ಅವ್ರದ್ದು ಚೈಲ್ಡಿಶ್ ಬುದ್ಧಿ, ಬೈಯ್ಕೊಂಡು ತಿರುಗಾಡಬಾರ್ದು, ರಕ್ಷಿತ್ ಅದರಿಂದ ಹೊರಬರಲು ಸಮಯ ತಗೊಂಡ

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಬಳಿಕ ಪ್ರೀತಿಲಿ ಬಿದ್ದಿದ್ದರು. ಪೋಷಕರನ್ನು ಒಪ್ಪಿಸಿ ಮದುವೆಗೆ ಸಜ್ಜಾಗಿದ್ದರು. ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ನಡೆದಿತ್ತು. ಬಳಿಕ ಇಬ್ಬರೂ ದೂರಾಗಿದ್ದರು. ತಮ್ಮ ಬ್ರೇಕಪ್ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಲೇ ಇಲ್ಲ. ರಕ್ಷಿತ್ ಶೆಟ್ಟಿ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು ಮೂಡಿದ್ಯಾ? ಎನ್ನುವ ಊಹಾಪೋಹದ ಬಗ್ಗೆ ಕೂಡ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್- ರಶ್ಮಿಕಾ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ.

Pramod Shetty Breaks Silence on Rakshit Shetty Rashmika Mandanna Breakup Calls It a Phase of Life

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ವಿಚಾರ ಮರೆತು ಹೋಗಿರುವ ಸಂಗತಿ. ಅವ್ನು ಅದರಿಂದ ಆಚೆ ಬರಲು ಕೊಂಚ ಸಮಯ ತಗೊಂಡ. ಆದರೆ ಒಮ್ಮೆ ಅದರಿಂದ ಹೊರ ಬಂದಮೇಲೆ ಯಾವುದರ ಬಗ್ಗೆ ಯೋಚನೆ ಮಾಡಲಿಲ್ಲ. ಈಗ ಇರುವುದರಲ್ಲೇ ಖುಷಿಯಾಗಿದ್ದಾನೆ. ಅವ್ನು ಯಾವತ್ತು ಅವಳ ಮೇಲೆ ಆರೋಪ ಮಾಡಲಿಲ್ಲ. ಯಾವುದೇ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಲಿಲ್ಲ. ಆರೋಪ ಮಾಡುವುದು ಸರಿಯಲ್ಲ ಎಂದು ನಮಗೂ ಅನ್ನಿಸುತ್ತೆ" ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

ಮಾತು ಮುಂದುವರೆಸಿ "ಬಹಳ ಚಿಕ್ಕ ವಯಸ್ಸು. ಅವ್ರದ್ದು ಯಾವ್ದೋ ಚೈಲ್ಡಿಶ್ ಬುದ್ಧಿ ಇದ್ದಾಗ ಚೇಂಜ್ ಆಗಿದ್ದಕ್ಕೆ ಬೈಯ್ಕೊಂಡು ತಿರುಗಾಡಬಾರ್ದು. ಎಲ್ಲಾ ಮನುಷ್ಯರಿಗೆ ಎಲ್ಲರ ಜೀವನದಲ್ಲಿ ಅದೊಂದು ಘಟ್ಟ, ಫೇಮ್ ಇತ್ತು. ಚೇಂಜ್ ಮಾಡಿರುತ್ತೆ ವ್ಯಕ್ತಿನ.. ಅದಕ್ಕೆ ತಲೆ ಕೆಡಿಸಿಕೊಳ್ಳುವಂಥದ್ದು ಇಲ್ಲ. ಯಾರ ಲೈಫ್ ಯಾರಿಂದಲೂ ಉದ್ಧಾರ ಆಗಲ್ಲ, ಯಾರಿಂದಲೂ ಹಾಳಾಗಲ್ಲ ಎನ್ನುವುದು ನನ್ನ ಅನಿಸಿಕೆ" ಎಂದು ಪ್ರಮೋದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಾನ್ವಿ ಪಾತ್ರಕ್ಕೆ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ರಕ್ಷಿತ್- ರಶ್ಮಿಕಾ ಜೋಡಿ ಮೋಡಿ ಮಾಡಿತ್ತು. ಅದೇ ಸಮಯದಲ್ಲಿ ಶುರುವಾಗಿದ್ದ ಸ್ನೇಹ, ಪ್ರೀತಿಗೆ ತಿರುಗಿತ್ತು. 2017ರ ಜುಲೈ 3ರಂದು ವಿರಾಜ್‌ಪೇಟೆಯಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ನಡೆದಿತ್ತು. ಬಳಿಕ ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ನಟಿಸಲು ಆರಂಭಿಸಿದ್ದರು. 'ಗೀತಾ ಗೋವಿಂದಂ' ಸಕ್ಸಸ್ ಬಳಿಕ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿತ್ತು. ಅಧಿಕೃತವಾಗಿ ಇಬ್ಬರೂ ಏನನ್ನೂ ಮಾತನಾಡಲಿಲ್ಲ. ಆದರೆ ಇಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿತ್ತು.

ಇತ್ತೀಚೆಗೆ 'ದಿ ಗರ್ಲ್‌ಫ್ರೆಂಡ್' ಎಂಬ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. 'ಟಾಕ್ಸಿಕ್' ಬಾಯ್‌ಫ್ರೆಂಡ್‌ ಕಾರಣಕ್ಕೆ ನೋವು ಅನುಭವಿಸುವ ಯುವತಿಯ ಕಥೆ ಚಿತ್ರದಲ್ಲಿದೆ. ಇದು ತಮ್ಮದೇ ನಿಜ ಜೀವನದ ಕಥೆ ಎನ್ನುವ ಅರ್ಥದಲ್ಲಿ ರಶ್ಮಿಕಾ ಮಾತನಾಡಿದ್ದರು. ಆಗ ಕೆಲವರು ರಕ್ಷಿತ್ ಶೆಟ್ಟಿ ಹೆಸರು ಎಳೆದು ತಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದರು.

ಸದ್ಯ ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದಾರೆ. ಗುಟ್ಟಾಗಿ ನಿಶ್ಚಿತಾರ್ಥ ನಡೆದಿದೆ. ಫೆಬ್ರವರಿಯಲ್ಲಿ ಮದುವೆ ಆಗುತ್ತಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ವದಂತಿಯನ್ನು ಇಬ್ಬರೂ ಅಲ್ಲಗಳೆಯುತ್ತಿಲ್ಲ. ಹಾಗಾಗಿ ಇಬ್ಬರೂ ಮದುವೆ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X