50ರ ಹರೆಯದಲ್ಲಿ ಗಂಡು ಮಗುವಿಗೆ ತಂದೆಯಾದ ಪ್ರಕಾಶ್ ರೈ

By Suneetha

ಕನ್ನಡಿಗ ಬಹುಭಾಷಾ ನಟ ಪ್ರಕಾಶ್ ರೈ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ. ಅದೇನಂತೀರಾ?, ಬಹುಮುಖ ಪ್ರತಿಭೆ ಪ್ರಕಾಶ್ ರೈ ಅವರು ಅಪ್ಪಾ ಆಗಿದ್ದಾರೆ. ಒಂದೆಡೆ ಇದೇ ಶುಕ್ರವಾರ ಪ್ರಕಾಶ್ ರೈ ಅಭಿನಯದ 'ದೇವರ ನಾಡಲ್ಲಿ' ಮತ್ತು 'ಪ್ರಿಯಾಂಕ' ಸಿನಿಮಾ ರಿಲೀಸ್ ಆದರೆ, ಇತ್ತ ಗಂಡು ಮಗುವಿಗೆ ತಂದೆಯಾಗಿರುವ ಖುಷಿ ಇನ್ನೊಂದೆಡೆ.

ಈ ಬಗ್ಗೆ ಖುದ್ದು ಪ್ರಕಾಶ್ ರಾಜ್ ಅವರೇ ಟ್ವೀಟ್ ಮಾಡಿದ್ದಾರೆ. 'ನನಗೆ ಗಂಡು ಮಗು ಆಗಿದೆ. ನಾನು ನನ್ನ ಹೆಂಡತಿ ಪೋನಿ ವರ್ಮಾ ಸಂತೋಷವಾಗಿದ್ದೇವೆ. ಈ ಸಂತಸದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆಶೀರ್ವದಿಸಿ ಎಂದು ಟ್ವೀಟ್ ಮಾಡಿದ್ದಾರೆ.['ದೇವರ ನಾಡಲ್ಲಿ' ಒಂದು ರೌಂಡ್ ಹಾಕಿ ಬರಲು ನೀವು ರೆಡಿನಾ?]

50 ನೇ ವಯಸ್ಸಿನಲ್ಲಿ ತಂದೆಯಾದ ನಟ ಪ್ರಕಾಶ್ ರಾಜ್ ಅವರಿಗೆ ಇಡೀ ಚಿತ್ರರಂಗದವರು ಮತ್ತು ಅಭಿಮಾನಿಗಳು ಅಭಿನಂದಿಸಿದ್ದಾರೆ. ನಟ ಪ್ರಕಾಶ್ ಮತ್ತು ಪೋನಿ ದಂಪತಿಗಳಿಗೆ ಇದು ಮೊದಲ ಮಗು.[ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?]

ನಟ ಪ್ರಕಾಶ್ ರಾಜ್ ಅವರು 2009 ರಲ್ಲಿ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ವಿಚ್ಛೇದನ ನೀಡಿದ ಬಳಿಕ 2010 ರಲ್ಲಿ ಬಾಲಿವುಡ್ ನ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಕಾಶ್ ರೈ ಅವರ ಮೊದಲ ಪತ್ನಿಗೆ ಇಬ್ಬರು ಪುತ್ರಿಯರಿದ್ದಾರೆ.[ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ!]

2004 ರಲ್ಲಿ ಪ್ರಕಾಶ್ ರಾಜ್ ಅವರ 5 ವರ್ಷದ ಮಗ ಗಾಳಿಪಟ ಹಾರಿಸುವಾಗ ಸಂಭವಿಸಿದ ಅವಘಡದಲ್ಲಿ ಸಾವನ್ನಪ್ಪಿದ್ದಾರೆ.

More from Filmibeat

English summary
Actor Prakash Raj is on cloud nine now. The actor-director is blessed with a boy. This is the first child of Prakash Raj and Pony Verma. The actor took to Twitter to share his happiness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X