twitter
    For Quick Alerts
    ALLOW NOTIFICATIONS  
    For Daily Alerts

    'ಮೀಟೂ' ಅಭಿಯಾನದ ಬಗ್ಗೆ ಪ್ರಕಾಶ್ ರೈ ಮಾಡಿರುವ ಟ್ವೀಟ್ ಇದು.!

    |

    Recommended Video

    ಮೀ ಟೂ ಅಭಿಯಾನದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು..? |FILMIBEAT KANNADA

    ಹಾಲಿವುಡ್ ನಲ್ಲಿ ಶುರುವಾಗಿದ್ದ 'ಮೀಟೂ' (#MeToo) ಅಭಿಯಾನ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದ್ಯಾವಾಗ ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದರೋ, ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ನಟಿಯರು ಒಬ್ಬೊಬ್ಬರಾಗಿ ದನಿಯೆತ್ತಲು ಆರಂಭಿಸಿದ್ದಾರೆ.

    ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ, ಕೆಲಸ ಮಾಡುವ ಸ್ಥಳಗಳಲ್ಲಿ 'ಕಹಿ' ಅನುಭವ ಎದುರಿಸಿದ ಹೆಣ್ಮಕ್ಕಳು ಕೂಡ 'ಮೀಟೂ' ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತಿದ್ದಾರೆ.

    ಅಲೋಕ್ ನಾಥ್ ಮೇಲೆ ಮತ್ತೊಂದು ಬಾಂಬ್ : ಅತ್ಯಾಚಾರಕ್ಕೆ ಪ್ರಯತ್ನ ಎಂದು ನಟಿ ಆರೋಪ ಅಲೋಕ್ ನಾಥ್ ಮೇಲೆ ಮತ್ತೊಂದು ಬಾಂಬ್ : ಅತ್ಯಾಚಾರಕ್ಕೆ ಪ್ರಯತ್ನ ಎಂದು ನಟಿ ಆರೋಪ

    Prakash Rai tweets about Me Too Campaign

    ರಾಷ್ಟ್ರಾದ್ಯಂತ 'ಮೀಟೂ ಅಭಿಯಾನ' ಸದ್ದು-ಸುದ್ದಿ ಮಾಡುತ್ತಿರುವಾಗಲೇ, ನಟ ಪ್ರಕಾಶ್ ರೈ ಒಂದು ಟ್ವೀಟ್ ಮಾಡಿದ್ದಾರೆ. 'ಮೀಟೂ ಅಭಿಯಾನ'ಕ್ಕೆ ತಮ್ಮ ಸಪೋರ್ಟ್ ಇದೆ ಎಂದು ಟ್ವೀಟ್ ಮೂಲಕ ಪ್ರಕಾಶ್ ರೈ ತಿಳಿಸಿದ್ದಾರೆ.

    'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ 'ತಬ್ಬಿಕೊಂಡು, ಮುತ್ತುಕೊಡಲು ಪ್ರಯತ್ನ ಮಾಡಿದ್ದು ನಿಜ', ಆದರೆ.. : ರಘು ದೀಕ್ಷಿತ್ ನೇರ ಸ್ಪಷ್ಟನೆ

    ''ಮೀಟೂ... ಇದು ಜೀವನದ ಎಲ್ಲಾ ಹಂತಗಳಲ್ಲೂ ಒಂಥರಾ ಸಾಂಕ್ರಾಮಿಕ... ನಮ್ಮ ಸಮಾಜದಲ್ಲಿ ಇದನ್ನ ಮಾಡುವುದು ಅವಶ್ಯಕ. ಇದರಿಂದ ಮಹಿಳೆಯರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ. ಹೊರಬಂದು ಎಲ್ಲವನ್ನೂ ಬಹಿರಂಗ ಪಡಿಸಿ, ನಿಮ್ಮಿಂದು ಇದು ಸಾಧ್ಯ'' ಎಂದು ಮಹಿಳೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

    ಮೀಟೂ ಅಭಿಯಾನದಿಂದಾಗಿ ದೇಶದಲ್ಲಿ ದಿನಕ್ಕೊಂದು ಪ್ರಕರಣ ಬಟಾ ಬಯಲಾಗುತ್ತಿದೆ. ಖ್ಯಾತನಾಮರ ಮುಖವಾಡ ಕಳಚಿ ಬೀಳುತ್ತಿದೆ.

    English summary
    Kannada Actor Prakash Rai has taken his twitter account to express his opinion about #MeToo Campaign.
    Thursday, October 11, 2018, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X