai tweets about Arjun Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X