'ಮೀಟೂ' ಅಭಿಯಾನದ ಬಗ್ಗೆ ಪ್ರಕಾಶ್ ರೈ ಮಾಡಿರುವ ಟ್ವೀಟ್ ಇದು.!

Recommended Video

ಮೀ ಟೂ ಅಭಿಯಾನದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು..? |FILMIBEAT KANNADA

ಹಾಲಿವುಡ್ ನಲ್ಲಿ ಶುರುವಾಗಿದ್ದ 'ಮೀಟೂ' (#MeToo) ಅಭಿಯಾನ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದ್ಯಾವಾಗ ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದರೋ, ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ನಟಿಯರು ಒಬ್ಬೊಬ್ಬರಾಗಿ ದನಿಯೆತ್ತಲು ಆರಂಭಿಸಿದ್ದಾರೆ.

ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ, ಕೆಲಸ ಮಾಡುವ ಸ್ಥಳಗಳಲ್ಲಿ 'ಕಹಿ' ಅನುಭವ ಎದುರಿಸಿದ ಹೆಣ್ಮಕ್ಕಳು ಕೂಡ 'ಮೀಟೂ' ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತಿದ್ದಾರೆ.

Prakash Rai tweets about Me Too Campaign

ರಾಷ್ಟ್ರಾದ್ಯಂತ 'ಮೀಟೂ ಅಭಿಯಾನ' ಸದ್ದು-ಸುದ್ದಿ ಮಾಡುತ್ತಿರುವಾಗಲೇ, ನಟ ಪ್ರಕಾಶ್ ರೈ ಒಂದು ಟ್ವೀಟ್ ಮಾಡಿದ್ದಾರೆ. 'ಮೀಟೂ ಅಭಿಯಾನ'ಕ್ಕೆ ತಮ್ಮ ಸಪೋರ್ಟ್ ಇದೆ ಎಂದು ಟ್ವೀಟ್ ಮೂಲಕ ಪ್ರಕಾಶ್ ರೈ ತಿಳಿಸಿದ್ದಾರೆ.

''ಮೀಟೂ... ಇದು ಜೀವನದ ಎಲ್ಲಾ ಹಂತಗಳಲ್ಲೂ ಒಂಥರಾ ಸಾಂಕ್ರಾಮಿಕ... ನಮ್ಮ ಸಮಾಜದಲ್ಲಿ ಇದನ್ನ ಮಾಡುವುದು ಅವಶ್ಯಕ. ಇದರಿಂದ ಮಹಿಳೆಯರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ. ಹೊರಬಂದು ಎಲ್ಲವನ್ನೂ ಬಹಿರಂಗ ಪಡಿಸಿ, ನಿಮ್ಮಿಂದು ಇದು ಸಾಧ್ಯ'' ಎಂದು ಮಹಿಳೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಮೀಟೂ ಅಭಿಯಾನದಿಂದಾಗಿ ದೇಶದಲ್ಲಿ ದಿನಕ್ಕೊಂದು ಪ್ರಕರಣ ಬಟಾ ಬಯಲಾಗುತ್ತಿದೆ. ಖ್ಯಾತನಾಮರ ಮುಖವಾಡ ಕಳಚಿ ಬೀಳುತ್ತಿದೆ.

More from Filmibeat

English summary
Kannada Actor Prakash Rai has taken his twitter account to express his opinion about #MeToo Campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X