For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮದುವೆಯಾದ ನಟ ಪ್ರಕಾಶ್ ರಾಜ್: ಫೋಟೋ ವೈರಲ್

  |

  ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ಮದುವೆಯಾಗಿದ್ದಾರೆ. ಇತ್ತೀಚಿಗಷ್ಟೆ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಪ್ರಕಾಶ್ ರಾಜ್ ಮತ್ತೆ ಮದುವೆ ಆದ್ರಾ ಅಂತ ಅಚ್ಚರಿ ಪಡಬೇಡಿ. ಅವರು ಮತ್ತೆ ಮದುವೆಯಾಗಿದ್ದು ನಿಜ, ಆದರೆ ಎರಡನೇ ಪತ್ನಿ ಜೊತೆಯೇ ಎನ್ನುವುದು ಅಸಲಿ ವಿಷಯ.

  ನಟ ಪ್ರಕಾಶ್ ರಾಜ್ ಮತ್ತು ಪತ್ನಿ ಪೋನಿ ವರ್ಮಾ ದಂಪತಿ ಇತ್ತೀಚಿಗಷ್ಟೆ ಅಂದರೆ ಆಗಸ್ಟ್ 24ರಂದು 11ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಅದ್ದೂರಿಯಾಗಿ ನಡೆದ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಕಾಶ್ ರಾಜ್ ಪತ್ನಿ ಪೋನಿ ವರ್ಮಾ ಜೊತೆ ಮತ್ತೆ ಮದುವೆಯಾದರು. ಈ ಫೋಟೋಗಳನ್ನು ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಫೋಟೋಗಳು ವೈರಲ್ ಆಗಿವೆ.

  ವಿವಾಹ ವಾರ್ಷಿಕೋತ್ಸವ: ಪತ್ನಿ ಪೋನಿ ವರ್ಮಾ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?ವಿವಾಹ ವಾರ್ಷಿಕೋತ್ಸವ: ಪತ್ನಿ ಪೋನಿ ವರ್ಮಾ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?

  ಸುಂದರ ಫೋಟೋಗಳನ್ನು ಶೇರ್ ಮಾಡುವ ಜೊತೆಗೆ ಪೋನಿ ವರ್ಮಾ ಜೊತೆ ಮತ್ತೆ ಮದುವೆ ಆಗಿರುವುದಾಗಿ ಹೇಳಿದ್ದಾರೆ. ಪುತ್ರ ವೇದಾಂತ್ ಗಾಗಿ ಮತ್ತೊಮ್ಮೆ ಮದುವೆ ಆದೆವು ಎಂದು ಪ್ರಕಾಶ್ ಬಹಿರಂಗಪಡಿಸಿದ್ದಾರೆ. ಪ್ರಕಾಶ್ ರಾಜ್, ಪೋನಿ ವರ್ಮಾ ಅವರನ್ನು ಮತ್ತೊಮ್ಮೆ ಮದುವೆಯಾಗಿರುವುದಕ್ಕೆ ಪುತ್ರ ವೇದಂತ್ ಸಾಕ್ಷಿಯಾಗಿದ್ದಾನೆ. ಮುಂದೆ ಓದಿ...

  ಮತ್ತೆ ಮದುವೆಯಾಗಿದ್ದೇವೆ- ಪ್ರಕಾಶ್ ರಾಜ್

  ಮತ್ತೆ ಮದುವೆಯಾಗಿದ್ದೇವೆ- ಪ್ರಕಾಶ್ ರಾಜ್

  ಮದುವೆ ವಾರ್ಷಿಕೋತ್ಸವ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿ ಪ್ರಕಾಶ್ ರಾಜ್, "ನಾವು ಇಂದು ರಾತ್ರಿ ಮತ್ತೆ ಮದುವೆಯಾಗಿದ್ದೇವೆ. ಏಕೆಂದರೆ ನಮ್ಮ ಮಗ ವೇದಾಂತ್ ನಮ್ಮ ಮದುವೆಯನ್ನು ನೋಡಲು ಬಯಸಿದನು. ಹಾಗಾಗಿ. ಫ್ಯಾಮಿಲಿ ಕ್ಷಣ" ಎಂದು ಬರೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ದಂಪತಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ಮೂಲಕ ವಿಶ್ ಮಾಡುತ್ತಿದ್ದಾರೆ.

  ಪತ್ನಿಯ ಬಗ್ಗೆ ಪ್ರಕಾಶ್ ರಾಜ್ ಪ್ರೀತಿ ಮಾತು

  ಪತ್ನಿಯ ಬಗ್ಗೆ ಪ್ರಕಾಶ್ ರಾಜ್ ಪ್ರೀತಿ ಮಾತು

  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಪ್ರಕಾಶ್ ರಾಜ್ ಪತ್ನಿ ಪೋನಿ ವರ್ಮಾ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದರು. "ಜೀವನದ ಅದ್ಭುತ ಸ್ನೇಹಿತೆ, ಲವರ್ ಮತ್ತು ಸಂಗಾತಿಯಾಗಿರುವುದಕ್ಕೆ ಧನ್ಯವಾದಗಳು ಡಾರ್ಲಿಂಗ್ ಪತ್ನಿ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು" ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

  ಗಾಯದಿಂದ ಚೇತರಿಸಿಕೊಂಡ ಪ್ರಕಾಶ್ ರಾಜ್: ಮಧ್ಯಪ್ರದೇಶದ ಕಡೆ ಪ್ರಯಾಣಗಾಯದಿಂದ ಚೇತರಿಸಿಕೊಂಡ ಪ್ರಕಾಶ್ ರಾಜ್: ಮಧ್ಯಪ್ರದೇಶದ ಕಡೆ ಪ್ರಯಾಣ

  2010ರಲ್ಲಿ ಪೋನಿ ವರ್ಮಾ ಜೊತೆ ಮದುವೆ

  2010ರಲ್ಲಿ ಪೋನಿ ವರ್ಮಾ ಜೊತೆ ಮದುವೆ

  2010 ಆಗಸ್ಟ್ 24ರಂದು ಪ್ರಕಾಶ್ ರಾಜ್, ಪೋನಿ ವರ್ಮಾ ಕೈಹಿಡಿದರು. ಡಿಸಂಬರ್ 8ರಂದು ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ತಮ್ಮ ಮದುವೆಯನ್ನು 1955ರ ಹಿಂದು ವಿವಾಹ ಕಾಯಿದೆ ಪ್ರಕಾರ ಹೈದರಾಬಾದಿನಲ್ಲಿ ನೋಂದಾಯಿಸಿಕೊಂಡಿದ್ದರು. ಪ್ರಕಾಶ್ ರೈ ದಂಪತಿ ಮದುವೆ ಪತ್ರಗಳಿಗೆ ಸಹಿ ಹಾಕಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡರು. ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ದಂಪತಿಗೆ ಒಬ್ಬ ಮಗನಿದ್ದಾನೆ. 2015ರಲ್ಲಿ ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮೊದಲ ಮಗುವನ್ನು ಸ್ವಾಗತಿಸಿದರು. ಮಗನಿಗೆ ವೇದಾಂತ್ ಎಂದು ಹೆಸರಿಟ್ಟಿದ್ದಾರೆ.

  ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಪೋನಿ ವರ್ಮಾ

  ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಪೋನಿ ವರ್ಮಾ

  ಪೋನಿ ವರ್ಮಾ ಅವರು ಬಾಲಿವುಡ್‌ನ ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಂದನಿ ಚೌಕ್ ಟು ಚೈನಾ, ಭೂಲ್ ಭೂಲಯ್ಯ, ನಮಸ್ತೆ ಲಂಡನ್, ಚುಪ್ ಚುಪ್ ಕೆ, ಪದ್ಮಶ್ರೀ ಲಾಲು ಪ್ರಸಾದ್ ಯಾದವ್, ಹಂಗಾಮ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ.

  2009ರಲ್ಲಿ ಪತ್ನಿಯಿಂದ ದೂರ ಆದ ಪ್ರಕಾಶ್ ರಾಜ್

  2009ರಲ್ಲಿ ಪತ್ನಿಯಿಂದ ದೂರ ಆದ ಪ್ರಕಾಶ್ ರಾಜ್

  ಪೋನಿ ವರ್ಮಾ ಜೊತೆ ಹಸೆಮಣೆ ಏರುವ ಮೊದಲು ಪ್ರಕಾಶ್ ರಾಜ್ ನಟಿ ಲಲಿತಾ ಕುಮಾರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಲಲಿತಾ ಕುಮಾರಿ ದಕ್ಷಿಣ ಭಾರತೀಯ ಸಿನಿಮಾದ ಖ್ಯಾತ ನಟಿ ಡಿಸ್ಕೋ ಶಾಂತಿ ಅವರ ಸಹೋದರಿ. 1994ರಲ್ಲಿ ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಮದುವೆಯಾಗಿದ್ದರು. ಆದರೆ ಮದುವೆಯಾಗಿ 15 ವರ್ಷಗಳಲ್ಲೇ ಪ್ರಕಾಶ್ ಪತ್ನಿಯಿಂದ ದೂರ ಆದರು. 2009ರಲ್ಲಿ ಪ್ರಕಾಶ್ ರಾಜ್ ಮೊದಲ ಪತ್ನಿ ಲಲಿತಾ ಅವರಿಂದ ವಿಚ್ಛೇದನ ಪಡೆದು ಬೇರೆ ಆದರು. ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಮೇಘನಾ ಮತ್ತು ಪೂಜಾ. ಒಬ್ಬ ಮಗ ಇದ್ದರು. ಆದರೆ 2004ರಲ್ಲಿ ಪುತ್ರನನ್ನು ಕಳೆದುಕೊಂಡರು.

  English summary
  Actor Prakash Raj and his wife Pony Verma Married Again on their 11th wedding anniversary; Here is why.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X