ಹಳೇ ಫೋಟೊ ಹಾಕಿ ಪ್ರಣೀತಾ ಭೀಮನ ಅಮಾವಾಸ್ಯೆ ಪೋಸ್ಟ್; ಮತ್ತದೇ ಚರ್ಚೆ, ಟೀಕೆ

ನಾಡಿನ ಕೆಲವು ಭಾಗಗಳಲ್ಲಿ ಭೀಮನ ಅಮಾವಾಸ್ಯೆ ವಿಶೇಷ ಹಬ್ಬ. ಈ ದಿನವನ್ನು ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನ ಪಾರ್ವತಿ ಪರಮೇಶ್ವರರನ್ನು ಪೂಜಿಸಲಾಗುತ್ತದೆ. ಮದುವೆಯಾಗದ ಹೆಣ್ಣುಮಕ್ಕಳು ಗುಣಸಂಪನ್ನ ದೀರ್ಘಾಯಸ್ಸಿನ ಪತಿ, ಸುಖೀ ದಾಂಪತ್ಯ ಪ್ರಾಪ್ತಿಗೆ ವ್ರತ ಆಚರಿಸುತ್ತಾರೆ. ಸುಮಂಗಲಿಯರು ತಮ್ಮ ಮಾಂಗಲ್ಯ ಭಾಗ್ಯ ಶಾಶ್ವತವಾಗಿರಲಿ ಎಂದು ವ್ರತ ಇದ್ದು ಪತಿಯ ಪಾದ ಪೂಜೆ ಮಾಡುತ್ತಾರೆ.

ಕನ್ನಡ ಸಿನಿಮಾ ತಾರೆಯರು ಕೂಡ ಭೀಮನ ಅಮಾವಾಸ್ಯೆ ಆಚರಿಸುತ್ತಾರೆ. ನಟಿಯರಾದ ಪ್ರಿಯಾಂಕ ಉಪೇಂದ್ರ, ಪ್ರಣೀತಾ ಸುಭಾಷ್ ಭೀಮನ ಅಮಾವಾಸ್ಯೆ ಆಚರಣೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಮದುವೆ ಆಗಿದ್ದ ನಟಿ ಸೋನಲ್ ಮಂಥೆರೋ ಈ ವರ್ಷ ಭೀಮನ ಅಮಾವಾಸ್ಯೆ ಆಚರಿಸಿ ಪತಿ ತರುಣ್ ಸುಧೀರ್ ಪಾದಪೂಜೆ ಮಾಡಿದ್ದಾರೆ. ನಟಿ ಪ್ರಣೀತಾ ಈ ಹಿಂದೆ ಭೀಮನ ಅಮವಾಸ್ಯೆ ಆಚರಿಸಿದ ಫೋಟೊ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.

Pranitha Subhash s Bhimana Amavasya Post Sparks Debate Wins Praise for Upholding Tradition

ಟ್ವಿಟ್ಟರ್‌ನಲ್ಲಿ ಪ್ರಣೀತಾ ಸುಭಾಷ್ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಕೇವಲ 2 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ವೀವ್ಸ್, 500ಕ್ಕೂ ಅಧಿಕ ರೀ-ಟ್ವೀಟ್, 7 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ನೂರಕ್ಕೂ ಅಧಿಕ ಕಾಮೆಂಟ್ಸ್ ಬಂದಿದೆ. ಪ್ರಣೀತಾ ಪತಿಯ ಪಾದಪೂಜೆ ಮಾಡಿರುವ ಬಗ್ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಸಾಕಷ್ಟು ಜನ ನೀವು ಸನಾತನ ಧರ್ಮ ಪಾಲಿಸುತ್ತಿದ್ದೀರಾ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಮಾತ್ರ ಚಕಾರ ಎತ್ತಿದ್ದಾರೆ. ಮಹಿಳೆ ತನ್ನ ಪತಿಯ ಕಾಲಿಗೆ ಬೀಳುವುದು ಯಾವ ಸಂಪ್ರದಾಯ. ಸಮಾಜದಲ್ಲಿ ಪುರುಷ, ಸ್ತ್ರೀ ಎಲ್ಲರೂ ಸಮಾನರು. ಆಕೆ ಪತಿಯ ಕಾಲಡಿ ಕೂರುವವಳು ಅಲ್ಲ, ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಸದ್ಯ ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಎರಡು ವರ್ಷಗಳ ಹಿಂದೆ ಕೂಡ ಪ್ರಣೀತಾ ಇದೇ ರೀತಿ ಭೀಮನ ಅಮಾವಾಸ್ಯೆ ಆಚರಿಸಿ ಪತಿಯ ಪಾದಪೂಜೆ ಮಾಡಿರುವ ಫೋಟೊ ಹಂಚಿಕೊಂಡಿದ್ದರು. ಆಗ ಕೂಡ ಇಂಥದ್ದೆ ಟೀಕೆ ವ್ಯಕ್ತವಾಗಿತ್ತು. ಅದಕ್ಕೆ ಪ್ರಣೀತಾ ಸರಿಯಾದ ತಿರುಗೇಟು ನೀಡಿದ್ದರು.

"ಭೀಮನಾಮಾವಾಸ್ಯೆಯಂದು ಪಾದ ಪೂಜೆ ಮಾಡಿದೆ. ನಿಮಗೆ, ಇದು ಪಿತೃಪ್ರಧಾನತೆಯ ಪ್ರದರ್ಶನವಾಗಿರಬಹುದು. ಆದರೆ ನನಗೆ, ಇದು ಬಹಳ ಮುಖ್ಯ. ಸನಾತನ ಧರ್ಮದಲ್ಲಿ, ಹೆಚ್ಚಿನ ಆಚರಣೆಗಳು ಯಾಕೆ ಮಹತ್ವ ಎನ್ನುವುದಕ್ಕೆ ಹಿನ್ನೆಲೆ ಇದೆ. ಹಿಂದೂ ಆಚರಣೆಗಳು ಪಿತೃಪ್ರಧಾನ ಎಂದು ವಾದಿಸುವುದು ಸಂಪೂರ್ಣವಾಗಿ ಆಧಾರರಹಿತ. ಏಕೆಂದರೆ ಇದು ಸ್ತ್ರೀ ದೇವತೆಗಳನ್ನು ಸಮಾನವಾಗಿ ಪೂಜಿಸುವ ಕೆಲವೇ ನಂಬಿಕೆಗಳಲ್ಲಿ ಒಂದಾಗಿದೆ" ಎಂದು ನಟಿ ಪ್ರಣೀತಾ ಟ್ವೀಟ್ ಮಾಡಿದ್ದರು.

ಕಳೆದ ವರ್ಷ ನಟಿ ಪ್ರಣೀತಾ ಸುಭಾಷ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ಮಕ್ಕಳ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದರು. 4 ವರ್ಷಗಳ ಹಿಂದೆ ಉದ್ಯಮಿ ನಿತಿನ್ ರಾಜು ಎಂಬುವವರ ಜೊತೆ ಪ್ರಣೀತಾ ಮದುವೆ ನೆರವೇರಿತ್ತು. ಮರುವರ್ಷ ಹೆಣ್ಣು ಮಗುವಿನ ತಾಯಿ ಆಗಿದ್ದರು. ಬಳಿಕ ಗಂಡು ಮಗುವನ್ನು ದಂಪತಿ ಸ್ವಾಗತಿಸಿದ್ದರು.

ಮಾಡೆಲಿಂಗ್ ಮೂಲಕ ಪ್ರಣೀತಾ ಚಿತ್ರರಂಗಕ್ಕೆ ಬಂದಿದ್ದರು. ದರ್ಶನ್ ಜೋಡಿಯಾಗಿ 'ಪೊರ್ಕಿ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು. 'ರಾಮನ ಅವತಾರ' ನಂತರ ಯಾವುದೇ ಹೊಸ ಸಿನಿಮಾವನ್ನು ಆಕೆ ಒಪ್ಪಿಕೊಳ್ಳಲಿಲ್ಲ.

More from Filmibeat

English summary
Pranitha Subhash Bhimana Amavasya wishes post goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X