ಮಾಸ್ಕ್ ಧರಿಸುತ್ತಿರುವ ಎಲ್ಲರೂ ನಟಿ ಪ್ರಣಿತಾ ಮಾತು ಕೇಳಲೇಬೇಕು
ಕೊರೊನಾ ಕಾಲದಲ್ಲಿ ಎಲ್ಲರೂ ಮಾಸ್ಕ್‌ಧಾರಿಗಳಾಗಿದ್ದಾರೆ. ಕೊರೊನಾ ತಡೆಯುವಲ್ಲಿ ಮಾಸ್ಕ್ ಎಲ್ಲದಕ್ಕಿಂತ ಮುಖ್ಯ ಸಾಧನವಾಗಿ ವಿಶ್ವದಾದ್ಯಂತ ಜನರು ಬಳಸುತ್ತಿದ್ದಾರೆ.
Recommended Video
ಕೊರೊನಾ ಹರಡದಂತೆ ತಡೆಯಲು ಮಾಸ್ಕ್ ಬಳಸುತ್ತಿರುವವರನ್ನು ಉದ್ದೇಶಿಸಿ ನಟಿ ಪ್ರಣಿತಾ ಸುಭಾಶ್ ಅವರು ಕೇಳಲೇಬೇಕಾದ ಕೆಲವು ಮಾತುಗಳನ್ನು ಹೇಳಿದ್ದಾರೆ.
ಪ್ರಣಿತಾ ಸುಭಾಶ್ ಹೇಳಿರುವ ಪ್ರಕಾರ, ಕೊರೊನಾ ಬರದಂತೆ ತಡೆಯಲು ಬಹುಮುಖ್ಯ ಮಾಸ್ಕ್ ಬಳಸುವುದು ಅತ್ಯಂತ ಅವಶ್ಯಕ ಆದರೆ ಬಳಸಿ ಬಿಸಾಡುವ ಮಾಸ್ಕ್ ಬಳಸುವುದು ಇನ್ನಷ್ಟು ಸಮಸ್ಯೆಯನ್ನು ಸೃಷ್ಟಿಸಲಿದೆಯಂತೆ.

ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ
ಬೆಂಗಳೂರು ಒಂದರಲ್ಲಿಯೇ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಪ್ರತಿಯೊಬ್ಬರೂ ಈಗ ಮಾಸ್ಕ್ ಬಳಸುತ್ತಿದ್ದಾರೆ. ಒಂದೊಮ್ಮೆ ಎಲ್ಲರೂ ಬಳಸಿ ಬಿಸಾಡುವ ಮಾಸ್ಕ್ ಧರಿಸಿದರೆ ಎಷ್ಟು ತ್ಯಾಜ್ಯ ಸೃಷ್ಟಿಯಾಗುತ್ತದೆ. ಸೋಂಕಿತರು ಬಳಸಿ ಬಿಸಾಡಿದ ಮಾಸ್ಕ್‌ನಿಂದ ಸೋಂಕು ಮತ್ತೊಬ್ಬರಿಗೆ ಹರಡುವ ಅಪಾಯವೂ ಇರುತ್ತದೆ.

ಮರುಬಳಕೆ ಮಾಡಬಲ್ಲ ಮಾಸ್ಕ್ ಬಳಸಲು ಮನವಿ
ಹಾಗಾಗಿ ಎಲ್ಲರೂ ದಯವಿಟ್ಟು ಮತ್ತೆ ಬಳಸಬಲ್ಲ ಮಾಸ್ಕ್ ಅನ್ನೇ ಬಳಸಿ ಎಂದಿದ್ದಾರೆ ನಟಿ ಪ್ರಣಿತಾ ಸುಭಾಶ್. ತೊಳೆದು ಧರಿಸಬಲ್ಲ ಬಟ್ಟೆಯ ಮಾಸ್ಕ್‌ಗಳನ್ನು ಎಲ್ಲರೂ ಬಳಸಿ ಇದರಿಂದ ತ್ಯಾಜ್ಯ ಸೃಷ್ಟಿಯಾಗುವುದಿಲ್ಲ ಎಂದಿದ್ದಾರೆ ಪ್ರಣಿತಾ.

ಜನಗ್ರಹ ಮೂಲಕ ಮಾಸ್ಕ್ ವಿತರಣೆ
ಜನಗ್ರಹ ಮೂಲಕ ಪ್ರಣಿತಾ ಅವರು ಈ ವರೆಗೆ 200 ಮರುಬಳಕೆ ಮಾಡಬಲ್ಲ ಮಾಸ್ಕ್‌ಗಳನ್ನು ಉಚಿತವಾಗಿ ಒದಗಿಸಿದ್ದಾರಂತೆ. ಜನಗ್ರಹ ಉಚಿತವಾಗಿ ಬಳಸಬಲ್ಲ ಮಾಸ್ಕ್‌ಗಳನ್ನು ಅಗತ್ಯ ಇರುವವರಿಗೆ ನೀಡುತ್ತಿದೆ ಅದರ ಸಹಾಯ ಪಡೆದುಕೊಳ್ಳಿ ಎಂದು ಸಹ ಪ್ರಣಿತಾ ಹೇಳಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಣಿತಾ
ಕನ್ನಡತಿ ಪ್ರಣಿತಾ ಅವರು ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅವರ ಅಭಿನಯದ ಭುಜ್ ಮತ್ತು ಹಂಗಾಮಾ 2 ಬಿಡುಗಡೆಗೆ ತಯಾರಾಗಿವೆ. ಅವರ ಅಭಿನಯದ ಕನ್ನಡದ ರಾಮನ ಅವತಾರ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ.


Click it and Unblock the Notifications











