For Quick Alerts
  ALLOW NOTIFICATIONS  
  For Daily Alerts

  Prakash Raj: 'ಅಪ್ಪು ಎಕ್ಸ್‌ಪ್ರೆಸ್' ಆರಂಭಿಸಿದ ಪ್ರಕಾಶ್ ರಾಜ್!

  |

  ನಟ ಪ್ರಕಾಶ್ ರಾಜ್‌ ಅವರು ಏನೇ ಮಾಡಿದರು, ಏನೇ ಮಾತನಾಡಿದರು ಅದು ಒಂದಲ್ಲಾ ಒಂದು ವಿವಾದಕ್ಕೆ ಕಾರಣ ಅಗಿ ಬಿಡುತ್ತದೆ. ಪ್ರಕಾಶ್ ರಾಜ್‌ ಸಿನಿಮಾ ನಟನೆಯ ಜೊತೆಗೆ ಸಮಾಜದಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ಸರ್ಕಾರಗಳನ್ನು ಪ್ರಶ್ನೆ ಮಾಡುತ್ತಾರೆ. ಹಲವು ಬಾರಿ ಅವರ ಹೇಳಿಕೆಗಳು ವಿವಾದನ್ನು ಹುಟ್ಟು ಹಾಕಿದ್ದು ಇದೆ. ಆದರೆ ಈ ಬಾರಿ ಪ್ರಕಾಶ್ ರಾಜ್‌ ಮಾಡಿರುವ ಟ್ವೀಟ್ ಕಂಡು ಎಲ್ಲರು ಮೆಚ್ಚಿ ಕೊಂಡಾಡುತ್ತಾ ಇದ್ದಾರೆ. ಇದಕ್ಕೆ ಕಾರಣ ನಟ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್.

  ಪ್ರಕಾಶ್ ರಾಜ್‌ಗೆ (ಮಾರ್ಚ್ 26) ರಂದು ಹುಟ್ಟು ಹಬ್ಬದ ಸಂಭ್ರಮ. ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಕಾಶ್ ಉತ್ತಮವಾದ ವಿಚಾರ ಒಂದನ್ನು ಹಂಚಿಕೊಂಡಿದ್ದಾರೆ. ಹೌದು ನಟ ಪುನೀತ್ ರಾಜ್‌ಕುಮಾರ್ ವಿಚಾರವಾಗಿ ಅವರು ಟ್ವೀಟ್ ಮಾಡಿದ್ದಾರೆ. ಅಪ್ಪು ಹೆಸರಲ್ಲಿ ಪ್ರಕಾಶ್ ರಾಜ್ ಹೊಸ ಯೋಜನೆ ಒಂದನ್ನು ಕೈಗೊಂಡಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

  Prakash Raj: ಯಶ್ ಅಭಿಮಾನಿಗಳಿಗೆ ಪ್ರಕಾಶ್ ರಾಜ್‌ರದ್ದೇ ಚಿಂತೆPrakash Raj: ಯಶ್ ಅಭಿಮಾನಿಗಳಿಗೆ ಪ್ರಕಾಶ್ ರಾಜ್‌ರದ್ದೇ ಚಿಂತೆ

  'ಅಪ್ಪು ಎಕ್ಸ್‌ಪ್ರೆಸ್' ಎನ್ನುವ ಹೊಸ ಯೋಜನೆ ಆರಂಭ ಮಾಡಿದ್ದಾರೆ ಪ್ರಕಾಶ್ ರಾಜ್. ತಮ್ಮ ಫೌಂಡೇಷನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೆ ಈಗ ಅಪ್ಪು ಹೆಸರಿನಲ್ಲಿ ಮತ್ತೊಂದು ಯೋಜನೆ ಶುರುವಾಗಿದೆ. ಆದರೆ ಸದ್ಯಕ್ಕೆ ಈ ಫೌಂಡೇಶ್ ಬಗ್ಗೆ ಮಾತ್ರವೇ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಅಪ್ಪು ಫೌಂಡೇಶನ್ ಶುರು ಮಾಡಿದ ಪ್ರಕಾಶ್ ರಾಜ್!

  'ಅಪ್ಪು ಎಕ್ಸ್‌ಪ್ರೆಸ್' ಬಗ್ಗೆ ಯೋಜನೆ ಆರಂಭ ಮಾಡಿರುವ ನಟ ಪ್ರಕಾಶ್ ರಾಜ್ ಈ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. "ನನ್ನ ದಿನವಾದ ಈ ದಿನದಂದು, ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತಸ ಪಡುತ್ತೇನೆ. ಪ್ರಕಾಶ್ ರಾಜ್ ನೇತೃತ್ವದಲ್ಲಿ 'ಹಿಂದಿರುಗಿಸೋಣ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ 'ಅಪ್ಪು ಎಕ್ಸ್‌ಪ್ರೆಸ್' ಯೋಜನೆಯ ಬಗ್ಗೆ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಎಂದರೆ ಪ್ರಕಾಶ್ ಅವರಿಗೆ ಬಹಳ ಪ್ರೀತಿ ಈ ವಿಚಾರವನ್ನು ಅವರು ಈ ಹಿಂದೆ ಹಲವು ಬಾರಿ ಹೇಳಿಕೊಂಡಿದ್ದಾರೆ.

  Prakash Raj: 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಸಿನಿಮಾಗಳು ಯಾವಾಗ ಎಂದ ಪ್ರಕಾಶ್ ರಾಜ್?Prakash Raj: 'ದಿ ಕಾಶ್ಮೀರ್ ಫೈಲ್ಸ್' ಬಳಿಕ ಈ ಸಿನಿಮಾಗಳು ಯಾವಾಗ ಎಂದ ಪ್ರಕಾಶ್ ರಾಜ್?

  ಅಪ್ಪು ನಿಧನದಿಂದ ಅಘಾತ್ಕಕ್ಕೊಳಗಾಗಿದ್ದ ಪ್ರಕಾಶ್ ರಾಜ್!

  ಅಪ್ಪು ನಿಧನದಿಂದ ಅಘಾತ್ಕಕ್ಕೊಳಗಾಗಿದ್ದ ಪ್ರಕಾಶ್ ರಾಜ್!

  ಪುನೀತ್ ರಾಜ್‌ಕುಮಾರ್ ನಿಧನ ಆದಾಗ ನಟ ಪ್ರಕಾಶ್ ರಾಜ್ ವಿಡಿಯೋ ಮೂಲಕ ನೋವು ಹಂಚಿಕೊಂಡಿದ್ದರು. "ಇದು ತುಮಬಾ ನೋವಿನ ಸಂಗತಿ. ಅಸಹಾಯಕತೆ, ಅನಾಥ ಪ್ರಜ್ಞೆ ಕಾಡುತ್ತಿದೆ. ನಂಬಲು ಇಷ್ಟ ಇಲ್ಲದ ವಿಚಾರ ಇದು. ಅಗಲಿಕೆ, ಸಾವು ನಾನು ನೋಡಿದ್ದೇನೆ. ನನ್ನ ಹೆತ್ತ ಮಗನ ಸಾವು ನೋಡಿದ ಬಳಿಕ ನನಗೆ ಮತ್ಯಾವ ಸಾವು ಅಷ್ಟೊಂದು ನೋವು ತರಲಾರದು ಅಂದುಕೊಂಡಿದ್ದೆ. ಆದರೆ ಅಪ್ಪು... ತುಂಬಾ ಅಸಹಾಯಕನಾಗಿ ಕುಗ್ಗಿ ಹೋಗಿದ್ದೇನೆ." ಎಂದು ಹೇಳುತ್ತಾ ಭಾವುರಾಗಿದ್ದರು.

  ಅಪ್ಪು ಬೆಳವಣಿಗೆ ಬಗ್ಗೆ ಕೊಂಡಾಡಿದ್ದ ಪ್ರಕಾಶ್ ರಾಜ್!

  ಅಪ್ಪು ಬೆಳವಣಿಗೆ ಬಗ್ಗೆ ಕೊಂಡಾಡಿದ್ದ ಪ್ರಕಾಶ್ ರಾಜ್!

  ಇನ್ನು ನಟ ಪುನೀತ್‌ ರಾಜ್‌ಕುಮಾರ್ ಜೊತೆಗೆ ಪ್ರಕಾಶ್ ರಾಜ್ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ 'ಯುವರತ್ನ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಆಗ ಪುನೀತ್ ರಾಜ್‌ಕುಮಾರ್ ಸಿನಿಮಾಗಳ ಆಯ್ಕೆಯ ಬಗ್ಗೆ ಹಾಡಿ ಹೊಗಳಿದ್ದರು. ಹಣ ಮತ್ತು ಹೆಸರು ದೊಡ್ಡ ಮಟ್ಟದಲ್ಲಿ ಧಕ್ಕಿದಾಗಲೂ ಕೂಡ ಅದನ್ನು ತಲೆಗೆ ಏರಿಸಿಕೊಳ್ಳದೆ. ಮತ್ತೆ ನೆಲದಲ್ಲಿ ನಿಂತು, ಸಮಾಜಕ್ಕೆ ಉತ್ತಮ ಸಂದೇಶ ಇರುವ ಸಿನಿಮಾಗಳನ್ನು ಮಾಡುವುದು ಮುಖ್ಯ ಎಂದು ಅಪ್ಪು ತೋರಿಸಿ ಕೊಟ್ಟದ್ದಾರೆ ಎಂದು ಹೇಳುತ್ತಾ ಅಪ್ಪು ಬಗ್ಗೆ ಸಾಕಷ್ಟು ಮಾತನಾಡಿದ್ದರು. ಪ್ರಕಾಶ್ ರಾಜ್.

  'ಜೈ ಭೀಮ್' ಸಿನಿಮಾ: ವಿವಾದಿತ ದೃಶ್ಯದ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ'ಜೈ ಭೀಮ್' ಸಿನಿಮಾ: ವಿವಾದಿತ ದೃಶ್ಯದ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ

  ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

  ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

  ನಟ ಪ್ರಕಾಶ್ ರಾಜ್‌ ಸದ್ಯ 'ಅಪ್ಪು ಎಕ್ಸ್‌ಪ್ರೆಸ್' ಎನ್ನುವ ಯೋಜನೆಯನ್ನಯ ಕೈಗೊಂಡಿರುವುದಾಗಿ ಮಾತ್ರ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಪ್ರಕಾಶ್ ರಾಜ್ ಗ್ರಾಮಗಳನ್ನು ದತ್ತು ಪಡೆದು ಸಲಹುತ್ತಿದ್ದಾರೆ. ಹಾಗೆ ಅದೇ ರೀತಿ 'ಅಪ್ಪು ಎಕ್ಸ್‌ಪ್ರಸ್ ' ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳ ಬಹುದು ಎನ್ನಲಾಗಿದೆ. ಇದಕ್ಕೆ ಸದ್ಯದಲ್ಲೆ ಉತ್ತರ ಸಿಗಲಿದೆ.

  English summary
  Prakash Raj Start New Foundation On Puneeth Rajkumar's Name Called Appu Express, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X