For Quick Alerts
  ALLOW NOTIFICATIONS  
  For Daily Alerts

  ಪ್ರಣಿತಾ ಫೌಂಡೇಶನ್ ವತಿಯಿಂದ ಉಚಿತ ಕೋವಿಡ್ ಲಸಿಕೆ ಶಿಬಿರ

  |

  ಕೋವಿಡ್ ಸಂಕಷ್ಟದಲ್ಲಿ ಜನರಿಗೆ ನಟಿ ಪ್ರಣಿತಾ ಸುಭಾಷ್ ಹಲವು ರೀತಿ ಸಹಾಯ ಹಸ್ತ ಚಾಚಿದ್ದರು. ದಿನಸಿ ಕಿಟ್ ವಿತರಿಸುವುದು, ಆಹಾರ ಪೊಟ್ಟಣಗಳನ್ನು ನೀಡುವುದು, ವೈದ್ಯಕೀಯ ಚಿಕಿತ್ಸೆ ಒದಗಿಸುವುದು, ಹೀಗೆ ತಮ್ಮ ಫೌಂಡೇಶನ್ ಮೂಲಕ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.

  ಮತ್ತೊಂದು ಮಹತ್ವದ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ ನಟಿ ಪ್ರಣಿತಾ. ಇಂದು ಬೆಂಗಳೂರಿನ ಜಯನಗರದಲ್ಲಿ ಪ್ರಣಿತಾ ಫೌಂಡೇಶನ್ ವತಿಯಿಂದ ಉಚಿತ ಕೋವಿಡ್ ಲಸಿಕೆ ಶಿಬಿರ ಆಯೋಜನೆ ಮಾಡಲಾಗಿತ್ತು.

  ಪ್ರಣಿತಾ ಮದುವೆಗೆ ಶುಭಕೋರಿದ ಬಿಟೌನ್ ಸುಂದರಿ ಶಿಲ್ಪಾ ಶೆಟ್ಟಿಪ್ರಣಿತಾ ಮದುವೆಗೆ ಶುಭಕೋರಿದ ಬಿಟೌನ್ ಸುಂದರಿ ಶಿಲ್ಪಾ ಶೆಟ್ಟಿ

  ರಾಷ್ಟ್ರೋತ್ಥಾನ ಪರಿಷತ್ ಜೊತೆ ಕೈ ಜೋಡಿಸಿದ ಪ್ರಣಿತಾ ಫೌಂಡೇಶನ್ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿದೆ. ಪ್ರಣಿತಾ ಆಯೋಜಿಸಿದ್ದ ಈ ಶಿಬಿರದಲ್ಲಿ ಅನೇಕರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಣಿತಾರ ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  ವೈವಾಹಿಕ ಬದುಕು ಆರಂಭಿಸಿದ ನಟಿ

  ಇತ್ತೀಚಿಗಷ್ಟೆ ನಟಿ ಪ್ರಣಿತಾ ವೈವಾಹಿಕ ಬದುಕು ಆರಂಭಿಸಿದ್ದರು. ಲಾಕ್‌ಡೌನ್‌ ಇದ್ದ ಕಾರಣ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಉದ್ಯಮಿ ನಿತಿನ್ ರಾಜ್ ಜೊತೆ ಸರಳವಾಗಿ ವಿವಾಹವಾಗಿದ್ದರು.

  ಜೂನ್ 2 ರಂದು ಪ್ರಣಿತಾ ಮದುವೆ ನಡೆದಿತ್ತು. ಕೇವಲ ಹದಿನೈದು ದಿನಗಳು ಮಾತ್ರ ಆಗಿದೆ. ಇದರ ಜೊತೆ ಜೊತೆಯೇ ತಮ್ಮ ಸಮಾಜಮುಖಿ ಕೆಲಸದಲ್ಲೂ ನಿರತರಾಗಿರುವುದು ನಿಜಕ್ಕೂ ಶ್ಲಾಘನೀಯ.

  ಪ್ರಣಿತಾ ಸಿನಿಮಾಗಳು

  Recommended Video

  ರಿಯಲ್ ಹೀರೋ ಕಾಲಿಗೆ ಬಿದ್ದು ಕಣ್ಣೀರು ಹಾಕಿದ ಕ್ಯಾನ್ಸರ್ ರೋಗಿ | Filmibeat Kannada

  2019ರಲ್ಲಿ ತೆರೆಕಂಡಿದ್ದ ಎನ್‌ಟಿಆರ್ ಕಥಾನಾಯಕಡು ಚಿತ್ರದಲ್ಲಿ ಪ್ರಣಿತಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಸದ್ಯ ಕನ್ನಡದಲ್ಲಿ 'ರಾಮನ ಅವತಾರ' ಎಂಬ ಸಿನಿಮಾ ಮಾಡಿದ್ದಾರೆ. ಹಿಂದಿಯಲ್ಲಿ ಹಂಗಾಮಾ 2 ಹಾಗೂ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Actress pranitha subhash held a free vaccination drive in Bangalore through her Pranitha foundation.
  Thursday, June 17, 2021, 8:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X