''ಅಬ್‌ ಕಿ ಬಾರ್‌ 400 ಪಾರ್‌'' ಎಂದು ನಗೆಪಾಟಲಿಗೀಡಾದ ಪೊರ್ಕಿ ಪ್ರಣೀತಾ...!

By ಫಿಲ್ಮಿಬೀಟ್ ಡೆಸ್ಕ್

ಪ್ರಣೀತಾ ಸುಭಾಶ್ ಮತ್ತು ಕಂಗನಾ ರಣಾವತ್ ನಡುವೆ ಹೆಚ್ಚೇನು ವ್ಯತ್ಯಾಸ ಇಲ್ಲ. ಯಾಕೆಂದರೆ ಇಬ್ಬರು ಸನಾತನ ಧರ್ಮದ ಅನುಯಾಯಿ. ಇನ್ನೂ.. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಈ ಇಬ್ಬರಿಗೂ ಇರುವ ಅಭಿಮಾನ ಅಷ್ಟಿಷ್ಟಲ್ಲ.

ತಮ್ಮ ಈ ಶ್ರದ್ಧೆ ಮತ್ತು ಭಕ್ತಿಯ ಕಾರಣಕ್ಕೆ ಕಂಗನಾ ರಣಾವತ್ ಅವರಂತೆಯೇ ಅನೇಕ ಬಾರಿ ಪ್ರಣೀತಾ ಅನೇಕರ ಕಣ್ಣು ಕೆಂಪಾಗಿಸಿದ್ದು ಇದೆ. ಟ್ರೋಲ್ ಆಗಿದ್ದು ಇದೆ. ಆದರೂ ಕೂಡ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸವನ್ನ ನಿಷ್ಠೆಯಿಂದ ಮಾಡ್ತಾನೇ ಬಂದ ಪ್ರಣೀತಾ ಈಗ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದ್ದಾರೆ.

pranitha-subhash-trolled-for-saying-ab-ki-baar-400-paar-just-before-the-results-of-the-elections

ಹೌದು.. ಅಸಲಿಗೆ ಈ ಚುನಾವಣೆಯ ಫಲಿತಾಂಶವನ್ನ ಬಹುತೇಕರು ನಿರೀಕ್ಷೆ ಮಾಡಿರಲಿಲ್ಲ. ಯಾಕೆಂದರೆ.. ದೇಶವ್ಯಾಪಿ ಮೋದಿ ಅಲೆ ಇನ್ನೂ ಇದೆ ಎಂದು ಎಲ್ಲರು ಅಂದುಕೊಂಡಿದ್ದರು.ಜನಸಾಮಾನ್ಯರಿಂದ ಹಿಡಿದು ಜನಪ್ರತಿನಿಧಿಗಳವರೆಗೆ ಅಬ್‌ ಕಿ ಬಾರ್‌ 400 ಪಾರ್‌ ಎಂಬ ಮಂತ್ರವನ್ನೇ ಹೇಳುತ್ತಿದ್ದರು. ಪ್ರಣೀತಾ ಸುಭಾಶ್ ಕೂಡ ಇದರಿಂದ ಹೊರತಾಗಿರಲಿಲ್ಲ. ಇದಕ್ಕೆ ಪುರಾವೆ ಎಂಬಂತೆ ನಿನ್ನೆ ಅತ್ಯಂತ ಆತ್ಮ ವಿಶ್ವಾಸದಲ್ಲಿ ಪ್ರಣೀತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಾರ್ಥಕ ಚಿಹ್ನೆಯ ಸಮೇತ ಅಬ್‌ ಕಿ ಬಾರ್‌ 400 ಪಾರ್‌ ಎಂದು ಬರೆದುಕೊಂಡಿದ್ದರು. ಆದರೆ ಅಂದುಕೊಂಡಿದ್ದು ಒಂದು. ಆಗಿದ್ದು ಮತ್ತೊಂದು.

ಯಾಕೆಂದರೆ ನಿನ್ನೆ ಹೊರ ಬಂದ ಫಲಿತಾಂಶದಲ್ಲಿ ಆಡಳಿತಾರೂಢ ಎನ್‌ಡಿಎಗೆ ಸರಳ ಬಹುಮತ ಸಿಕ್ಕಿದೆ. ಇಂಡಿಯಾ ಮೈತ್ರಿ ಕೂಟ ಸ್ಥಾನ ಗಳಿಕೆ ಹೆಚ್ಚಾಗಿದೆ. ಆದರೆ ಅತ್ತ ಎನ್‌ಡಿಎನಲ್ಲಿ ಸಂತಸ ಇಲ್ಲ. ಇತ್ತ ಪ್ರತಿಪಕ್ಷ ಇಂಡಿಯಾ ಮೈತ್ರಿ ಕೂಟ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಎನ್‌ಡಿಎ ಅಂಗ ಪಕ್ಷಗಳ ಮೇಲೆ ಇಂಡಿಯಾ ಮೈತ್ರಿ ಕೂಟ ಕಣ್ಣು ಬಿದ್ದಿದೆ. ಇತ್ತ, ಎನ್‌ಡಿಎ ಕೂಡಾ ತನ್ನ ಮಿತ್ರ ಪಡೆಯನ್ನು ಭದ್ರ ಮಾಡಿಕೊಳ್ಳುವ ಎಚ್ಚರಿಕೆಯ ನಡೆ ಅನುಸರಿಸುತ್ತಿದೆ.

pranitha-subhash-trolled-for-saying-ab-ki-baar-400-paar-just-before-the-results-of-the-elections

ಹೀಗಾಗಿಯೇ ಪ್ರಣೀತಾ ಸುಭಾಷ್ ಅವರ ಅಬ್‌ ಕಿ ಬಾರ್‌ 400 ಪಾರ್‌ ಎಂಬ ಘೋಷಣೆಯನ್ನ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಲೇವಡಿ ಮಾಡುತ್ತಿದ್ದಾರೆ. ಪ್ರಣಿತಾ ಸುಭಾಷ್ ಅವರ ಕಾಲೆಳೆಯುತ್ತಿದ್ದಾರೆ. ಮುನ್ನೂರರ ಗಡಿಯನ್ನೂ ಕೂಡ ತಲುಪಲು ಸಾಧ್ಯವಾಗಲಿಲ್ಲ, ನೀವು 400ರ ಲೆಕ್ಕಾಚಾರ ಹಾಕಿದ್ದೀರಲ್ಲ ಎನ್ನುತ್ತಿರುವ ಅನೇಕರು ಭವಿಷ್ಯದಲ್ಲಿಯೂ ಹೀಗೆ ಕನಸು ಕಾಣ್ತೀರಿ ಎಂದಿದ್ದಾರೆ. ಅಬ್ ಕಿ ಬಾರ್ ಭಾರತ್ ಪಾರ್ ಎಂದು ಕೂಡ ಪ್ರಣೀತಾ ಸುಭಾಷ್ ಅವರಿಗೆ ಸಾಮಾಜಿಕ ಜಾಲತಾಣದ ನಿರ್ದಿಷ್ಟ ಗುಂಪಿನ ಸದಸ್ಯರು ಹೇಳುತ್ತಿದ್ದಾರೆ.

ಸದ್ಯಕ್ಕೆ ಪ್ರಣೀತಾ ಸುಭಾಷ್ ಅವರ ಈ ''ಅಬ್‌ ಕಿ ಬಾರ್‌ 400 ಪಾರ್‌'' ಎಂಬ ಮನದ ಮಾತು ನಗೆಪಾಟಲಿಗೀಡಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ { ಎಕ್ಸ್ } ವೈರಲ್ ಕೂಡ ಆಗಿದೆ. 338 ಬಾರಿ ಪ್ರಣೀತಾ ಸುಭಾಷ್ ಅವರ ಈ ಟ್ವೀಟ್‌ನ ರೀಟ್ವೀಟ್ ಕೂಡ ಮಾಡಲಾಗಿದೆ.

More from Filmibeat

English summary
Multilingual actress Pranitha Subhash trolled for saying "Ab Ki Baar 400 Paar" just before the results of the Lok Sabha Election in 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X