For Quick Alerts
  ALLOW NOTIFICATIONS  
  For Daily Alerts

  ಮದಗಜ: ಗಂಗಾ ನದಿ ತಟದಲ್ಲಿ ಸುಡುವ ಹೆಣಗಳ ಮಧ್ಯೆ ಶ್ರೀಮುರಳಿ ರೌದ್ರಾವತಾರ

  |

  ನಟ ಶ್ರೀಮುರಳಿ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅವರದ್ದೇ ನಟನೆಯ 'ಮದಗಜ' ಸಿನಿಮಾದ ಫರ್ಸ್ಟ್ ಲುಕ್ ಟೀಸರ್ ಅನ್ನು ನಿರ್ದೇಶಕ ಪ್ರಶಾಂತ್ ನೀಲ್ ಬಿಡುಗಡೆ ಮಾಡಿದ್ದಾರೆ.

  Sri Murali ಹುಟ್ಟುಹಬ್ಬಕ್ಕೆ ಬಂಪರ್ ಗಿಫ್ಟ್ ಕೊಟ್ಟ Mahesh Kumar | Madagaja | Filmibeat Kannada

  1:41 ನಿಮಿಷದ ಈ ಟೀಸರ್‌ನಲ್ಲಿ ವಾರಣಾಸಿಯ ಸುಂದರ ದೃಶ್ಯಗಳ ಜೊತೆಗೆ ಶ್ರೀಮುರಳಿಯ ಕಂಚಿನ ಕಂಠ, ಕೆಲವು ಅದ್ಭುತ ಆಕ್ಷನ್ ದೃಶ್ಯಗಳ ಝಲಕ್ ನೀಡಲಾಗಿದೆ. ಕೊನೆಯಲ್ಲಿ ಮಾಸ್ ಲುಕ್‌ನಲ್ಲಿ ಶ್ರೀಮುರಳಿಯ ದರ್ಶನವಾಗುತ್ತದೆ.

  'ಮದಗಜ' ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ ಶ್ರೀಮುರಳಿ'ಮದಗಜ' ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ ಶ್ರೀಮುರಳಿ

  'ಸಿನಿಮಾ ರಂಗದಲ್ಲಿ ತಂತ್ರಜ್ಞನಾಗಿ 10 ವರ್ಷ ಅನುಭವ ಹೊಂದಿದ್ದೇನೆ, ಪ್ರೇಕ್ಷಕನಾಗಿ 35 ವರ್ಷ ಅನುಭವವಿದೆ. ಒಬ್ಬ ಪ್ರೇಕ್ಷಕನಾಗಿ ಮದಗಜ ಟೀಸರ್ ಬಗ್ಗೆ ಹೇಳುವುದಾದರೆ, ಅದೊಂದು ಅದ್ಭುತ ಟೀಸರ್, ಮಹೇಶ್, ಉಮಾಪತಿ ಶ್ರೀನಿವಾಸ್ ಎಲ್ಲಾ ಚಿತ್ರತಂಡಕ್ಕೂ ಶುಭಹಾರೈಕೆಗಳು. ಟೀಸರ್‌ನಲ್ಲಿ ಶ್ರೀ ಮುರಳಿ ಘರ್ಜಿಸುತ್ತಿದ್ದಾರೆ. ಅವರು ಮುಂದೆಯೂ ಹೀಗೆಯೇ ಘರ್ಜಿಸುತ್ತಲೇ ಇರಬೇಕು' ಎಂದಿದ್ದಾರೆ ಟೀಸರ್ ಬಿಡುಗಡೆ ಮಾಡಿದ ಪ್ರಶಾಂತ್ ನೀಲ್.

  ಇಂದು (ಡಿಸೆಂಬರ್ 17) ಶ್ರೀಮುರಳಿ ಹುಟ್ಟುಹಬ್ಬವಿದ್ದು, ಈ ದಿನದ ವಿಶೇಷವಾಗಿ ಮದಗಜ ಸಿನಿಮಾ ತಂಡವು ಟೀಸರ್ ಅನ್ನು ಪ್ರಶಾಂತ್ ನೀಲ್ ಕಡೆಯಿಂದ ಬಿಡುಗಡೆ ಮಾಡಿಸಿದೆ.

  'ಮದಗಜ' ಸಿನಿಮಾದ ಕತೆಯು ಕಾಶಿಯಲ್ಲಿ ನಡೆಯುತ್ತದೆ, ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ಮಾಡಲಾಗಿದೆ. ಇದರ ಜೊತೆಗೆ ಮೈಸೂರು, ಬೆಂಗಳೂರುಗಳಲ್ಲಿ ಸಹ ಚಿತ್ರೀಕರಣ ಮಾಡಲಾಗಿದೆ. ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದು, ದರ್ಶನ್‌ರ ರಾಬರ್ಟ್ ಸಿನಿಮಾಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ.

  ಕೊನೆಗೂ 'ಮದಗಜ' ಚಿತ್ರಕ್ಕೆ ವಿಲನ್ ಆದ್ರು ಸೌತ್ ಸ್ಟಾರ್ ನಟಕೊನೆಗೂ 'ಮದಗಜ' ಚಿತ್ರಕ್ಕೆ ವಿಲನ್ ಆದ್ರು ಸೌತ್ ಸ್ಟಾರ್ ನಟ

  ಮದಗಜ ಸಿನಿಮಾದಲ್ಲಿ ಶ್ರೀಮುರಳಿ ಎದುರು ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಖಳನಟರಾಗಿ ಜಗಪತಿ ಬಾಬು ಇದ್ದಾರೆ, ಹಾಸ್ಯ ನಟ ಚಿಕ್ಕಣ್ಣ ಸೇರಿ ಇನ್ನೂ ಕೆಲವರು ಸಿನಿಮಾದಲ್ಲಿದ್ದಾರೆ.

  English summary
  Director Prashant Neel released Sri Murali Madagaja first look teaser on Sri Murali's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X