ವಿವಾಹ ವಾರ್ಷಿಕೋತ್ಸವ: ಪತ್ನಿ ಪೋನಿ ವರ್ಮಾ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?

ಬಹುಭಾಷಾ ನಟ ಪ್ರಕಾಶ್ ರಾಜ್ ದಂಪತಿಗೆ ಇಂದು ವಿಶೇಷವಾದ ದಿನ. ಖ್ಯಾತ ನಟ ಪ್ರಕಾಶ್ ರಾಜ್, ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ಮದುವೆಯಾದ ಸುದಿನ. ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ದಂಪತಿ 11ನೇ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಇದೆ ದಿನ ಅಂದರೆ 2010 ಆಗಸ್ಟ 24ರಂದು ಪ್ರಕಾಶ್ ರಾಜ್, ಪ್ರೇಯಸಿ ಪೋನಿ ವರ್ಮಾ ಅವರನ್ನು ವರಿಸಿದರು. ಅಂದಹಾಗೆ ಪ್ರಕಾಶ್ ರಾಜ್ ಅವರಿಗೆ ಇದು ಎರಡನೇ ಮದುವೆ.

ಪ್ರಕಾಶ್ ರಾಜ್ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೊದಲು ನಟಿ ಲಲಿತಾ ಕುಮಾರಿ ಜೊತೆ ವಿವಾಹ ಬಂಧನಕ್ಕೆ ಒಳಕ್ಕಾಗಿದ್ದರು. ಲಲಿತಾ ಕುಮಾರಿ ದಕ್ಷಿಣ ಭಾರತೀಯ ಸಿನಿಮಾದ ಖ್ಯಾತ ನಟಿ ಡಿಸ್ಕೋ ಶಾಂತಿ ಅವರ ಸಹೋದರಿ. 1994ರಲ್ಲಿ ಪ್ರಕಾಶ್ ರಾಜ್, ಲಲಿತಾ ಕುಮಾರಿ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ 15 ವರ್ಷಗಳಲ್ಲೇ ಪತ್ನಿಯಿಂದ ದೂರ ಆದರು. 2009ರಲ್ಲಿ ಪ್ರಕಾಶ್ ರಾಜ್ ಮೊದಲ ಪತ್ನಿ ಲಲಿತಾ ಅವರಿಂದ ವಿಚ್ಛೇದನ ಪಡೆದು ದೂರ ಆದರು. ಮುಂದೆ ಓದಿ...

ಪ್ರಕಾಶ್ ರಾಜ್-ಲಲಿತಾ ದಾಂಪತ್ಯಕ್ಕೆ ಇಬ್ಬರು ಮಕ್ಕಳು

ಪ್ರಕಾಶ್ ರಾಜ್-ಲಲಿತಾ ದಾಂಪತ್ಯಕ್ಕೆ ಇಬ್ಬರು ಮಕ್ಕಳು

ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮೇಘನಾ ಮತ್ತು ಪೂಜಾ. ಒಬ್ಬ ಮಗ ಇದ್ದರು. ಆದರೆ 2004ರಲ್ಲಿ ಪುತ್ರನನ್ನು ಕಳೆದುಕೊಂಡರು. ಕೆಲವು ವರ್ಷಗಳು ಸಂಸಾರ ಸಾಗಿದ ಪ್ರಕಾಶ್ ಮತ್ತು ಲಲಿತಾ ಇಬ್ಬರು ಬೇರೆಯಾದ ಬಳಿಕ ಪ್ರಕಾಶ್ ರಾಜ್ ನೃತ್ಯಗಾರ್ತಿ ಪೋನಿ ವರ್ಮಾ ಜೊತೆ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2010ರಲ್ಲಿ ಪೋನಿ ವರ್ಮಾ ಜೊತೆ ಮದುವೆ

2010ರಲ್ಲಿ ಪೋನಿ ವರ್ಮಾ ಜೊತೆ ಮದುವೆ

2010 ಆಗಸ್ಟ್ 24ರಂದು ಪ್ರಕಾಶ್ ರಾಜ್, ಪೋನಿ ವರ್ಮಾ ಕೈಹಿಡಿದರು. ಡಿಸಂಬರ್ 8ರಂದು ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ತಮ್ಮ ಮದುವೆಯನ್ನು 1955ರ ಹಿಂದು ವಿವಾಹ ಕಾಯಿದೆ ಪ್ರಕಾರ ಹೈದರಾಬಾದಿನಲ್ಲಿ ನೋಂದಾಯಿಸಿಕೊಂಡಿದ್ದರು. ಪ್ರಕಾಶ್ ರೈ ದಂಪತಿಗಳು ಮದುವೆ ಪತ್ರಗಳಿಗೆ ಸಹಿ ಹಾಕಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡರು. ನೋಂದಣಿ ಅರ್ಜಿಯಲ್ಲಿ ಪೋನಿ ವರ್ಮಾ ಅವರ ಹೆಸರು ರೇಷ್ಮಿ ವರ್ಮಾ ಎಂದು ಬರೆಯಲಾಗಿತ್ತು.

ಪೋನಿ ವರ್ಮಾ ಜೊತೆ ಆಪ್ತರಾಗಿದ್ದ ಪ್ರಕಾಶ್ ರಾಜ್

ಪೋನಿ ವರ್ಮಾ ಜೊತೆ ಆಪ್ತರಾಗಿದ್ದ ಪ್ರಕಾಶ್ ರಾಜ್

ಪೋನಿ ವರ್ಮಾ ಜೊತೆ ಪ್ರಕಾಶ್ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಡುವ ಎರಡು ವರ್ಷಗಳ ಮೊದಲೇ ಇಬ್ಬರು ತುಂಬಾ ಆಪ್ತರಾಗಿದ್ದರು. ಇಬ್ಬರ ಆಪ್ತ ಸಂಬಂಧ ಮೊದಲ ಪತ್ನಿ ದೂರ ಆಗಲು ಕಾರಣ ಎನ್ನುವ ಮಾತುಗಳು ಕೇಳಿಬಂದಿತ್ತು. ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುವ ಕನಸು ಕಾಂಡಿದ್ದ ಪ್ರಕಾಶ್ ರಾಜ್, ಪೋನಿ ಜೊತೆ ಮದುವೆ ಮುಂದೂಡುತ್ತಾ ಬಂದಿದ್ದರಂತೆ. ಬಳಿಕ 2010ರಲ್ಲಿ ಇಬ್ಬರು ಹಸೆಮಣೆ ಏರಿದರು. ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ದಂಪತಿಗೆ ಒಬ್ಬ ಮಗನಿದ್ದಾನೆ. 2015ರಲ್ಲಿ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮೊದಲ ಮಗುವನ್ನು ಸ್ವಾಗತಿಸಿದರು. ಮಗನಿಗೆ ವೇದಾಂತ್ ಎಂದು ಹೆಸರಿಟ್ಟಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ಪೋನಿ ವರ್ಮಾ ನೃತ್ಯ ನಿರ್ದೇಶನ

ಬಾಲಿವುಡ್ ಸಿನಿಮಾಗಳಿಗೆ ಪೋನಿ ವರ್ಮಾ ನೃತ್ಯ ನಿರ್ದೇಶನ

ಪೋನಿ ವರ್ಮಾ ಅವರು ಬಾಲಿವುಡ್‌ನ ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಂದನಿ ಚೌಕ್ ಟು ಚೈನಾ, ಭೂಲ್ ಭೂಲಯ್ಯ, ನಮಸ್ತೆ ಲಂಡನ್, ಚುಪ್ ಚುಪ್ ಕೆ, ಪದ್ಮಶ್ರೀ ಲಾಲು ಪ್ರಸಾದ್ ಯಾದವ್, ಹಂಗಾಮ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಪತ್ನಿ ಬಗ್ಗೆ ಪ್ರಕಾಶ್ ರಾಜ್ ಮಾತು

ಪತ್ನಿ ಬಗ್ಗೆ ಪ್ರಕಾಶ್ ರಾಜ್ ಮಾತು

ಇಂದು (ಆಗಸ್ಟ್ 24) ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಪ್ರಕಾಶ್ ರಾಜ್ ಪತ್ನಿ ಪೋನಿ ವರ್ಮಾ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದಾರೆ. "ಜೀವನದ ಅದ್ಭುತ ಸ್ನೇಹಿತೆ, ಲವರ್ ಮತ್ತು ಸಂಗಾತಿಯಾಗಿರುವುದಕ್ಕೆ ಧನ್ಯವಾದಗಳು ಡಾರ್ಲಿಂಗ್ ಪತ್ನಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಚಿತ್ರೀಕರಣ ವೇಳೆ ಗಾಯಗೊಂಡಿದ್ದ ನಟ

ಚಿತ್ರೀಕರಣ ವೇಳೆ ಗಾಯಗೊಂಡಿದ್ದ ನಟ

ಇತ್ತೀಚಿಗಷ್ಟೆ ಪ್ರಕಾಶ್ ಚಿತ್ರೀಕರಣವೇಳೆ ಗಾಯಕೊಂಡು ಆಸ್ಪತ್ರೆ ದಾಖಲಾಗಿದ್ದರು. ತಮಿಳು ನಟ ಧನುಷ್ ನಟನೆಯ 'D44' ಚಿತ್ರೀಕರಣದಲ್ಲಿ ಪ್ರಕಾಶ್ ನಿರತರಾಗಿದ್ದರು. ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಅಲ್ಲೇ ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೈದರಾಬಾದ್ ಆಸ್ಪತ್ರೆಗೆ ತೆರಳಿ ಸರ್ಜರಿ ಮಾಡಿಸಿಕೊಂಡರು. ಬಳಿಕ ಬೇಗ ಗುಣಮುಖರಾಗುವುದಾಗಿ ಹೇಳಿ ಫೋಟೋ ಶೇರ್ ಮಾಡಿದ್ದರು.

ಮತ್ತೆ ಚಿತ್ರೀಕರಣದಲ್ಲಿ ಭಾಗಿ

ಮತ್ತೆ ಚಿತ್ರೀಕರಣದಲ್ಲಿ ಭಾಗಿ

ಶಸ್ತ್ರಚಿಕಿತ್ಸೆಯ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಹಾಜರಾಗಿದ್ದಾರೆ. ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಇತ್ತೀಚಿಗಷ್ಟೆ ಮಧ್ಯ ಪ್ರದೇಶದಕ್ಕೆ ಹೊರಟಿರುವ ಫೋಟೋ ವೈರಲ್ ಆಗಿತ್ತು. ಮಧ್ಯಪ್ರದೇಶದ ಓರ್ಚಾದಲ್ಲಿ ಮಣಿರತ್ನಂ ಮುಂದಿನ ಶೆಡ್ಯೂಲ್ ಶೂಟಿಂಗ್ ಮಾಡ್ತಿದ್ದು, ಈ ಹಿನ್ನೆಲೆ ಚೆನ್ನೈನಿಂದ ಪ್ರಯಾಣ ಮಾಡಿದ್ದರು. ಈ ವೇಳೆ ಏರ್‌ಪೋರ್ಟ್‌ನಲ್ಲಿ ಮಣಿರತ್ನಂ, ಪ್ರಕಾಶ್ ರಾಜ್ ಹಾಗೂ ತಮಿಳು ನಟ ಕಾರ್ತಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವೊಂದು ವೈರಲ್ ಆಗಿತ್ತು.

More from Filmibeat

English summary
Actor Prakash Raj and Pony Verma celebrating their 11th wedding anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X