For Quick Alerts
  ALLOW NOTIFICATIONS  
  For Daily Alerts

  ಬಾಬ್ರಿ ಮಸೀದಿ ದ್ವಂಸ ಪ್ರಕರಣ ತೀರ್ಪು: 'ಕ್ಷಮಿಸಿ, ಆದ್ರೆ ಮರೆಯಬೇಡಿ'- ಪ್ರಣಿತಾ

  |

  ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ತೀರ್ಪು ಹೊರಬಿದ್ದಿತ್ತು. ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ನಿರ್ದೋಷಿ ಎಂದು ಕೋರ್ಟ್ ಆದೇಶಿಸಿದೆ.

  ನ್ಯಾಯಾಲಯದ ತೀರ್ಪು ಪ್ರಕಟವಾದ ಬಳಿಕ ನಟಿ ಪ್ರಣಿತಾ ಸುಭಾಷ್ ಟ್ವೀಟ್ ಮಾಡಿದ್ದು, ''ಕರಸೇವಕರ ಮೇಲೆ ಪೊಲೀಸ್ ತಂಡ ಗುಂಡು ಹಾರಿಸಿದಾಗ ನ್ಯಾಯ ಎಲ್ಲಿತ್ತು. ರಾಜಕೀಯ ನಾಯಕರನ್ನು ಬಂಧಿಸಿದಾಗ ಕಾನೂನಿನ ನಿಯಮ ಎಲ್ಲಿತ್ತು?'' ಎಂದು ಪ್ರಶ್ನಿಸಿದ್ದಾರೆ.

  ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ

  ''ಕ್ಷಮಿಸಿ ಆದರೆ ಮರೆಯಬೇಡಿ'' ಎಂದು ಹೇಳಿರುವ ಪ್ರಣಿತಾ #BabriDemolitionCase #BabriMasjidDemolition ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

  ತೀರ್ಪಿನಲ್ಲಿ ಏನಿದೆ?

  ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಎಸ್. ಕೆ ಯಾದವ್ ತೀರ್ಪು ಪ್ರಕಟಿಸಿದ್ದು, ಬಾಬ್ರಿ ಮಸೀದಿ ಧ್ವಂಸಗೊಳಿಸಿದ್ದು ಪೂರ್ವ ನಿಯೋಜಿತವಲ್ಲ ಎಂದು ಆದೇಶಿಸಿದರು. ಧ್ವಂಸಕ್ಕೆ ಯಾವುದೇ ಕ್ರಿಮಿನಲ್ ಸಂಚು ರೂಪಿಸಿಲ್ಲ, ಇದು ಉದ್ರಿಕ್ತರಿಂದ ಆದ ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ. ಈ ಮೂಲಕ 28 ವರ್ಷಗಳ ಕೇಸ್‌ ಕೊನೆಯಾಗಿದೆ.

  ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಮುಂಚೆ ಈ ಸ್ಟೋರಿ ನೋಡಿ | Filmibeat Kannada

  ಘಟನೆ ಹಿನ್ನೆಲೆ

  1992ರ ಡಿಸೆಂಬರ್ 6ರಂದು ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ ಮಾಡಲಾಗಿತ್ತು. 28 ವರ್ಷದಷ್ಟು ಹಳೆಯ ಪ್ರಕರಣವಾದ ಬಾಬ್ರಿ ಮಸೀದಿ ಧ್ವಂಸದ ವಾದ-ಪ್ರತಿವಾದ 2020 ಸೆಪ್ಟೆಂಬರ್ 1ರಂದು ಮುಕ್ತಾಯಗೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ತೀರ್ಪು ಪ್ರಕಟವಾಗಬೇಕಿತ್ತು. ಆದ್ರೆ, ಕೊರೊನಾ ವೈರಸ್ ಕಾರಣದಿಂದ ಸೆಪ್ಟೆಂಬರ್ 30ಕ್ಕೆ ತೀರ್ಪು ಬಂದಿದೆ.

  English summary
  Kannada actress Pranitha subhash has react on Babri Masjid Demolition verdict.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X