For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ನೆನಪಲ್ಲಿ ಮಾನವೀಯತೆ ಮೆರೆದ ಪ್ರಣೀತಾ

  |

  ಲಾಕ್ ಡೌನ್ ಅವಧಿಯುದ್ದಕ್ಕೂ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳು, ರೇಷನ್ ಮುಂತಾದವುಗಳನ್ನು ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಪ್ರಣೀತಾ ಮತ್ತೊಮ್ಮೆ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

  ಪೊಲೀಸ್ ಇಲಾಖೆಗೆ ಸ್ಯಾನಿಟೈಸರ್‌ಗಳು, ಆಟೋ ರಿಕ್ಷಾ ಚಾಲಕರಿಗೆ ಸುರಕ್ಷತೆ ಕಾಪಾಡಿಕೊಳ್ಳಲು ಪಾರದರ್ಶಕ ಶೀಟ್‌ಗಳು ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸಿದ್ದ ಪ್ರಣೀತಾ, ತಮ್ಮ ಪ್ರಣೀತಾ ಫೌಂಡೇಷನ್ ಸಂಸ್ಥೆಯ ಮೂಲಕ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಆಹಾರ ಸಾಮಗ್ರಿಗಳನ್ನು ಪೂರೈಸಿದ್ದರು.

  ಮತ್ತೆ ಶಾಲೆಗೆ ಮರಳಿದ ನಟಿ ಪ್ರಣೀತಾ ಸುಭಾಷ್ಮತ್ತೆ ಶಾಲೆಗೆ ಮರಳಿದ ನಟಿ ಪ್ರಣೀತಾ ಸುಭಾಷ್

  ಪ್ರಣೀತಾ ಫೌಂಡೇಷನ್ ಮೂಲಕ ಶನಿವಾರ ಮತ್ತೊಂದು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ನೆನಪಲ್ಲಿ ಸಾಮಾನ್ಯ ಮಹಿಳೆಯರು ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ನೆರವು ನೀಡಿದ್ದಾರೆ.

  'ದೇವರಿಗೆ ಹತ್ತಿರವಾಗಿರುವ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ನೆನಪಲ್ಲಿ ಪ್ರಣೀತಾ ಫೌಂಡೇಷನ್ ತಂಡ ಶನಿವಾರ ಸಾಮಾನ್ಯ ಕುಟುಂಬಗಳ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ ಅನೇಕರಿಗೆ 150ಕ್ಕೂ ಹೆಚ್ಚು ರೇಷನ್ ಕಿಟ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಿದೆ ಎಂದು ಪ್ರಣೀಯಾ ಹೇಳಿಕೊಂಡಿದ್ದಾರೆ.

  ಸಮಾಜದಲ್ಲಿ ಸಂಕಷ್ಟದಲ್ಲಿರುವ ವರ್ಗಗಳ ಮಹಿಳೆಯರಿಗೆ ನೆರವಾಗುವ ಮೂಲಕ ಅವರನ್ನು ಮೇಲೆತ್ತುವ ಕಾರ್ಯದಲ್ಲಿ ನಿರತರಾಗಿರುವ ಸುಧಾ ಮೂರ್ತಿ ಅವರು ನನಗೆ ಪ್ರೇರಣೆ. ಅವರು ಸಾಗಿದ ಹಾದಿಯಲ್ಲಿ ಒಂದಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವ ಬಯಕೆ ನನ್ನದು ಎಂದು ಪ್ರಣೀತಾ ತಿಳಿಸಿದ್ದಾರೆ.

  English summary
  Actress Pranitha on Saturday has distributed ration kits and sanitary pads to the marginalised women in the memory of Chiranjeevi Sarja and Sushant Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X