For Quick Alerts
  ALLOW NOTIFICATIONS  
  For Daily Alerts

  Prakash Raj: 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಸಿನಿಮಾಗಳು ಯಾವಾಗ ಎಂದ ಪ್ರಕಾಶ್ ರಾಜ್?

  |

  ಪ್ರಕಾಶ್ ರಾಜ್‌ಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಬಾರಿ ತಿರುಗಿಬೀಳುತ್ತಲೇ ಇದ್ದಾರೆ. ಪ್ರಧಾನಿ ಹಾಗೂ ಕೇಂದ್ರ ನಡೆಯನ್ನು ಟೀಕೆ ಮಾಡುತ್ತಲೇ ಇದ್ದಾರೆ. ಇದು ಹೊಸದೇನಲ್ಲ. ಆದರೆ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದ ಬಳಿಕ ಪ್ರಕಾಶ್ ರಾಜ್ ಮತ್ತೆ ಕಿಡಿಕಾರಿದ್ದಾರೆ. ಈ ಬಾರಿ 6 ಸಿನಿಮಾಗಳ ಪಟ್ಟಿಯನ್ನು ಲಿಸ್ಟ್ ಮಾಡಿದ್ದಾರೆ.

  Recommended Video

  The Kashmir files public opinion | ಈ ಡೈರೆಕ್ಟರ್ ನಿಜವಾದ ಗಂಡಸು

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಕುರಿತು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ. ಈ ಸಿನಿಮಾ ಪ್ರಕಾಶ್ ರಾಜ್‌ಗೆ ಹಿಡಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿತ್ತಿದ್ದಾರೆ.

  Gujarat Files: 'ದಿ ಕಾಶ್ಮೀರ್ ಫೈಲ್ಸ್' ಬೆನ್ನಲ್ಲೇ 'ಗುಜರಾತ್ ಫೈಲ್ಸ್' ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕGujarat Files: 'ದಿ ಕಾಶ್ಮೀರ್ ಫೈಲ್ಸ್' ಬೆನ್ನಲ್ಲೇ 'ಗುಜರಾತ್ ಫೈಲ್ಸ್' ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕ

  ಪ್ರಕಾಶ್ ಮತ್ತೊಂದು ಟ್ವೀಟ್ ಮಾಡಿದ್ದು, 'ದಿ ಕಾಶ್ಮೀರ್ ಫೈಲ್ಸ್' ಅಂತಯೇ ಇನ್ನೂ 6 ಸಿನಿಮಾಗಳು ಬರಬೇಕು ಎಂದು ದೊಡ್ಡ ಪಟ್ಟಿಯನ್ನೇ ರಿಲೀಸ್ ಮಾಡಿದ್ದಾರೆ. ಪ್ರಕಾಶ್ ರಾಜ್ ಮಾಡಿದ ಈ ಟ್ವೀಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ದೊಡ್ಡ ಚರ್ಚೆನೇ ಆಗುತ್ತಿದೆ. ಹಾಗಿದ್ದರೆ, ಪ್ರಕಾಶ್ ರಾಜ್ ಪಟ್ಟಿ ಮಾಡಿದ ಆ ಆರು ಸಿನಿಮಾ ಯಾವುದು? ತಿಳಿಯಲು ಮುಂದೆ ಓದಿ.

  ಪ್ರಕಾಶ್ ರಾಜ್ ಹೇಳಿದ 6 ಸಿನಿಮಾ ಯಾವುದು?

  ಪ್ರಕಾಶ್ ರಾಜ್ ಹೇಳಿದ 6 ಸಿನಿಮಾ ಯಾವುದು?

  ಬಹುಭಾಷಾ ನಟ ಪ್ರಕಾಶ್ ರಾಜ್ 'ದಿ ಕಾಶ್ಮೀರ್ ಫೈಲ್ಸ್' ಬಿಡುಗಡೆಗೊಂಡ ಬಿಳಿಕ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಕಾಶ್ಮೀರ್ ಫೈಲ್ಸ್ ಅಂತೆಯೇ ಇನ್ನೂ ಆರು ಸಿನಿಮಾಗಳು ಯಾವಾಗ ಬರುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕಾಶ್ ರಾಜ್ ಪ್ರಕಾರ, 'ಗೋದ್ರಾ ಫೈಲ್ಸ್', 'ದೆಹಲಿ ಫೈಲ್ಸ್', 'ಜಿಎಸ್‌ಟಿ ಫೈಲ್ಸ್', ' ಡಿಮಾನಿಟೈಜೇಷನ್ ಫೈಲ್ಸ್', ಕೋವಿಡ್ ಫೈಲ್ಸ್ ಹಾಗೂ 'ಗಂಗಾ ಫೈಲ್ಸ್' ಈ ಆರೂ ಸಿನಿಮಾಗಳು ಯಾವಾಗ ಬರುತ್ತೆ ಎನ್ನುವ ಅರ್ಥದಲ್ಲಿ ಕೇಳಿದ್ದಾರೆ. " ನಿರ್ಮಾಪಕರಾಗಿ ಬದಲಾದ ಪ್ರೀತಿಯ ಸುಪ್ರೀಂ ನಟರೇ, ನೀವು ಈ ಸಿನಿಮಾಗಳನ್ನು ಯಾವಾಗ ಮಾಡುತ್ತೀರಾ?" ಎಂದು ಹೇಳಿದ್ದಾರೆ.

  The Kashmir Files : 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಲಿಂಕ್ ಕ್ಲಿಕ್ ಮಾಡಿದ್ರೆ, ನಿಮ್ಮ ಖಾತೆಯ ಹಣ ಚೆಕ್ ಮಾಡ್ಕೊಳ್ಳಿ!The Kashmir Files : 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಲಿಂಕ್ ಕ್ಲಿಕ್ ಮಾಡಿದ್ರೆ, ನಿಮ್ಮ ಖಾತೆಯ ಹಣ ಚೆಕ್ ಮಾಡ್ಕೊಳ್ಳಿ!

  ಕಾಶ್ಮೀರ್ ಫೈಲ್ಸ್ ಬಗ್ಗೆ ಟ್ವೀಟ್

  ಈ ಟ್ವೀಟ್‌ಗೂ ಮುನ್ನ ಪ್ರಕಾಶ್ ರಾಜ್ ಹಲವು ಟ್ವೀಟ್‌ಗಳನ್ನು ಮಾಡಿದ್ದರು. "ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದು ಏನಕ್ಕೆ? ಇದು ಗಾಯವನ್ನು ದೊಡ್ಡದು ಮಾಡುವುದಕ್ಕೋ? ಇಲ್ಲಾ ದ್ವೇಷ ಹರಡುತ್ತಿದೆಯೋ?" ಎಂದು ಪ್ರಶ್ನೆ ಮಾಡಿದ್ದರು. ಈಗ ಮತ್ತೆ ' ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಅಂತೆಯೇ ಯಾವ್ಯಾವ ಸಿನಿಮಾ ಬರೆಬೇಕೆಂದು ಟ್ವೀಟ್ ಮಾಡಿದ್ದಾರೆ. ಇತ್ತ ಪ್ರಕಾಶ್ ರಾಜ್ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಕಾಶ್‌ ರಾಜ್‌ಗೆ ಟಾಂಗ್ ಕೊಟ್ಟಿದ್ದಾರೆ.

  ಪ್ರಕಾಶ್‌ ರಾಜ್‌ಗೆ ನೆಟ್ಟಿಗರು ಪ್ರಶ್ನೆ

  ಪ್ರಕಾಶ್‌ ರಾಜ್‌ಗೆ ನೆಟ್ಟಿಗರು ಪ್ರಶ್ನೆ

  ಪ್ರಕಾಶ್ ರಾಜ್ ಸರಣಿ ಟ್ವೀಟ್‌ನಲ್ಲಿ ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದು ಬಿಜೆಪಿ ಪಕ್ಷಕ್ಕೆ ಮಾಡಿದ ಸಿನಿಮಾನಾ ಅಂತ ಪ್ರಶ್ನೆ ಮಾಡಿದ್ದರು. ಇಂದು (ಮಾರ್ಚ್ 19) ಮಾಡಿದ ಟ್ವೀಟ್‌ನಲ್ಲಿ ಸುಪ್ರೀಂ ಎನ್ನುವ ಪದವನ್ನು ಬಳಿಸಿದ್ದರು. ಇದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇತ್ತ ನೆಟ್ಟಿಗರು ಪ್ರಕಾಶ್‌ ರಾಜ್‌ಗೆ ಟಾಂಗ್ ಕೊಟ್ಟಿದ್ದಾರೆ. " ನೀವೂ ಸಿನಿಮಾ ಮಾಡಿ. ನೀವೂ ಕೂಡ ನಿರ್ಮಾಪಕರಾಗಿ ಬದಲಾದ ಸುಪ್ರೀಂ ಹೀರೊ ತಾನೇ." ಎಂದಿದ್ದಾರೆ. " ಇನ್ನೊಬ್ಬರು ನೀವೇ ಸಿನಿಮಾ ಮಾಡಿ" ಎಂದಿದ್ದಾರೆ.

  The Kashmir Files: ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ 'ದಿ ಕಾಶ್ಮೀರಿ ಫೈಲ್ಸ್'The Kashmir Files: ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ 'ದಿ ಕಾಶ್ಮೀರಿ ಫೈಲ್ಸ್'

  'ದಿ ಕಾಶ್ಮೀರ್ ಫೈಲ್ಸ್' 100 ಕೋಟಿ ಗಳಿಕೆ

  'ದಿ ಕಾಶ್ಮೀರ್ ಫೈಲ್ಸ್' 100 ಕೋಟಿ ಗಳಿಕೆ

  'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ಬಗ್ಗೆ ಆರೋಪ ಹಾಗೂ ಪ್ರತ್ಯಾರೋಪ ಕೇಳಿ ಬರುತ್ತಿದ್ದರೂ, 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೆ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ದಾಖಲೆ ಮಾಡಿದೆ. ಸುಮಾರು 100 ಕೋಟಿ ಈಗಾಗಲೇ ಗಳಿಕೆ ಮಾಡಿದೆ.

  English summary
  Prakash Raj Comments on The Kashmir Files Movie. Godhra Files, delhi Files, GST Files, Demonetisation files, Ganga Files, covid Files these movies come in the form of Kashmir Files he says.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X