For Quick Alerts
  ALLOW NOTIFICATIONS  
  For Daily Alerts

  'ಮದಗಜ'ನಿಗೆ ಸಾಥ್ ನೀಡಿದ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್

  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ಮದಗಜ ಸಿನಿಮಾದ ಫಸ್ಟ್ ಲುಕ್ ಟೀಸರ್ ಗೆ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳು ಡಿಸೆಂಬರ್ 17ರಂದು ಸಿನಿಮಾದ ಟೀಸರ್ ರಿಲೀಸ್ ಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

  ಮದಗಜ ನಿಗೆ ಸಾಥ್ ನೀಡಿದ ಪ್ರಶಾಂತ್ ನೀಲ್ | PrashanthNeel | Filmibeat Kannada

  ವಿಶೇಷ ಎಂದರೆ ಮದಜಗನ ಬೆನ್ನಿಗೆ ನಿಂತಿದ್ದಾರೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ನಟ ಶ್ರೀಮುರಳಿ ಭಾಮೈದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟೆಡ್ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.

  ಶ್ರೀಮುರಳಿ ನಟನೆಯ 'ಮದಗಜ' ಚಿತ್ರದ ಬಜೆಟ್ ಎಷ್ಟು?ಶ್ರೀಮುರಳಿ ನಟನೆಯ 'ಮದಗಜ' ಚಿತ್ರದ ಬಜೆಟ್ ಎಷ್ಟು?

  ಉಗ್ರಂ ಸಿನಿಮಾ ಮೂಲಕ ನಟ ಶ್ರೀಮುರಳಿಗೆ ಮರುಜನ್ಮ ನೀಡಿದ್ದ ಪ್ರಶಾಂತ್ ನೀಲ್, ಇದೀಗ ಮದಗಜ ಟೀಸರ್ ಬಿಡುಗಡೆಗೆ ಅಸ್ತು ಎಂದಿದ್ದಾರೆ. ಡಿಸೆಂಬರ್ 17 ನಟ ಶ್ರೀಮುರಳಿಗೆ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ವಿಶೇಷವಾಗಿ ಶ್ರೀಮುರಳಿ ಮತ್ತು ತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ.

  ಡಿಸೆಂಬರ್ 17 ಬೆಳಗ್ಗೆ ಮದಗಜ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗುತ್ತಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಆಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು ಪ್ರಶಾಂತ್ ಸರ್. ಇದು ನಮಗೆ ತುಂಬ ಹೆಮ್ಮೆಯ ವಿಚಾರ' ಎಂದು ಬರೆದುಕೊಂಡಿದ್ದಾರೆ.

  ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಆಶಿಕಾ, ಶ್ರೀಮುರಳಿಗೆ ಜೋಡಿಯಾಗಿದ್ದಾರೆ. ಇನ್ನೂ ನಟ ಶ್ರೀಮುರಳಿ ಭರಾಟೆ ಸಿನಿಮಾ ಬಳಿಕ ಮದಗಜ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಮುಂದಿನ ವರ್ಷ ಮದಗಜ ತೆರೆಮೇಲೆ ಬರಲಿದೆ.

  English summary
  Director Prashant Neel to unveil first look teaser of Sriimurali starrer Madagaja on December 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X