ಅಪಾರ್ಥ, ಅನಾಹುತದ ಕಥೆ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ': ಹೇಗಿದೆ ಫಸ್ಟ್ ಲುಕ್?

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಶೆಟ್ಟರ ಗ್ಯಾಂಗ್‌ನಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಮತ್ತೊಬ್ಬ ನಟ ಪ್ರಮೋದ್ ಶೆಟ್ಟಿ. ಕನ್ನಡದ ಹಲವು ಸಿನಿಮಾಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಹೊಸ ಸಿನಿಮಾದ ಟೈಟಲ್ ಕಿಕ್ ಕೊಡುತ್ತಿದೆ. ಅದುವೇ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ'.

ಈಗಾಗಲೇ ಪ್ರಮೋದ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ. 'ಉಳಿದವರು ಕಂಡಂತೆ', 'ಕಿರಿಕ್ ಪಾರ್ಟಿ', 'ರಿಕ್ಕಿ', 'ಬೆಲ್ ಬಾಟಂ', 'ಅವನೇ ಶ್ರೀಮನ್ನಾರಾಯಣ', 'ತೂತುಮಡಿಕೆ', 'ಕಾಂತಾರ' ಹೀಗೆ ಹಲವು ಸಿನಿಮಾಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನಗೆದ್ದಿದೆ.

Karikaanu Guddada Mele Adhika Prasanga Movie First look

ರಕ್ಷಿತ್ ರಿಷಬ್ ಅಂತೆಯೇ ಪ್ರಮೋದ್ ಶೆಟ್ಟಿ ಇತ್ತೀಚೆಗೆ ವಿಶಿಷ್ಠ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೀಗ ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಅನ್ನೋ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ಒಪ್ಪಿಕೊಂಡ ಹೊಸ ಸಿನಿಮಾವೇ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ'.

ಇಂದು (ಆಗಸ್ಟ್ 31) ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಹೊಸ ಸಿನಿಮಾ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ'ಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ.

ಅಂದ್ಹಾಗೆ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಸಿನಿಮಾ ಒಂದು ಊರಿನಲ್ಲಿ ಆದ ಅಪಾರ್ಥವೂ ಅನಾಹುತವಾಗಿ, ಅನಾಹುತವು ಅಧಿಕ ಪ್ರಸಂಗವಾಗಿ ನಡೆಯುವ ಘಟನೆಗಳ ಸುತ್ತ ನಡೆಯುತ್ತೆ. ಈಗಾಗಲೇ 'ವಡ್ಡಾರಾಧಕ' ಹಾಗೂ 'ಶಬರಿ' ಎನ್ನುವ ಎರಡು ಕಿರು ಚಿತ್ರಗಳನ್ನು ನಿರ್ದೇಶಿಸಿದ್ದ ಯುವ ಪ್ರತಿಭೆ ಅನೀಶ್ ಶರ್ಮ ಈ ಸಿನಿಮಾದ ನಿರ್ದೇಶಕರು.

'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಜೊತೆ ರಾಘು ಶಿವಮೊಗ್ಗ, ಕಿರಣ್ ನಾಯಕ್, ಮಂಜುನಾಥ್ ಹೆಗಡೆ, ಕೆಜಿ ಕೃಷ್ಣಮೂರ್ತಿ ಚಂದ್ರಕಲಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಸಿನಿಮಾವನ್ನು ಶಿವಮೊಗ್ಗ ಜಿಲ್ಲೆಯ ಇಡುವಾಣಿ ಎಂಬ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಡೀ ಊರನ್ನೇ ಸೆಟ್ಟು ಮಾಡಿಕೊಂಡು, ಅಲ್ಲಿನ ಜನರನ್ನೇ ಬಳಸಿಕೊಂಡು ಸಿನಿಮಾ ಶೂಟಿಂಗ್ ಮಾಡಿರೋದು ಈ ಸಿನಿಮಾ ವಿಶೇಷ.

ಸುಮತ್ ಶರ್ಮಾ ಕ್ಯಾಮರಾವರ್ಕ್ ಇದೆ. ಸಂಜೀವ್ ಜಾಗೀರ್ದಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಹಾಗೇ ಚೇತನ್ ಕುಮಾರ್ 'ಕರಿಕಾನು ಗುಡ್ಡದ ಮೇಲೊಂದು ಅಧಿಕ ಪ್ರಸಂಗ' ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ್ ಸೂರಿ, ಸುನಿತ್ ಹಲಗೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

More from Filmibeat

English summary
Pramod Shetty Starrer Karikaanu Guddada Mele Adhika Prasanga Movie Fist look Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X