For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಟನಿಗೆ ಪ್ರಣೀತಾ ಮಾಡಿದ್ರು ಕನ್ನಡ ಪಾಠ

  By Pavithra
  |
  ಪ್ರಣಿತಾ ಜೊತೆ ನಟಿಸಿದ ಹಿಂದಿ ಹೀರೋಗೆ ಕರ್ನಾಟಕದವರೆಂದ್ರೆ ಪ್ರೀತಿ ಅಂತೆ..!!

  'ಪೊರ್ಕಿ' ಸಿನಿಮಾ ಬೆಡಗಿ ನಟಿ ಪ್ರಣಿತಾ ಸುಭಾಷ್ ಸದ್ಯ ಸ್ಯಾಂಡಲ್ ವುಡ್ ಗಿಂತಲೂ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿಯೇ ಸಾಕಷ್ಟು ಬ್ಯುಸಿ ಆಗಿದ್ದಾರೆ. ಕನ್ನಡದ ಬೆಡಗಿ ತಾವು ಹೋದ ಕಡೆಯಲ್ಲಿ ತಮ್ಮ ಜೊತೆ ಅಭಿನಯ ಮಾಡುವ ಕಲಾವಿದರಿಗೆ ಕನ್ನಡ ಪಾಠ ಮಾಡುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರಂತೆ.

  ಈಗಾಗಲೇ ತೆಲುಗು, ಮಲೆಯಾಳಂ, ತಮಿಳಿನಲ್ಲಿ ಕಲಾವಿದರಿಗೆ ಕನ್ನಡ ಕಲಿಸಿ ಬಂದಿರುವ ನಟಿ ಪ್ರಣೀತಾ ಬಾಲಿವುಡ್ ನಲ್ಲಿ ತಮ್ಮ ಕನ್ನಡ ಪಾಠವನ್ನು ಶುರು ಮಾಡಿಕೊಂಡಿದ್ದಾರೆ. ಹೌದು ಸದ್ಯ ಬಿಟೌನ್ ಅಂಗಳಕ್ಕೆ ಕಾಲಿಟ್ಟಿರುವ ಪ್ರಣೀತಾ ಹಿಂದಿ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಹಾಗಾದರೆ ಪ್ರಣೀತಾ ಕನ್ನಡ ಕಲಿಸಿದ್ದು ಯಾರಿಗೆ? ಪ್ರಣೀತಾ ಸದ್ಯ ಯಾವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ? ಕನ್ನಡ ಚಿತ್ರದಲ್ಲಿ ಅಭಿನಯಿಸುವುದಿಲ್ಲವಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ..

  ಕನ್ನಡ ಕಲಿತ ಆಯುಷ್ಮಾನ್‌ಖುರಾನಾ

  ಕನ್ನಡ ಕಲಿತ ಆಯುಷ್ಮಾನ್‌ಖುರಾನಾ

  ನಟ ಆಯುಷ್ಮಾನ್‌ಖುರಾನಾ ಕನ್ನಡದಲ್ಲಿ ಮಾತನಾಡುವುದನ್ನು ಕಲಿತಿದ್ದಾರೆ. ಹೌದು ಆಯುಷ್ಮಾನ್‌ ಖುರಾನಾ ಅವರಿಗೆ ಕನ್ನಡ ಕಲಿಸಿದ್ದು ಕನ್ನಡದ ನಟಿ ಪ್ರಣಿತಾ ಎನ್ನುವುದು ಖುಷಿಯ ವಿಚಾರ.

  ಹಿಂದಿ ಆಲ್ಬಂ ನಲ್ಲಿ ಪ್ರಣೀತಾ

  ನಟಿ ಪ್ರಣೀತಾ ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ಆಲ್ಬಂ ನಲ್ಲಿ ಆಯುಷ್ಮಾನ್‌ ಖುರಾನಾ ಜೊತೆ ಅಭಿನಯ ಮಾಡುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಆಯುಷ್ಮಾನ್‌ ಅವರಿಗೆ ಕನ್ನಡ ಕಲಿಸಿ ಅದನ್ನು ವಿಡಿಯೋ ಮಾಡಿ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

  ಕನ್ನಡಿಗರನ್ನ ಇಷ್ಟಪಟ್ಟ ಆಯುಷ್ಮಾನ್‌

  ಕನ್ನಡಿಗರನ್ನ ಇಷ್ಟಪಟ್ಟ ಆಯುಷ್ಮಾನ್‌

  ಬಾಲಿವುಡ್ ನಟ ಆಯುಷ್ಮಾನ್‌ ವಿಡಿಯೋದಲ್ಲಿ "ಕನ್ನಡದ ಅಭಿಮಾನಿಗಳೇ.. ನಾನು ನಿಮ್ಮನ್ನು ಇಷ್ಟ ಪಡುತ್ತೇನೆ. ನಾನು ಒಳ್ಳೆ ಹುಡುಗ ಎಂದು ಹೇಳಿದ್ದಾರೆ". ಇದನ್ನು ರೆಕಾರ್ಡ್ ಮಾಡಿರುವ ಪ್ರಣೀತಾ ಆಯುಷ್ಮಾನ್‌ ಕನ್ನಡದ ಪ್ರೀತಿಗೆ ಖುಷಿ ಆಗಿದ್ದಾರೆ.

  ಮಾದಕ ವ್ಯಸನದ ವಿರುದ್ಧ ಪ್ರಣೀತಾ ಹೋರಾಟ

  ಮಾದಕ ವ್ಯಸನದ ವಿರುದ್ಧ ಪ್ರಣೀತಾ ಹೋರಾಟ

  'ಚನ್ ಕಿತ್ತಾನ್' ಅಲ್ಬಂನಲ್ಲಿ ನಟಿ ಪ್ರಣೀತಾ ಹಾಗೂ ಆಯುಷ್ಮಾನ್‌ ಖುರಾನಾ ಅಭಿನಯ ಮಾಡುತ್ತಿದ್ದಾರೆ. ಮಾದಕ ವ್ಯಸನದ ವಿರುದ್ಧ ಸಂದೇಶವಿರುವ ಆಲ್ಬಂ ಇದಾಗಿದೆ. ಚಿತ್ರೀಕರಣದ ವೇಳೆ ಪ್ರಣೀತಾ ಕನ್ನಡದವರು ಎಂದು ತಿಳಿದು ಆಯುಸ್ಮಾನ್ ಅವರೇ ಖುದ್ದು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತೇನೆ ಎಂದು ಇಷ್ಟ ಪಟ್ಟು ಕನ್ನಡ ಕಲಿತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವ ಪ್ರಣೀತಾ ಒಳ್ಳೆ ಸಿನಿಮಾ ಮೂಲಕ ಕನ್ನಡಕ್ಕೆ ಬರಲಿದ್ದಾರೆ.

  English summary
  Actress Praneetha teaches Bollywood actor Ayushman Khurana to speak in Kannada. Actress Pranitha and Ayushmann Khurana act in 'Chan Kittan' album

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X