For Quick Alerts
  ALLOW NOTIFICATIONS  
  For Daily Alerts

  'ಯು' ಪ್ರಮಾಣಪತ್ರಕ್ಕೆ ಪ್ರಕಾಶ್ ರಾಜ್ ಹೆಚ್ಚಿನ ಒತ್ತು ಕೊಡೋದ್ಯಾಕೆ?

  By Suneetha
  |

  ಪ್ರತಿಭಾವಂತ ನಟ ಪ್ರಕಾಶ್ ರಾಜ್ ಅವರ ನಿರ್ದೇಶನದ ಸಿನಿಮಾಗಳು ಯಾವಾಗಲೂ ವಿಭಿನ್ನವಾಗಿರುತ್ತವೆ. ಅವರಿಗೆ ಅದ್ಧೂರಿ ಸಿನಿಮಾಗಳೆಂದರೆ ಅಲರ್ಜಿ, ಅದಕ್ಕಿಂತ ಭಾವನೆಗಳನ್ನು ಉಕ್ಕಿಸುವ ಸಿನಿಮಾಗಳ ಕಡೆ ಹೆಚ್ಚಿನ ಒಲವು ತೋರುತ್ತಾರೆ.

  ತಮಿಳು-ಮಲಯಾಳಂ ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್ ಮಾಡಿ ಕನ್ನಡ ಸಿನಿಪ್ರಿಯರಿಗೂ ಮೆಚ್ಚುಗೆಯಾಗುವಂತೆ ಮಾಡುವ ಪ್ರಕಾಶ್ ರಾಜ್ ಇದೀಗ, ಮಲಯಾಳಂ 'ಶಟರ್' ಚಿತ್ರವನ್ನು ಕನ್ನಡಕ್ಕೆ 'ಇದೊಳ್ಳೆ ರಾಮಾಯಣ' ಎಂದಾಗಿಸಿದ್ದಾರೆ.

  'ಇದೊಳ್ಳೆ ರಾಮಾಯಣ' ಬಿಡುಗಡೆಗೆ ಸಿದ್ಧವಾಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ತೆರೆ ಕಾಣಲಿದೆ. ಅಂದಹಾಗೆ ಸೆನ್ಸಾರ್ ಅಂಗಳಕ್ಕೆ ಕಾಲಿಟ್ಟ 'ಇದೊಳ್ಳೆ ರಾಮಾಯಣ' 'ಯು' ಪ್ರಮಾಣಪತ್ರವನ್ನು ಪಡೆದುಕೊಂಡಿದೆ.[ದಸರಾ ಹಬ್ಬಕ್ಕೆ ಪ್ರಕಾಶ್ ರಾಜ್ ಕಡೆಯಿಂದ ದೊಡ್ಡ ಉಡುಗೊರೆ]

  ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದ್ದು, ಕನ್ನಡದಲ್ಲಿ 'ಇದೊಳ್ಳೆ ರಾಮಾಯಣ' ಮತ್ತು ತೆಲುಗಿನಲ್ಲಿ 'ಮನವೂರಿ ರಾಮಾಯಣ' ಎಂಬ ಹೆಸರಿನಲ್ಲಿ ಅಕ್ಟೋಬರ್ 7 ರಂದು ತೆರೆ ಕಾಣಲಿದೆ. ಇನ್ನು ಈ ಸಿನಿಮಾದ ಬಗ್ಗೆ ನಟ ಪ್ರಕಾಶ್ ರೈ ಅವರು ಏನಂತಾರೆ. ಮುಂದೆ ಓದಿ.....

  ಬದಲಾವಣೆಯೇ ಈ ಸಿನಿಮಾದ ಜೀವಾಳ

  ಬದಲಾವಣೆಯೇ ಈ ಸಿನಿಮಾದ ಜೀವಾಳ

  'ನಮಗೆ ರಾಮಾಯಣ ಎಂದರೆ ರಾಮ, ಸೀತೆ ಮತ್ತು ರಾವಣ ನೆನಪಾಗುತ್ತಾರೆ. ಎಷ್ಟೋ ಪರಿಸ್ಥಿತಿಗಳಲ್ಲಿ ನಾವು ರಾಮಾಯಣದ ಪಾತ್ರಧಾರಿಗಳಾಗಿ ಬಿಡುತ್ತೇವೆ. ರಾಮ ಆಗುವುದು ಇಷ್ಟ, ಆದರೆ ನಮಗೆ ಗೊತ್ತಿಲ್ಲದಂತೆ ಹಲವು ಬಾರಿ ನಮ್ಮೊಳಗೆ ರಾವಣ ಪ್ರವೇಶ ಮಾಡಿರುತ್ತಾನೆ. ನಮ್ಮ ಮಾಮೂಲಿ ಜೀವನದಿಂದ, ಬೇರೆ ದಾರಿ ಹಿಡಿದು ಅಹಿತಕರ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಾಗ, ಅದನ್ನು ಅರಿತುಕೊಂಡು ಹೊಸ ವ್ಯಕ್ತಿಯಾಗಿ ಬಾಳುವುದೇ ಇದಕ್ಕೆ ಪರಿಹಾರ. ಅದ್ದರಿಂದ ಬದಲಾವಣೆ ಎಂಬುದನ್ನು ಈ ಇಡೀ ಸಿನಿಮಾದಲ್ಲಿ ಪ್ರಮುಖವಾಗಿ ತೋರಿಸಲಾಗಿದೆ. ಎನ್ನುತ್ತಾರೆ ನಟ ಪ್ರಕಾಶ್ ರಾಜ್ ಅವರು.['ಇದೊಳ್ಳೆ ರಾಮಾಯಣ' ಅಂತ ನೀವು ತಲೆ ಚಚ್ಚಿಕೊಳ್ಳುವ ಹಾಗಿಲ್ಲ.!]

  'ಯು' ಪ್ರಮಾಣ ಪತ್ರ ಪಡೆಯಬೇಕೆಂಬುದು ಪ್ರಕಾಶ್ ನಿಯಮ

  'ಯು' ಪ್ರಮಾಣ ಪತ್ರ ಪಡೆಯಬೇಕೆಂಬುದು ಪ್ರಕಾಶ್ ನಿಯಮ

  ಎಲ್ಲಾ ವಯಸ್ಸಿನವರು ನೋಡಬಹುದಾದ ಸಿನಿಮಾವನ್ನು ನಿರ್ಮಿಸುವುದರಲ್ಲಿ ಪ್ರಕಾಶ್ ರಾಜ್ ಬಹಳ ನಿಸ್ಸೀಮರು. ಪ್ರಕಾಶ್ ಅವರ ಈ ಹಿಂದಿನ ಕೆಲವು ಸಿನಿಮಾಗಳು ಕೂಡ 'ಯು' ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇನ್ನು ಪ್ರಕಾಶ್ ಅವರು ಮಾಡುವ ಎಲ್ಲಾ ಸಿನಿಮಾಗಳಿಗೂ 'ಯು' ಪ್ರಮಾಣಪತ್ರ ದೊರೆಯಬೇಕೆಂದು ಅವರು ನಿಯಮ ಹಾಕಿಕೊಂಡಿದ್ದಾರಂತೆ.['ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ]

  ವೈಶ್ಯೆಯ ಪಾತ್ರದಲ್ಲಿ ಪ್ರಿಯಾಮಣಿ

  ವೈಶ್ಯೆಯ ಪಾತ್ರದಲ್ಲಿ ಪ್ರಿಯಾಮಣಿ

  ಇನ್ನು ಈ ಚಿತ್ರದಲ್ಲಿ ನಟಿ ಪ್ರಿಯಾಮಣಿ ಅವರು ವೈಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನು ಕೂಡ ಬರೀ ಒಂದೇ ರೀತಿಯಲ್ಲದೇ, ಬೇರೆ ಬೇರೆ ಆಯಾಮಗಳಲ್ಲಿ ಮತ್ತು ಸುಂದರವಾಗಿ ತೋರಿಸಬಹುದು ಅನ್ನೋದನ್ನ ಪ್ರಕಾಶ್ ಅವರು ಈ ಸಿನಿಮಾದ ಮೂಲಕ ತೋರಿಸಿಕೊಟ್ಟಿದ್ದಾರೆ.[ಸದ್ದು-ಸುದ್ದಿ ಮಾಡದ ಪ್ರಿಯಾಮಣಿ ಚಿತ್ರ ಮುಂದಿನ ತಿಂಗಳು ರಿಲೀಸ್.!]

  ಪ್ರಕಾಶ್ 'ರಾಮಾಯಣ'ಕ್ಕೆ 'ಯು' ಪತ್ರ

  ಪ್ರಕಾಶ್ 'ರಾಮಾಯಣ'ಕ್ಕೆ 'ಯು' ಪತ್ರ

  ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಇದೊಳ್ಳೆ ರಾಮಾಯಣ' ಚಿತ್ರಕ್ಕೆ, ಸೆನ್ಸಾರ್ ಮಂಡಳಿ ಯಾವುದೇ ಕತ್ತರಿ ಪ್ರಯೋಗ ಮಾಡದೇ 'ಯು' ಪ್ರಮಾಣಪತ್ರ ನೀಡಿ, ಬಿಡುಗಡೆಗೆ ಅನುಮತಿ ನೀಡಿದೆ. ದಸರಾ ಹಬ್ಬಕ್ಕೆ ಸಿನಿ ಪ್ರಿಯರಿಗೆ ಸ್ಪೆಷಲ್ ಅಂತ 'ಇದೊಳ್ಳೆ ರಾಮಾಯಣ' ನೋಡಿ ಎಂಜಾಯ್ ಮಾಡಬಹುದು.

  English summary
  Kannada movie Idolle Ramayana starring Prakash Raj and Actress Priyamani among others has got a U certificte from the Censor Board. Prakash Raj has also directed the film in Kannada and Telugu. The film is slated for release on October 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X