'ಕಿಕಿ ಚಾಲೆಂಜ್'ನಲ್ಲಿ ಫೇಲ್ ಆದ ನಟಿ ಪ್ರಣೀತಾ ಸುಭಾಷ್.!

By Harshitha

'ಕಿಕಿ ಚಾಲೆಂಜ್' ಸಿಕ್ಕಾಪಟ್ಟೆ ಅಪಾಯಕಾರಿ... ಅದರಿಂದ ದೂರ ಇರಿ ಅಂತ ಪೊಲೀಸರು ಎಷ್ಟೇ ಮನವಿ ಮಾಡಿದ್ರೂ, 'ಕಿಕಿ ಚಾಲೆಂಜ್'ನ ಪ್ರತಿ ದಿನ ಒಬ್ಬರಲ್ಲ ಒಬ್ಬರು ಸ್ವೀಕರಿಸುತ್ತಿದ್ದಾರೆ.

ವಿದೇಶದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿದ್ದ 'ಕಿಕಿ ಚಾಲೆಂಜ್' ಇದೀಗ ಭಾರತಕ್ಕೂ ಕಾಲಿಟ್ಟಿದೆ. ನಟಿಯರಾದ ಅದಾ ಶರ್ಮಾ, ರೆಜಿನಾ, ನೋರಾ ಫತೇಹಿ, 'ಬಿಗ್ ಬಾಸ್' ಬೆಡಗಿ ನಿವೇದಿತಾ ಗೌಡ 'ಕಿಕಿ ಡು ಯು ಲವ್ ಮಿ' ಹಾಡಿಗೆ ಹೆಜ್ಜೆ ಹಾಕಿದ್ದರು.

ಇದೀಗ ಇದೇ ಸಾಲಿಗೆ ಸೇರಿರುವವರು ನಟಿ ಪ್ರಣೀತಾ ಸುಭಾಷ್. 'ಪೊರ್ಕಿ', 'ಜರಾಸಂಧ', 'ಸ್ನೇಹಿತರು', 'ಬ್ರಹ್ಮ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿಯೂ ಗುರುತಿಸಿಕೊಂಡಿರುವ ಪ್ರಣೀತಾ ಸುಭಾಷ್ 'ಕಿಕಿ ಚಾಲೆಂಜ್'ನಲ್ಲಿ ಫೇಲ್ ಆಗಿದ್ದಾರೆ. ಬೇಕಾದ್ರೆ, ನೀವೇ ಈ ವಿಡಿಯೋ ನೋಡಿ...

ಫೇಲ್ ಆದ ಪ್ರಣೀತಾ ಸುಭಾಷ್

ಜಿಪ್ಸಿಯಿಂದ ಇಳಿದು 'ಕಿಕಿ' ಹಾಡಿಗೆ ಸೊಂಟ ಬಳುಕಿಸುತ್ತಿದ್ದ ಪ್ರಣೀತಾ, ಡ್ಯಾನ್ಸ್ ಪೂರ್ಣಗೊಳಿಸುವ ಮುನ್ನವೇ ಜಿಪ್ಸಿ ಮುಂದಕ್ಕೆ ಹೊರಟು ಹೋಯ್ತು. ಈ ವಿಡಿಯೋ ನೋಡಿ ನೆಟ್ಟಿಗರು ಗಹಗಹಿಸಿ ನಗುತ್ತಿದ್ದಾರೆ.

ಒಂದ್ವೇಳೆ ಹಿಂದೆ ವಾಹನ ಬಂದಿದ್ರೆ.?

ಒಂದ್ವೇಳೆ ಹಿಂದೆ ವಾಹನ ಬಂದಿದ್ರೆ.?

ಪ್ರಣೀತಾ ಹಿಂದೆ ಬೇರೆ ಯಾವುದೇ ವಾಹನ ಬರಲಿಲ್ಲ. ಒಂದ್ವೇಳೆ ಬಂದಿದ್ರೆ.? ಅನಾಹುತ ತಪ್ಪಿದ್ದಲ್ಲ. ಇದೇ ಕಾರಣಕ್ಕೆ 'ಕಿಕಿ ಚಾಲೆಂಜ್' ಸ್ವೀಕರಿಸಬೇಡಿ ಅಂತ ಪೊಲೀಸರು ಹೇಳ್ತಿದ್ದಾರೆ. ಆದ್ರೆ, ಅದನ್ನ ಪಾಲಿಸುವ ವ್ಯವಧಾನ ಕೆಲವರಿಗಂತೂ ಇಲ್ಲವೇ ಇಲ್ಲ.

ಏನಿದು ಕಿಕಿ ಚಾಲೆಂಜ್.?

ಖ್ಯಾತ ಸಂಗೀತಗಾರ ಡ್ರೇಕ್ ರವರ ಹೊಸ ಹಾಡು 'ಕಿಕಿ ಡು ಯು ಲವ್ ಮಿ..' (ಇನ್ ಮೈ ಫೀಲಿಂಗ್ಸ್) ತಿಂಗಳ ಹಿಂದೆ ಬಿಡುಗಡೆ ಆಗಿ, ಬಹು ಜನಪ್ರಿಯತೆ ಪಡೆದಿದೆ. ಅಸಲಿಗೆ, 'ಕಿಕಿ ಚಾಲೆಂಜ್' ಶುರುವಾಗಿದ್ದು ಕೂಡ ಒಂದು ತಿಂಗಳ ಹಿಂದೆಯೇ. 'ಕಿಕಿ ಡು ಯು ಲವ್ ಮಿ..' ಹಾಡಿಗೆ ಕಾಮಿಡಿಯನ್ ಶಿಗ್ಗಿ ನಡು ಬೀದಿಯಲ್ಲಿ ಡ್ಯಾನ್ಸ್ ಮಾಡಿ, ವಿಡಿಯೋನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದರು. ಇಲ್ಲಿಂದಲೇ, 'ಕಿಕಿ ಚಾಲೆಂಜ್'/'ಇನ್ ಮೈ ಫೀಲಿಂಗ್ಸ್' ಚಾಲೆಂಜ್ ಶುರುವಾಗಿದ್ದು.! ಕಾಡ್ಗಿಚ್ಚಿನಂತೆ ಸೋಷಿಯಲ್ ಮೀಡಿಯಾದಲ್ಲಿ 'ಕಿಕಿ ಚಾಲೆಂಜ್' ಹಬ್ಬಿತು. ಚಲಿಸುತ್ತಿರುವ ಕಾರಿನಿಂದ ಇಳಿದು, ಕಾರಿನ ಸ್ಪೀಡ್ ಗೆ ತಕ್ಕ ಹಾಗೆ 'ಕಿಕಿ ಡು ಯು ಲವ್ ಮಿ...' ಹಾಡಿಗೆ ಡ್ಯಾನ್ಸ್ ಮಾಡಿ ನಂತರ ಮತ್ತೆ ಕಾರಿನೊಳಗೆ ಜಿಗಿಯುವ ಅಪಾಯಕಾರಿ ಸವಾಲು ವೈರಲ್ ಆಗಲು ಆರಂಭವಾಯ್ತು. 'ಕಿಕಿ ಚಾಲೆಂಜ್'ನ ನಡು ರಸ್ತೆಯಲ್ಲಿ ಸ್ವೀಕರಿಸಿ ಎಷ್ಟೋ ಮಂದಿ ಅಪಘಾತಕ್ಕೀಡಾಗಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ, ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ 'ಕಿಕಿ ಚಾಲೆಂಜ್'ನಿಂದ ಅವಾಂತರಗಳು ಹೆಚ್ಚಾದಂತೆ ಕೆಲವೆಡೆ ಬ್ಯಾನ್ ಮಾಡಲಾಗಿದೆ.

ಕಂಬಿ ಎಣಿಸಬೇಕಾಗುತ್ತೆ ಹುಷಾರ್.!

ಕಿಕಿ ಚಾಲೆಂಜ್ ಸ್ವೀಕರಿಸಿ, ಒಂದ್ವೇಳೆ ರೋಡ್ ನಲ್ಲಿ ಡ್ಯಾನ್ಸ್ ಮಾಡಿದರೆ ಕಂಬಿ ಎಣಿಸಬೇಕಾಗುತ್ತದೆ ಎಂದು ಬೆಂಗಳೂರು ಸಿಟಿ ಪೊಲೀಸ್ ಕೂಡ ಟ್ವೀಟ್ ಮಾಡಿದ್ದಾರೆ.

More from Filmibeat

English summary
Kannada Actress Pranitha Subhash fails in Dangerous KiKi Challenge. Watch video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X