ಕೋವಿಡ್ ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ ಪ್ರಣಿತಾ

By ಫಿಲ್ಮಿಬೀಟ್ ಡೆಸ್ಕ್

ಚಿತ್ರರಂಗ ಅಲ್ಲದೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕವೂ ಗುರುತಿಸಿಕೊಂಡಿರುವ ನಟಿ ಪ್ರಣೀತಾ ಕೊವೀಡ್ ಎರಡನೆ ಅಲೆಯ ವೇಳೆಯಲ್ಲೂ ಜನರಿಗೆ ನೆರವಾಗಿದ್ದಾರೆ. ತಮ್ಮ ಫೌಂಡೇಶನ್ ವತಿಯಿಂದ ಲಸಿಕೆ ಅಭಿಯಾನ ನಡೆಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪ್ರಣೀತಾ ತಮ್ಮ ಫೌಂಡೇಶನ್‌ನಿಂದ ನಡೆದ ಲಸಿಕೆ ಅಭಿಯಾನದ ವಿಡಿಯೋ ಅನ್ನು ಕೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಲವರು ಈ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಪ್ರಣೀತಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

Pranita Subhash Conducts Free Vaccination Drive From Her Foundation

ರಾಷ್ಟ್ರೋತ್ಥಾನ ಪರಿಷತ್ ಜೊತೆ ಕೈಜೋಡಿಸಿದ ನಟಿ ಪ್ರಣಿತಾ, ತಮ್ಮ ಫೌಂಡೇಶನ್ ಸಹಯೋಗದೊಂದಿಗೆ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಿದ್ದಾರೆ. ಜಯನಗರದಲ್ಲಿ ಪ್ರಣೀತಾ ಪೌಂಡೇಶನ್ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಉಚಿತವಾಗಿ ಲಸಿಕೆ ವಿತರಣೆ ಹಮ್ಮಿಕೊಂಡಿದೆ.

ಈ ಹಿಂದೆ ವಿಷ್ಣುವರ್ಧನ್ ಓದಿದ ಶಾಲೆ ಶಾಶ್ವತವಾಗಿ ಮುಚ್ಚಿಹೋಗುವ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಪ್ರಣೀತಾ ಶಾಲೆ ಉಳಿಸಲು ನೆರವಾಗಿದ್ದರು. ಇದು ಮಾತ್ರವೇ ಅಲ್ಲದೆ ಹಲವು ಜನಪರ ಕಾರ್ಯಕ್ರಮಗಳಲ್ಲಿ ಪ್ರಣಿತಾ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ.

ಈ ಹಿಂದೆ ಜೂನ್ ತಿಂಗಳಲ್ಲಿ ತಮ್ಮ ಫೌಂಡೇಶನ್‌ನಿಂದ ಸ್ವತಂತ್ರ್ಯವಾಗಿ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ಪ್ರಣಿತಾ ಹಮ್ಮಿಕೊಂಡಿದ್ದರು.

ಪ್ರಸ್ತುತ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ನಿರ್ಭಿಡೆಯಿಂದ ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ ಪ್ರಣಿತಾ ಸುಭಾಷ್, ಕೆಲವು ದಿನಗಳ ಹಿಂದಷ್ಟೆ 'ಹಿಂದೂ ಭಯೋತ್ಪಾದನೆ' ಎಂದವರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದ ನಟಿ ಪ್ರಣಿತಾ, ''ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಹಿಂಸಾಚಾರವನ್ನು ಉದಾಹರಣೆಯಾಗಿ ನೀಡುತ್ತಾ 'ಹಿಂದೂ ಭಯೋತ್ಪಾದನೆ' ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ. 'ಹಿಂದು ಭಯೋತ್ಪಾದನೆ' ಎಂಬ ತಮ್ಮ ಕಲ್ಪನೆಯನ್ನು ಸಾರ್ವಜನಿಕಗೊಳಿಸುವ ಯತ್ನ ಮಾಡುತ್ತಿದ್ದಾರೆ. ಭಾರತ ದೇಶವು ಎಚ್ಚರಿಕೆಯಿಂದರಬೇಕು, ವೈರಿಗಳು ದೇಶದ ಗಡಿಗಳ ಹೊರಗೆ ಮಾತ್ರವೇ ಇಲ್ಲ ದೇಶದ ಒಳಗೂ ಇದ್ದಾರೆ'' ಎಂದಿದ್ದರು. ಪ್ರಣಿತಾರ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರಿಂದ, ಆರ್‌ಎಸ್‌ಎಸ್‌ ಬೆಂಬಲಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿತ್ತು.

ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕಠು ಶಬ್ದಗಳಲ್ಲಿ ಪ್ರಣಿತಾ ಸುಭಾಷ್ ಖಂಡಿಸಿದ್ದರು. ''ನಾವು ಮಹಿಳೆಯರನ್ನು ದೇವತೆಯಾಗಿ ಪೂಜಿಸುವ ದೇಶಕ್ಕೆ ಸೇರಿದವರು. ರಾಕ್ಷಸರನ್ನು ಕೊಂದ ಚಾಮುಂಡಿ ದೇವಿಯ ತಾಯ್ನಾಡಿನಲ್ಲಿ ಇಂತಹ ಭಯಾನಕ ಘಟನೆಯನ್ನು ನೋಡುವುದು ಹೃದಯವನ್ನು ವಿದ್ರಾವಕ. ಶ್ರೀಮಂತ ಸಂಸ್ಕೃತಿಗೆ ಹೆಸರಾದ ಮೈಸೂರು ನಗರದಲ್ಲಿ ಇಂತಹ ಘಟನೆ ನಡೆದಿದೆ ಎಂದು ಊಹಿಸಲೂ ಸಾಧ್ಯವಿಲ್ಲ'' ಎಂದು ಬರೆದುಕೊಂಡಿದ್ದರು.

ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಮೇ 30 ರಂದು ಸರಳ, ಖಾಸಗಿ ಸಮಾರಂಭದಲ್ಲಿ ಪ್ರಣಿತಾ, ಉದ್ಯಮಿ ನಿತಿನ್ ರಾಜಾ ಅವರೊಟ್ಟಿಗೆ ವಿವಾಹವಾಗಿದ್ದಾರೆ. ಮದುವೆಯ ಬಗ್ಗೆ ಮಾಧ್ಯಮಗಳಿಗೆ ಸುಳಿವು ನೀಡಿರಲಿಲ್ಲ ಪ್ರಣಿತಾ. ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ತಾವು ಮದುವೆ ಆಗಿರುವ ಸುದ್ದಿಯನ್ನು ಖಾತ್ರಿಪಡಿಸಿದರು.

ಪ್ರಣೀತಾ ಸುಭಾಷ್‌ ಕೈಯಲ್ಲಿ ಹಲವು ಸಿನಿಮಾಗಳು ಪ್ರಸ್ತುತ ಇವೆ. 'ರಾಮನ ಅವತಾರ' ಸಿನಿಮಾದಲ್ಲಿ ಪ್ರಣಿತಾ ನಟಿಸುತ್ತಿದ್ದಾರೆ. ಪ್ರಣಿತಾ ನಟಿಸಿರುವ 'ಭುಜ್' ಬಾಲಿವುಡ್ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಅದನ್ನು ಹರೊತಾಗಿ ಮತ್ತೊಂದು ಬಾಲಿವುಡ್ ಸಿನಿಮಾ 'ಹಂಗಾಮಾ 2' ಸಹ ಸಿನಿಮಾ ಬಿಡುಗಡೆ ಆಗಿ ಗಮನ ಸೆಳೆಯಿತು. ಪ್ರಸ್ತುತ ಇನ್ನೂ ಕೆಲವು ಕನ್ನಡ ಹಾಗೂ ಇತರ ಭಾಷೆಯ ಸಿನಿಮಾಗಳು ಪ್ರಣಿತಾ ಕೈಯಲ್ಲಿವೆ.

More from Filmibeat

English summary
Actress Pranitha Subhash conducts free vaccination drive from her foundation in collaboration with Rashtrothana foundation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X