ಡಾ. ರಾಜ್‌, ಲೀಲಾವತಿ ಹಾಗೂ ವಿನೋದ್ ರಾಜ್‌ ಒಟ್ಟಿಗಿರುವ ಫೋಟೊ ಫೇಕ್.. ಫೇಕ್‌.. ಫೇಕ್..!

By ಫಿಲ್ಮಿಬೀಟ್ ಡೆಸ್ಕ್‌

ಡಾ.ರಾಜ್ ಕುಮಾರ್ ಅವರ ಪುತ್ರ ವಿನೋದ್ ರಾಜ್ ಎನ್ನುವ ವದಂತಿ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಲೇ ಇದೆ. ಇತ್ತೀಚಿಗೆ ನಿರ್ದೇಶಕ ಹಾಗೂ ರಾಜ್‌ ಕುಟುಂಬಕ್ಕೆ ಆಪ್ತರಾದ ಪ್ರಕಾಶ್ ರಾಜ್ ಮೇಹು ಮಾಡಿದ ಪೋಸ್ಟ್‌ವೊಂದು ಮತ್ತೆ ಈ ವಿವಾದಕ್ಕೆ ಕಿಚ್ಚು ಹಚ್ಚಿತ್ತು. ಇನ್ನು ವಿನೋದ್ ರಾಜ್‌ ಗುಟ್ಟಾಗಿ ಮದುವೆ ಆಗಿದ್ದ ವಿಚಾರವನ್ನು ಬಿಚ್ಚಿಟ್ಟರು.

ಪ್ರಕಾಶ್ ರಾಜ್ ಮೇಹು ಕೆಲ ದಿನಗಳ ಹಿಂದೆ ವಿನೋದ್ ರಾಜ್‌ ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಕೆಲ ಶಾಕಿಂಗ್ ವಿಚಾರಗಳನ್ನು ದಾಖಲೆ ಸಮೇತ ಬಹಿರಂಗ ಪಡಿಸಿದ್ದರು. ಅದಕ್ಕೆ ಲೀಲಾವತಿ ಹಾಗೂ ವಿನೋದ್ ರಾಜ್ ಸ್ಪಷ್ಟನೆ ಕೂಡ ನೀಡಿದ್ದರು. ಮಗನಿಗೆ ರಹಸ್ಯವಾಗಿ ಮದುವೆ ಮಾಡಿದ್ದು ಯಾಕೆ ಅಂತಲೂ ಲೀಲಾವತಿ ವಾರು ಹೇಳಿದ್ದರು. ಇನ್ನು ಇಷ್ಟು ದಿನಗಳ ನಂತರ ಈ ವಿಚಾರವನ್ನು ಕೆದಕುತ್ತಿರುವುದು ಯಾಕೆ? ನಮ್ಮ ಕುಟುಂಬದ ಬಗ್ಗೆ ಮಾತನಾಡಲು ಆತ ಯಾರು ಅಂತೆಲ್ಲಾ ಯೂಟ್ಯೂಬ್ ಸಂದರ್ಶನವೊಂದರಲ್ಲಿ ವಿನೋದ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.

Prakasharaj Mehu claims Dr Rajkumar Photo with Vinod Raj is fake

ವಿನೋದ್, ಲೀಲಾವತಿ ಹಳೆಯದನ್ನೆಲ್ಲಾ ಮರೆತು ಮುಂದೆ ಸಾಗೋಣ ಎಂದಿದ್ದರು. ಸಿನಿ ವರ್ಲ್ಡ್ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿದ್ದ ಲೀಲಾವತಿ "ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ" ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್‌ ಮೇಹು "ಮತ್ತೊಂದು ಸತ್ಯವನ್ನು ಒಪ್ಪಿಕೊಂಡು ಬಿಡಿ, ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ" ಎಂದು ಮತ್ತೊಂದು ಪೋಸ್ಟ್ ಸಹ ಮಾಡಿದ್ದರು.

'ರಾಜ್‌ ಲೀಲಾ ವಿನೋದ' ಪುಸ್ತಕ

ರಾಜಕುಮಾರ್ ಮಗ ವಿನೋದ್ ರಾಜ್ ಎನ್ನುವ ವದಂತಿಯ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಇದೇ ವಿಚಾರದ ಬಗ್ಗೆ ರವಿ ಬೆಳಗೆರೆ ಅವರು 'ರಾಜ್‌ ಲೀಲಾ ವಿನೋದ' ಎನ್ನುವ ಪುಸ್ತಕ ಕೂಡ ಬರೆದಿದ್ದರು. ಕೆಲ ವರ್ಷಗಳ ಹಿಂದೆ ಈ ಪುಸ್ತಕ ಭಾರೀ ಚರ್ಚೆ ಹುಟ್ಟುಹಾಕಿತ್ತು. ಈ ಪುಸ್ತಕದಲ್ಲಿ ಅಣ್ಣಾವ್ರು, ಲೀಲಾವತಿ ಅವರಿಗೆ ಬರೆದಿದ್ದ ಪತ್ರಗಳ ಬಗ್ಗೆ ಕೂಡ ಪ್ರಸ್ತಾಪಿಸಲಾಗಿತ್ತು. ಇಬ್ಬರು ಬಹಳ ಗಾಢವಾಗಿ ಪ್ರೀತಿಸುತ್ತಿದ್ದರು, ರಾಜ್‌ಕುಮಾರ್, ಲೀಲಾವತಿ ತೊಡೆ ಮೇಲೆ ವಿನೋದ್ ರಾಜ್‌ನ ಕೂರಿಸಿಕೊಂಡಿರುವ ಫೋಟೊ ನೋಡಿದರೆ ಎಂತಹವರಿಗೂ ಅದು ಗಂಡ, ಹೆಂಡತಿ ಮಗು ಅಂತ ಗೊತ್ತಾಗುತ್ತದೆ. ರಾಜ್‌ಕುಮಾರ್ ಮಗುನ ಎತ್ತಿಕೊಂಡಿದ್ದಾರೆ ಎಂದು ವೇದಿಕೆಯೊಂದರಲ್ಲಿ ಬೆಳಗೆರೆ ಹೇಳಿದ್ದರು.

Prakasharaj Mehu claims Dr Rajkumar Photo with Vinod Raj is fake

ರವಿ ಬೆಳಗೆರೆ ಹೇಳಿಕೆ ವಿಡಿಯೋ ವೈರಲ್ಸ

ಲೀಲಾವತಿಯವರ ಮನೆಯಲ್ಲಿ ಡಾ. ರಾಜ್‌ಕುಮಾರ್, ಲೀಲಾವತಿ ಹಾಗೂ ಪುಟಾಣಿ ವಿನೋದ್ ರಾಜ್ ಒಟ್ಟಿಗೆ ಇರುವಂತೆ ಈಗಲೂ ಫೋಟೊ ಇದೆ. ಸದ್ಯ ಇದೇ ಫೋಟೊ ಬಗ್ಗೆ ರವಿ ಬೆಳಗೆರೆ ಬಹಳ ಹಿಂದೆ ಮಾತನಾಡಿರುವ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ. 'ನ್ಯೂಜ್ ಕನ್ನಡ' ಫೇಸ್ಬುಕ್‌ ಪೇಜ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ ಬಗ್ಗೆ ನಿರ್ದೇಶಕ ಪ್ರಕಾಶ್ ರಾಜ್‌ ಮೇಹು ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಆ ಕಾಮೆಂಟ್ ಈಗ ಸಖತ್ ವೈರಲ್ ಆಗುತ್ತಿದೆ.

ಆ ಫೋಟೋ ಫೇಕ್ ಎಂದ ಮೇಹು

"ಅಣ್ಣಾವ್ರು ಆ ಮಗುವನ್ನು ಎತ್ಕೊಂಡಿರೋದು ಫೋಟೋ ಶಾಪ್‌ನಲ್ಲಿ ಕ್ರಿಯೇಟ್ ಮಾಡಿರೋದು ಅನ್ನುವುದು ಎಲ್ಲರಿಗೂ ಈಗ ಗೊತ್ತಾಗಿದೆ. ಲೀಲಾವತಿ-ವಿನೋದ್ ಭಾಗವತರ್ ಇಬ್ಬರೂ ಎಂತ ಸುಳ್ಳುಗಾರರು ಅನ್ನುವುದು ಸೊಸೆ-ಮೊಮ್ಮಗನ ಪ್ರಕರಣದಲ್ಲಿ ಜಗಜ್ಜಾಹೀರಾಗಿದೆ. ವಿನೋದ್, ಅಣ್ಣಾವ್ರ ಮಗನಲ್ಲ ಅನ್ನುವ ಸತ್ಯ ಕೂಡ ಜನರಿಗೆ ಮನದಟ್ಟಾಗಿದೆ."

ಸುಳ್ಳನ್ನು ಟ್ರೋಲ್ ಮಾಡುತ್ತಿದ್ದಾರೆ

"ಆದರೂ ಅಣ್ಣಾವ್ರ ಏಳಿಗೆಯನ್ನ ಸಹಿಸದ ಅಲ್ಪ ಮತಿಗಳು ಮತ್ತೆ ಮತ್ತೆ ಅದದೇ ಸುಳ್ಳುಗಳನ್ನು ಟ್ರೋಲ್‌ ಮಾಡುತ್ತಿರುತ್ತಾರೆ ಇಂತಹ ಸುಳ್ಳು ಸುದ್ದಿಗಳಿಂದ ಅಣ್ಣಾವ್ರ ಹೆಸರಿನ ಒಂದು ರೋಮವು ಅಳ್ಳಾಡುವುದಿಲ್ಲ ಅನ್ನುವುದೇ ಸತ್ಯ" ಎಂದು ಪ್ರಕಾಶ್ ರಾಜ್‌ ಮೇಹು ಬರೆದಿದ್ದಾರೆ. ಅಣ್ಣಾವ್ರಿಗೆ ಬಹಳ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಸ್ವತಃ ರಾಜ್‌ಕುಮಾರ್ ಬಳಿ "ಅಣ್ಣಾ ಲೀಲಾವತಿಯವರು ಎಲ್ಲಾ ಕಡೆ ವಿನೋದ್ ರಾಜ್ ನಿಮ್ಮ ಮಗ ನಿಮ್ಮ ಮಗ ಎಂದು ಹೇಳ್ಕೊಂಡು ಓಡಾಡುತ್ತಿದ್ದಾರೆ. ಏನಣ್ಣಾ? ಎಂದು ಕೇಳಿದ್ದೆ" ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

More from Filmibeat

English summary
Prakasharaj Mehu claims Dr Rajkumar Photo with Vinod Raj is fake. he Says its Phoshop picture, and asks to stop Spreading Lies. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X