»   » ತೆರೆ ಮೇಲೆ ಬರಲಿದೆ 'ಚಿತ್ರ ಬ್ರಹ್ಮ' ಪುಟ್ಟಣ್ಣ ಜೀವನ ಚರಿತ್ರೆ

ತೆರೆ ಮೇಲೆ ಬರಲಿದೆ 'ಚಿತ್ರ ಬ್ರಹ್ಮ' ಪುಟ್ಟಣ್ಣ ಜೀವನ ಚರಿತ್ರೆ

Posted By:
Subscribe to Filmibeat Kannada

ಇಂದು (ಡಿಸೆಂಬರ್ 1) ಕನ್ನಡ ಚಿತ್ರರಂಗ ಕಂಡ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನ. ವಿಶೇಷ ಅಂದ್ರೆ, ಈ ದಿನ ಪುಟ್ಟಣ್ಣ ಅವರ ಹುಟ್ಟುಹಬ್ಬದಂದು ಅವರ ಬಗ್ಗೆ ಸಿನಿಮಾ ಬರುವ ಸುದ್ದಿ ಹೊರಬಂದಿದೆ.

ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ

ನಿರ್ದೇಶಕ ಪ್ರಸನ್ನ ಶೆಟ್ಟಿ ಎಂಬುವವರು ಪುಟ್ಟಣ್ಣ ಅವರ ಜೀವನ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ 'ನಮ್ಮೂರ ಹೈಕ್ಳು' ಎಂಬ ಸಿನಿಮಾವನ್ನು ಪ್ರಸನ್ನ ಶೆಟ್ಟಿ ನಿರ್ದೇಶನ ಮಾಡಿದ್ದರು. ಆ ಚಿತ್ರದ ಬಳಿಕ ಇದೀಗ ಪುಟ್ಟಣ್ಣ ಅವರ ಜೀವನವನ್ನು ತೆರೆ ಮೇಲೆ ತೋರಿಸುವ ನಿರ್ಧಾರ ಮಾಡಿದ್ದಾರೆ.

 Prasanna Shetty to direct a movie on Director Puttanna Kanagal biography

ಈಗಾಗಲೇ ಪುಟ್ಟಣ್ಣ ಅವರ ಚಿತ್ರಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಪ್ರಸನ್ನ, ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಮತ್ತು ಕುಟುಂಬದೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದಾರಂತೆ.

ಈ ಸಿನಿಮಾಗೆ 'ಚಿತ್ರ ಬ್ರಹ್ಮ' ಎಂಬ ಹೆಸರನ್ನು ಇಟ್ಟಿದ್ದು, ಪುಟ್ಟಣ್ಣ ಅವರ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಅಂದರೆ ಈ ಚಿತ್ರದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಕಲ್ಪನಾ, ಆರತಿ ಅವರ ಪಾತ್ರಗಳು ಇರುತ್ತದೆಯಂತೆ. ಪುಟ್ಟಣ್ಣ ಈ ನಟ ನಟಿಯರ ಜೊತೆ ಸಿನಿಮಾ ಮಾಡಿದ್ದು, ಅವರ ಜೀವನ ಚರಿತ್ರೆಯ ಚಿತ್ರಕ್ಕೆ ಈ ಪಾತ್ರಗಳು ತುಂಬ ಪ್ರಾಮುಖ್ಯವಾಗಿದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಅಂದಹಾಗೆ, ಈ ಪಾತ್ರಗಳಿಗಾಗಿ ಈಗಾಗಲೇ ಕೆಲ ನಟರನ್ನು ಸಂಪರ್ಕ ಮಾಡಲಾಗಿದ್ದು, ಆದಷ್ಟು ಬೇಗ ಚಿತ್ರ ಶುರುವಾಗಲಿದೆಯಂತೆ.

English summary
Director Prasanna Shetty planning to make a movie on Puttanna Kanagal biography.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada