ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿ ಚಿತ್ರವಾ ? ಕೇಂದ್ರ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕಿಡಿ..!

ಪಹಲ್ಗಾಮ್‌ನಲ್ಲಿ 26 ಜನರ ಬಲಿ ಪಡೆದ ಉಗ್ರರಿಗಾಗಿ ಭದ್ರತಾ ಪಡೆಗಳು ತೀವೃ ಶೋಧ ನಡೆಸುತ್ತಿವೆ. ಅಮಾಯಕರ ಪ್ರಾಣ ತೆಗೆದ ಉಗ್ರರ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಣಿವೆಯಾದ್ಯಂತ ಭದ್ರತಾ ಚಟುವಟಿಕೆಗಳು ಚುರುಕುಗೊಂಡಿವೆ. ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿರುವ ಭದ್ರತಾ ಪಡೆಗಳು, ಪೂಂಚ್‌ ಜಿಲ್ಲೆಯಲ್ಲಿ ಅಡಗುತಾಣದ ಮೇಲೆ ದಾಳಿ ನಡೆಸಿದ್ದು ಭಯೋತ್ಪಾದಕರ ಅಡಗುತಾಣವನ್ನು ಧ್ವಂಸಗೊಳಿಸಲಾಗಿದೆ.

ಸ್ಥಳದಿಂದ ಐದು ಸ್ಫೋಟಕ ಸಾಧನಗಳು ಮತ್ತು ವೈರ್‌ಲೆಸ್‌ ಸೆಟ್‌ಗಳು ಪತ್ತೆಯಾಗಿದ್ದು, ಪರಾರಿಯಾಗಿರುವ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಇಂದು ವರದಿಯಾಗಿದೆ. ಇನ್ನು ಸದಾ ಭಾರತದೊಂದಿಗೆ ಒಂದಿಲ್ಲೊಂದು ವಿಚಾರವಾಗಿ ಕಾಲುಕೆರೆದುಕೊಂಡು ಜಗಳಕ್ಕೆ ಪಾಕಿಸ್ತಾನ ನಿಂತರೂ ಕೂಡ ಅಲ್ಲಿನ ಕಲಾವಿದರು ಇಲ್ಲಿ ಬಂದು ಅಭಿನಯಿಸಿ ಹೋಗುತ್ತಿದ್ದರು. ಭಾರತದ ಹಾಡುಗಳಿಗೆ ಧ್ವನಿಯಾಗುತ್ತಿದ್ದರು.

Prakash Raj on Abir Gulaal Films can t be banned unless it s something extreme

ಆದರೆ ಕೆಲ ವರ್ಷಗಳ ಹಿಂದೆ ಇವರನ್ನು ಕೂಡ ಗಡಿಪಾರು ಮಾಡಲಾಗಿದೆ. ಅವರೆಷ್ಟೇ ದೊಡ್ಡವರಾದರು ಕೂಡ ಶಾಂತಿ ಕದಡುವ ಪಾಕಿಸ್ತಾನದಿಂದ ಬಂದ ಕಾರಣಕ್ಕೆ ಎಲ್ಲರನ್ನೂ ಬ್ಯಾನ್ ಮಾಡಲಾಗಿದೆ. ಆದರೂ ಕೂಡ ಅವರನ್ನು ಕರೆತಂದು ಬಾಲಿವುಡ್‌ನವರು ಅಬೀರ್ ಗುಲಾಲ್ ಎಂಬ ಚಿತ್ರವನ್ನು ಮಾಡಿದ್ಧಾರೆ. ವಾಣಿ ಕಪೂರ್ ಈ ಚಿತ್ರದ ನಾಯಕಿ.

ಬಹುಶಃ ಪಹಲ್ಗಾಮ್‌ನಲ್ಲಿ ದಾಳಿ ನಡೆಯದೇ ಇದ್ದಿದ್ದರೆ ಈ ಚಿತ್ರದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ ? ಆದರೆ ಈಗ ಈ ಚಿತ್ರದ ಬಿಡುಗಡೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. ಅಬೀರ್ ಗುಲಾಲ್ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ವಾಣಿ ಕಪೂರ್ ತಮ್ಮ ಚಿತ್ರದ ಎಲ್ಲ ಪೋಸ್ಟರ್‌ ಗಳನ್ನು ತಮ್ಮ ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ಧಾರೆ.

ಇದರ ನಡುವೆ ಇದೀಗ ಅಬೀರ್ ಗುಲಾಲ್ ಚಿತ್ರದ ಪರವಾಗಿ ಫವಾದ್ ಖಾನ್ ಪರವಾಗಿ ಪ್ರಕಾಶ್ ರಾಜ್ ವಕಾಲತ್ತು ವಹಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ. ಹೌದು, ದಿ ಲಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ 'ಅಬೀರ್ ಗುಲಾಲ್' ಚಿತ್ರವನ್ನು ನಿಷೇಧ ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಕಾಶ್ ರಾಜ್ ಯಾವುದೇ ಚಿತ್ರವನ್ನು ನಿಷೇಧಿಸುವುದನ್ನು ನಾನು ವಿರೋಧ ಮಾಡುತ್ತೇನೆ ಎಂದು ಹೇಳಿದ್ದಾರೆ. ಚಿತ್ರವನ್ನು ನಿಷೇಧಿಸುವ ಕುರಿತು ನಿರ್ಧಾರ ಮಾಡುವ ಹಕ್ಕು ಜನರಿಗಿದೆ ಅವರೇ ನಿರ್ಧರಿಸಲಿ ಎಂದಿರುವ ಪ್ರಕಾಶ್ ರಾಜ್ ನೀಲಿ ಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಚಿತ್ರವಾದರೆ ನಿಷೇಧಿಸಿ ಅದನ್ನು ಹೊರತು ಪಡಿಸಿದರೆ ಬೇರೆ ಯಾವ ಚಿತ್ರವನ್ನು ಕೂಡ ನಿಷೇಧಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ಧಾರೆ.

More from Filmibeat

English summary
"Fawad Khan's Comeback Film Abir Gulaal BANNED in India After Pahalgam Incident! Vaani Kapoor co-stars. Set to release May 9, now shelved. Prakash Raj finally breaks his silence—click to read his fiery response
Read more about: prakash raj filmibeat news ban
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X