For Quick Alerts
  ALLOW NOTIFICATIONS  
  For Daily Alerts

  ಗುಟ್ಟಿನ ಮದುವೆ ಬಗ್ಗೆ ನಟಿ ಪ್ರಣಿತಾ ಸ್ಪಷ್ಟನೆ: ಕೊಟ್ಟ ಕಾರಣವೇನು?

  |

  ನಟಿ ಪ್ರಣಿತಾ ಸುಭಾಷ್ ವಿವಾಹವಾಗಿರುವ ಸುದ್ದಿ ಇಂದು ಹಠಾತ್ತನೆ ಹೊರ ಬಿದ್ದಿದೆ. ಶುಕ್ರವಾರವಷ್ಟೆ ಮಾಧ್ಯಮದವರೊಟ್ಟಿಗೆ ಮಾತನಾಡಿ 'ಮದುವೆ ಆಗಿಲ್ಲ. ಒಂದೊಮ್ಮೆ ಆದರೆ ನಿಮಗೆ ತಿಳಿಸದೇ ಇರುತ್ತೇನಾ?' ಎಂದಿದ್ದ ಪ್ರಣಿತಾ ಗುಟ್ಟಾಗಿ ಮದುವೆ ಆಗಿದ್ದು, ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

  Recommended Video

  ಗುಟ್ಟಿನ ಮದುವೆಯ ಬಗ್ಗೆ ಮಾತನಾಡಿದ ಪ್ರಣೀತಾ | Filmibeat Kannada

  ಪ್ರಣಿತಾ ಕೆಲವು ದಿನಗಳ ಹಿಂದೆಯೇ ಕನಕಪುರ ರಸ್ತೆಯ ರೆಸಾರ್ಟ್‌ ಒಂದರಲ್ಲಿ ವಿವಾಹವಾಗಿದ್ದಾರೆ ಎನ್ನಲಾಗುತ್ತಿತ್ತು. ಆದರೆ ತಮ್ಮ ಮದುವೆ ಸುದ್ದಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಪ್ರಣಿತಾ, 'ಮೇ 30 ರಂದು ಕೆಲವೇ ಕುಟುಂಬದ ಸದಸ್ಯರ ಮುಂದೆ ಸರಳವಾಗಿ ವಿವಾಹವಾಗಿದ್ದೇನೆ' ಎಂದಿದ್ದಾರೆ.

  ಮುಂದುವರೆದು, 'ನಿಮಗೆಲ್ಲ ಮಾಹಿತಿ ತಿಳಿಸಲು ಸಾಧ್ಯವಾಗದೇ ಇದ್ದುದ್ದಕ್ಕೆ ನಾವು ಬೇಸರ ವ್ಯಕ್ತಪಡಿಸುತ್ತೇವೆ. ಮದುವೆ ದಿನಾಂಕ ಬಹಳ ತಡವಾಗಿ ಅಂತಿಮವಾದ ಕಾರಣ ಯಾರಿಗೂ ಮಾಹಿತಿ ನೀಡಲಾಗಲಿಲ್ಲ' ಎಂದಿದ್ದಾರೆ. ಮೇ 29ರ ವರೆಗೆ ಮದುವೆ ದಿನಾಂಕ ನಿಗದಿಯಾಗಿರಲಿಲ್ಲ. ಅಚಾನಕ್ಕಾಗಿ ದಿನಾಂಕ ನಿಗದಿಯಾಗಿ ಮದುವೆ ಆಗಬೇಕಾಯಿತು ಎಂದಿದ್ದಾರೆ ಪ್ರಣಿತಾ.

  'ಮದುವೆ ನಡೆಯುತ್ತದೆಯೋ, ಇಲ್ಲವೋ ಅನುಮಾನವಿತ್ತು'

  'ಮದುವೆ ನಡೆಯುತ್ತದೆಯೋ, ಇಲ್ಲವೋ ಅನುಮಾನವಿತ್ತು'

  'ಕೋವಿಡ್ ನಿಯಮಾವಳಿಗಳು ಇರುವ ಕಾರಣ ಮದುವೆ ನಡೆಯುತ್ತದೆಯೋ ಇಲ್ಲವೊ ಎಂಬ ಬಗ್ಗೆ ನಮಗೆ ಸಹ ಗ್ಯಾರೆಂಟಿ ಇರಲಿಲ್ಲ. ನಮ್ಮ ಮದುವೆ ದಿನಾಂಕ ಘೋಷಿಸಿ ಮತ್ತೆ ಮುಂದೂಡುವುದು ಎಲ್ಲ ಇಷ್ಟವಿಲ್ಲದ ಕಾರಣ ನಾವು ಹಠಾತ್ ನಿರ್ಣಯ ತೆಗೆದುಕೊಂಡೆವು ಎಂದಿದ್ದಾರೆ ಪ್ರಣಿತಾ.

  ಪರಿಸ್ಥಿತಿ ಸರಿ ಹೋದ ಮೇಲೆ ಸಿಗೋಣ: ಪ್ರಣಿತಾ

  ಪರಿಸ್ಥಿತಿ ಸರಿ ಹೋದ ಮೇಲೆ ಸಿಗೋಣ: ಪ್ರಣಿತಾ

  ''ನಮ್ಮ ಪ್ರೀತಿ ಪಾತ್ರರು ಈ ಮಹತ್ವದ ದಿನದಲ್ಲಿ ನಮ್ಮ ಜೊತೆಗೆ ಇರಬೇಕೆನ್ನುವುದು ನಮ್ಮ ಆಸೆ ಸಹ ಆಗಿತ್ತು. ನೀವು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತೀರಿ. ಆದರೆ ನಿಮಗೆ ಮಾಹಿತಿ ನೀಡಲಾಗದೇ ಇದ್ದುದ್ದಕ್ಕೆ ಕ್ಷಮೆ ಕೇಳುತ್ತೇನೆ. ಎಲ್ಲವೂ ಸರಿ ಹೋದ ಬಳಿಕ ನಾವೆಲ್ಲರೂ ಒಟ್ಟಿಗೆ ಭೇಟಿಯಾಗಿ ಸಂಭ್ರಮ ಆಚರಿಸೋಣ' ಎಂದಿದ್ದಾರೆ ಪ್ರಣಿತಾ.

  ಉದ್ಯಮಿಯೊಂದಿಗೆ ಪ್ರಣಿತಾ ವಿವಾಹ

  ಉದ್ಯಮಿಯೊಂದಿಗೆ ಪ್ರಣಿತಾ ವಿವಾಹ

  ನಟಿ ಪ್ರಣಿತಾ ಉದ್ಯಮಿ ನಿತಿನ್ ರಾಜಾ ಎಂಬುವನ್ನು ವಿವಾಹವಾಗಿದ್ದಾರೆ. ಪ್ರಣಿತಾ ಇಂದು ಬರೆದಿರುವ ಬಹಿರಂಗ ಪತ್ರದಲ್ಲಿ ಸಹ ಪ್ರಣಿತಾ ಸುಭಾಷ್ ಹೆಸರಿನ ಬದಲಿಗೆ ಪ್ರಣಿತಾ ನಿತಿನ್ ಹೆಸರೇ ಇದೆ. ನಿತಿನ್ ಉದ್ಯಮಿಯಾಗಿದ್ದು ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್ ಹೊಂದಿದ್ದಾರೆ ಎನ್ನಲಾಗಿದೆ.

  ಹಲವು ಭಾಷೆಗಳ ಸಿನಿಮಾದಲ್ಲಿ ನಟನೆ

  ಹಲವು ಭಾಷೆಗಳ ಸಿನಿಮಾದಲ್ಲಿ ನಟನೆ

  ದರ್ಶನ್ ನಾಯಕರಾಗಿ ನಟಿಸಿದ್ದ 'ಪೊರ್ಕಿ' ಸಿನಿಮಾದ ಮೂಲಕ ನಟನೆ ಆರಂಭಿಸಿದ ನಟಿ ಪ್ರಣಿತಾ, ಕನ್ನಡ, ತೆಲುಗು, ತಮಿಳು ಈಗ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಅಜಯ್ ದೇವಗನ್ ನಟನೆಯ ಭುಜ್ ಹಾಗೂ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ನಟನೆ 'ಹಂಗಾಮಾ 2' ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ.

  English summary
  Actress Pranitha Subhash Marriage: Actress reveals the reason behind intimate wedding with Nitin Raju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X