»   » ಸೂರ್ಯ ಜೊತೆ ಪ್ರಣೀತಾ ಟಿಂಗು ಟಿಂಗು

ಸೂರ್ಯ ಜೊತೆ ಪ್ರಣೀತಾ ಟಿಂಗು ಟಿಂಗು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಬೆಂಗಳೂರು ಬೆಡಗಿ ಪ್ರಣೀತಾ, ನಾಲ್ಕೇ ವರ್ಷಗಳಲ್ಲಿ ಸ್ಯಾಂಡಲ್ ವುಡ್ ಕ್ಕಿಂತ ಹೆಚ್ಚಾಗಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲೇ ಹೆಚ್ಚು ಜನಪ್ರಿಯ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ಪ್ರಣೀತಾಗೆ ಇದೀಗ ಕಾಲಿವುಡ್ ನಿಂದ ದೊಡ್ಡ ಆಫರ್ ಹುಡುಕಿಕೊಂಡು ಬಂದಿದೆ.

ಹ್ಯಾಂಡ್ಸಮ್ ಹೀರೋ ಸೂರ್ಯ ಅಭಿನಯಿಸುತ್ತಿರುವ 'ಮಾಸ್' ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ಕಾಲಿವುಡ್ ನಿಂದ ಪ್ರಣೀತಾಗೆ ಬುಲಾವ್ ಬಂದಿದೆ. ಸೂರ್ಯ, ನಯನತಾರಾ ಒಟ್ಟಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪ್ರಣೀತಾಗೂ ಅಷ್ಟೇ ಪ್ರಮುಖ್ಯತೆ ಇದ್ಯಂತೆ. [ಆಂಧ್ರ ಪ್ರೇಕ್ಷಕರ ಕಣ್ಣು ತಂಪು ಮಾಡಿದ ನಟಿ ಪ್ರಣೀತಾ]

Pranitha Subhash in Suriya's Mass

ಮೂಲಗಳ ಪ್ರಕಾರ, ನಟಿ ಅಮಿ ಜ್ಯಾಕ್ಸನ್ ಮಾಡಬೇಕಿದ್ದ ಪಾತ್ರ ಇದೀಗ ಪ್ರಣೀತಾ ಪಾಲಾಗಿದ್ಯಂತೆ. ಆದ್ರೆ, ಅದು ನಿಜವೋ, ಇಲ್ಲ ಅಮಿ ಜೊತೆ ಪ್ರಣೀತಾಗೂ ಸ್ಪೆಷಲ್ ರೋಲ್ ಇದ್ಯಾ ಅನ್ನುವ ಬಗ್ಗೆ ಕ್ಲಾರಿಟಿ ಸಿಕ್ಕಿಲ್ಲ. ಅಮಿ ಇರಲಿ ಬಿಡಲಿ, ಪ್ರಣೀತಾ ಅಂತೂ ಇದೇ ವಾರ ಸೂರ್ಯನ ಜೊತೆ ಮಾಸ್ ಹೀರೋಯಿನ್ ಆಗಿ ಬಲ್ಗೇರಿಯಾಗೆ ಹಾರ್ತಿದ್ದಾರೆ. [ದಂತದಗೊಂಬೆ ಪ್ರಣೀತಾ ಸಂಭಾವನೆ ಗಗನಕುಸುಮ]

ಪಕ್ಕಾ ಹಾರರ್-ಥ್ರಿಲ್ಲರ್ ಸಿನಿಮಾ ಆಗಿರುವ 'ಮಾಸ್'ನಲ್ಲಿ ಪ್ರಣೀತಾ ಪಾತ್ರದ ವಿವರಗಳು ಗುಟ್ಟಾಗೇ ಇವೆ. 'ಶಗುನಿ', 'ಅತ್ತಾರಿಂಟಿಕಿ ದಾರೇದಿ', 'ರಭಸ' ಚಿತ್ರಗಳಲ್ಲಿನ ಪ್ರಣೀತಾ ಆಕ್ಟಿಂಗ್ ನೋಡಿ ನಿರ್ದೇಶಕ ವೆಂಕಟ್ ಪ್ರಭು 'ಮಾಸ್' ಸಿನಿಮಾಗೆ ಸೆಲೆಕ್ಟ್ ಮಾಡಿದ್ರಂತೆ. [ನಟಿ ಪ್ರಣೀತಾ ತುಟಿಗೆ ತುಟಿ ಒತ್ತಿದ ಈ ನಟನ್ಯಾರು?]

ಅಚಾನಕ್ಕಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ, ಇದೀಗ ಮೂರ್ಮೂರು ಭಾಷೆಗಳಲ್ಲಿ ಬಿಜಿಯಾಗಿರುವುದು ಉತ್ತಮ ಬೆಳವಣಿಗೆಯೇ..ಅಲ್ವಾ?

English summary
Kannada Actress Pranitha Subhash has bagged the offer to star opposite Suriya in Mass. There is also a buzz that Pranitha has replaced Amy Jackson in the movie, but it is still not clear. The team is set to head to Bulgaria this month end for the shoot.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada