Don't Miss!
- Finance
ಏಪ್ರಿಲ್ 26ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ - News
90% ಕೊರೊನಾ ರೋಗಿಗಳು ಮನೆಯಲ್ಲೇ ಗುಣಮುಖರಾಗಬಹುದು; ವೈದ್ಯರ ಸಲಹೆ - Lifestyle
ಸೋಮವಾರದ ಭವಿಷ್ಯ: ಇಂದು ಯಾವ ರಾಶಿಯವರಿಗೆ ಅದೃಷ್ಟದ ದಿನ - Sports
ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್ನಲ್ಲಿ ಗೆದ್ದ ಡೆಲ್ಲಿ - Automobiles
ಕಿಗರ್ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಹೊಸ ಜಾಹೀರಾತು ಬಿಡುಗಡೆ ಮಾಡಿದ ರೆನಾಲ್ಟ್ - Education
DFCCIL Recruitment 2021: 1074 ಜ್ಯೂ.ಮ್ಯಾನೇಜರ್, ಎಕ್ಸಿಕ್ಯುಟಿವ್ ಮತ್ತು ಜ್ಯೂ.ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರವಿಚಂದ್ರನ್ 'ದೃಶ್ಯಂ-2'ಗೆ ಎಂಟ್ರಿ ಕೊಟ್ಟ ಕನ್ನಡದ ಖ್ಯಾತ ನಟ
ಮಲಯಾಳಂನ ಸೂಪರ್ ಹಿಟ್ ದೃಶ್ಯಂ-2 ಚಿತ್ರದ ಕನ್ನಡ ರಿಮೇಕ್ ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸಜ್ಜಾಗಿದ್ದಾರೆ. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
ಏಳು ವರ್ಷಗಳ ಹಿಂದೆ ತೆರೆಗೆ ಬಂದಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಮಲಯಾಳಂನಲ್ಲಿ ಈಗಾಗಲೇ ದೃಶ್ಯಂ-2 ತೆರೆಗೆ ಬಂದು ಭರ್ಜರಿ ಸಕ್ಸಸ್ ಕಂಡಿದೆ. ಸದ್ಯ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿದ್ದು, ಕನ್ನಡಕ್ಕು ಎಂಟ್ರಿ ಕೊಡುತ್ತಿದೆ.
ಮುಂದುವರೆಯಲಿದೆ ರಾಜೇಂದ್ರ ಪೊನ್ನಪ್ಪ ಕುತೂಹಲಕಾರಿ ಕತೆ: 'ದೃಶ್ಯ 2'ಗೆ ರವಿಚಂದ್ರನ್ ರೆಡಿ
ಮೊದಲ ಭಾಗದಲ್ಲಿ ರವಿಚಂದ್ರನ್, ನವ್ಯಾ ನಾಯರ್, ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಎರಡನೇ ಭಾಗದಲ್ಲೂ ಇವರೇ ಮುಂದುವರೆಯಲಿದ್ದು, ಇನ್ನು ಕೆಲವು ಕಲಾವಿದರು ಸೇರ್ಪಡೆಯಾಗುತ್ತಿದ್ದಾರೆ. ದೃಶ್ಯಂ-2ಗೆ ಕನ್ನಡದ ಮತ್ತೊಬ್ಬ ಖ್ಯಾತ ಕಲಾವಿದ ಪ್ರಮೋದ್ ಶೆಟ್ಟಿ ಸೇರ್ಪಡೆಗೊಂಡಿದ್ದಾರೆ. ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ರಿಮೇಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಪ್ರಮೋದ್, ಪೊಲೀಸ್ ಅಧಿಕಾರಿ ಮುರಳಿ ಗೋಪಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೃಶ್ಯಂ-2ನಲ್ಲಿ ನಟಿಸಲು ಪ್ರಮೋದ್ ಶೆಟ್ಟಿ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಅಂದಹಾಗೆ ದೃಶ್ಯಂ-2ಗೆ ಪಿ ವಾಸು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಭಾಗ ಕೂಡ ಪಿ ವಾಸು ಸಾರಥ್ಯದಲ್ಲಿ ಮೂಡಿಬಂದಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಮುಂದಿನ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಚಿತ್ರೀಕರಣ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ರಾಜೇಂದ್ರ ಪೊನ್ನಪ್ಪ ಆಗ ರವಿಚಂದ್ರನ್ ಮತ್ತೆ ಅಭಿಮಾನಿಗಳ ಮನ ಗೆಲ್ಲುತ್ತಾರಾ? ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಹಾಗೆ ಕನ್ನಡದಲ್ಲೂ ದೃಶ್ಯಂ-2 ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕು.


Click it and Unblock the Notifications






























