twitter
    For Quick Alerts
    ALLOW NOTIFICATIONS  
    For Daily Alerts

    ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ 1 ಲಕ್ಷ ನೆರವು ನೀಡಿದ ಪ್ರಣಿತಾ ಸುಭಾಷ್

    |

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಮನೆ ಮನೆಗೆ ತಲುಪಿ ಜನರಿಂದ ದೇಣಿಗೆ ಸಂಗ್ರಹಿಸಲು ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ.

    ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ನಿಧಿ ಸಂಗ್ರಹಿಸುತ್ತಿದ್ದು, ಕನ್ನಡ ನಟಿ ಪ್ರಣಿತಾ ಸುಭಾಷ್ ನೆರವು ನೀಡಿದ್ದಾರೆ. ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಒಂದು ಲಕ್ಷ ರೂಪಾಯಿ ನೆರವು ಘೋಷಿಸಿರುವ ನಟಿ, ''ಎಲ್ಲರೂ ಕೈ ಜೋಡಿಸಿ'' ಎಂದು ಮನವಿ ಮಾಡಿದ್ದಾರೆ.

    ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಗೊತ್ತೆ ನಟಿ ಪ್ರಣಿತಾ ಸುಭಾಷ್ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಗೊತ್ತೆ ನಟಿ ಪ್ರಣಿತಾ ಸುಭಾಷ್

    ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋ ಮೂಲಕ ಮಾಹಿತಿ ನೀಡಿರುವ ಪ್ರಣಿತಾ ಸುಭಾಷ್ ''ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕಾಗಿ ನಾನು 1 ಲಕ್ಷ ರೂ ನೀಡಿದ್ದೇನೆ. ನೀವೆಲ್ಲರೂ ಕೈಜೋಡಿಸಿ ಈ ಐತಿಹಾಸಿಕ ಅಭಿಯಾನದಲ್ಲಿ ಭಾಗಿಯಾಗಿ'' ಎಂದು ವಿನಂತಿಸಿದ್ದಾರೆ.

    Pranitha subhash donates Rs 1 lakh rupees to Ayodhya Ram Mandir nidhi samarpana abhiyan

    ಅಂದ್ಹಾಗೆ, ರಾಜ್ಯದಲ್ಲಿ ಜನವರಿ 15 ರಿಂದ ಫೆಬ್ರವರಿ 27ರವರೆಗೂ ವಿಶ್ವ ಹಿಂದೂ ಪರಿಷತ್ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಿದೆ. ತಲಾ 5 ಮಂದಿಯನ್ನು ಒಳಗೊಂಡ ವಿಎಚ್‌ಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿಹಣ ಸಂಗ್ರಹಿಸಲಿದ್ದಾರೆ ಎಂದು ಕೇಂದ್ರಿಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಡಿ ಮಾಹಿತಿ ನೀಡಿದ್ದರು.

    ಪ್ರಣಿತಾ ಸುಭಾಷ್‌ರ ಮೆಚ್ಚಿನ ನಟ ಹಾಗೂ ಮೆಚ್ಚಿನ ಕನ್ನಡದ ನಟ ಯಾರು?ಪ್ರಣಿತಾ ಸುಭಾಷ್‌ರ ಮೆಚ್ಚಿನ ನಟ ಹಾಗೂ ಮೆಚ್ಚಿನ ಕನ್ನಡದ ನಟ ಯಾರು?

    ಪ್ರಣಿತಾ ಸುಭಾಷ್ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ರಾಮನ ಅವತಾರ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಭುಜ್:ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲು ಕಾಣಿಸಿಕೊಂಡಿದ್ದಾರೆ. ಹಂಗಾಮ 2 ಚಿತ್ರದಲ್ಲೂ ನಟಿಸುತ್ತಿದ್ದಾರೆ.

    Recommended Video

    ನನಗೆ ಇದು ತುಂಬಾ ಕಷ್ಟ ಆಗಿತ್ತು | Filmibeat Kannada

    English summary
    Kannada actress Pranitha subhash donates Rs 1 lakh rupees to Ayodhya Ram Mandir nidhi samarpana abhiyan.
    Wednesday, January 13, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X