"ಆ ಮನೆಯಲ್ಲಿ ನಮ್ಮ ಮಗಳು ಚೆನ್ನಾಗಿರುತ್ತಾಳೆ ಎಂಬ ನಂಬಿಕೆ ಇದೆ": ಪ್ರಸಾದ್ ಬಿದ್ದಪ್ಪ
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಕಲ್ಯಾಣ ಅದ್ಧೂರಿಯಾಗಿ ನೆರವೇರಿದೆ. ವಿವಿಧ ಕ್ಷೇತ್ರಗಳ ಗಣ್ಯರು ಕಲ್ಯಾಣೋತ್ಸವಕ್ಕೆ ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದಾರೆ. ಅಂಬಿ ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದರು. ಆದರೂ ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರಿಗೆ ಸ್ನೇಹಿತರಿದ್ದರು. ಇನ್ನು ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ತಂದೆಯಂತೆ ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ಯಾಲೇಸ್ ಗ್ರೌಂಡ್‌ನ ಚಾಮರವಜ್ರದಲ್ಲಿ ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ನಡೀತು. ರಜನಿಕಾಂತ್, ಮೋಹನ್ ಬಾಬು, ಯಶ್, ಸುದೀಪ್ ಸೇರಿದಂತೆ ಸೂಪರ್ ಸ್ಟಾರ್‌ಗಳೆಲ್ಲಾ ಮದುವೆ ಸಮಾರಂಭಕ್ಕೆ ಬಂದಿದ್ದರು. ಅವಿವಾ ಕೂಡ ಮಾಡೆಲ್ ಹಾಗೂ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಇನ್ನು ಅಭಿ- ಅವಿವಾ ಪರಸ್ಪರ ಪ್ರೀತಿಸಿ ಹಸೆಮಣೆ ಏರಿದ್ದಾರೆ. ಲಂಡನ್‌ನಲ್ಲಿ ಇಬ್ಬರು ಓದುವಾಗ ಪರಿಚಯವಾಗಿ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಮಗಳು ಅಂಬಿ ಮನೆಗೆ ಸೊಸೆಯಾಗಿ ಹೋಗುತ್ತಿರುವ ಬಗ್ಗೆ ತಂದೆ ಪ್ರಸಾದ್ ಬಿದ್ದಪ್ಪ ಮಾಧ್ಯಮಗಳ ಜೊತೆ ಮಾತನಾಡಿದ್ದರು.

"ನಮ್ಮ ಮನೆ ಇರೋದು ಯಲಹಂಕದಲ್ಲಿ. ಈಗ ನಮ್ಮ ಮಗಳ ಮನೆ ಇರುವುದು ಜೆಪಿ ನಗರದಲ್ಲಿ. ಥ್ಯಾಂಕ್ ಗಾಡ್.. ಅಷ್ಟೇನೂ ದೂರ ಇಲ್ಲ. ನಮಗೆ ತುಂಬ ಸಂತೋಷ. ಯಾಕೆಂದರೆ ಅಂಬರೀಷ್ ಅವರು ನಮಗೆ ಹಳೆಯ ಫ್ಯಾಮಿಲಿ ಫ್ರೆಂಡ್. ಅಂಬರೀಷ್ ಅವರು ನನಗೆ ಚೆನ್ನಾಗಿ ಗೊತ್ತಿದ್ದರು. ಅವರು ಬಹಳ ಒಳ್ಳೆಯವರಾಗಿದ್ದರು."
ಬಹಳ ಖುಷಿ ಆಗುತ್ತಿದೆ
"ಸುಮಲತಾ ಅವರು ಕೂಡ ಉತ್ತಮ ವ್ಯಕ್ತಿ. ಅವರ ಮನೆಗೆ ನಮ್ಮ ಮಗಳು ಹೋಗುತ್ತಿರುವುದಕ್ಕೆ ನಮಗೆ ಖುಷಿ ಇದೆ. ಅವರ ಮನೆಯಲ್ಲಿ ಮಗಳು ಚೆನ್ನಾಗಿರುತ್ತಾಳೆ ಎಂಬ ನಂಬಿಕೆ ಇದೆ" ಎಂದು ಪ್ರಸಾದ್ ಬಿಡಪ ಹೇಳಿದ್ದಾರೆ.

ಮಗಳೇ ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿದ್ದು
ಮದುವೆ ವೇಳೆ ಅವಿವಾ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದರು. ನೀವೇ ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿದ್ದ ಎನ್ನುವ ಪ್ರಶ್ನೆಗೆ "ಫ್ಯಾಷನ್ ವಿಚಾರದಲ್ಲಿ ನನ್ನ ಮಗಳು ನನಗಿಂತಲೂ ಮುಂದೆ ಹೋಗಿದ್ದಾಳೆ. ಅವಳ ಕಾಸ್ಟ್ಯೂಮ್ ಅವಳೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಅವಳ ಮದುವೆ ಸೀರೆಯನ್ನು ಆಯ್ಕೆ ಮಾಡಿದ್ದು ಸುಮಲತಾ ಅಂಬರೀಷ್. ಬುಧವಾರ ಪ್ಯಾಲೇಸ್ ಗ್ರೌಂಡ್ನಲ್ಲಿ ರಿಸೆಪ್ಷನ್ ಆಗಲಿದೆ. ಅಂದು ಕೂಡ ಅವಿವಾ ಸೀರೆ ಧರಿಸಲಿದ್ದಾಳೆ"
ಬೀಗರ ಊಟದ ಬಗ್ಗೆ ಕುತೂಹಲ
ಜೂನ್ 16ರಂದು ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಅಂಬಿ ಕುಟುಂಬದಿಂದ ಬೀಗರ ಔತಣ ಕೂಟ ಆಯೋಜಿಸಲಾಗುತ್ತಿದೆ. ಆ ದಿನ ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಅಭಿಮಾನಿಗಳಿಗೆ ನಾನ್ ವೆಜ್ ಊಟ ಹಾಕಿಸಲು ಯೋಜನೆ ಸಿದ್ಧವಾಗ್ತಿದೆ. ಸುಮಾರು ಒಂದು ಲಕ್ಷ ಮಂದಿಗೆ ಔತಣ ಕೂಟ ಏರ್ಪಾಡು ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಪ್ರಸಾದ್ ಬಿಡಪ "ಮಂಡ್ಯದಲ್ಲಿ ಬೀಗರ ಊಟ ಕಾರ್ಯಕ್ರಮ ಕೂಡ ನಡೆಯಲಿದೆ. ಮಂಡ್ಯದ ಜೊತೆ ಈಗ ನಮಗೆ ಹೊಸ ಸಂಬಂಧ. ಬೀಗರ ಊಟದ ಬಗ್ಗೆ ನಾನು ಬಹಳ ಕೇಳಿದ್ದೇನೆ. ಅದು ಹೇಗೆ ನಡೆಯುತ್ತದೆ ಎಂಬ ಬಗ್ಗೆ ನನಗೂ ಕುತೂಹಲ ಇದೆ" ಎಂದು ಪ್ರಸಾದ್ ಬಿದ್ದಪ್ಪ ಹೇಳಿದ್ದಾರೆ.

ಅದ್ಧೂರಿ ಆರತಕ್ಷತೆ ಕಾರ್ಯಕ್ರಮ
ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಬುಧವಾರ ಅಭಿ- ಅವಿವಾ ಜೋಡಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಜನಕ್ಕೆ ಆರತಕ್ಷತೆ ಆಮಂತ್ರಣ ನೀಡಲಾಗಿದೆ. ನಟ ದರ್ಶನ್ ಸೇರಿದಂತೆ ಸಾಕಷ್ಟು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ.


Click it and Unblock the Notifications











