For Quick Alerts
  ALLOW NOTIFICATIONS  
  For Daily Alerts

  ಇನಾಯತ್ ಖಲೀಲ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪ್ರಶಾಂತ್ ನೀಲ್

  |

  ಕೆಜಿಎಫ್ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಬಹಳ ಪ್ರಮುಖವಾದದ್ದು. ಚಾಪ್ಟರ್ 2ರಲ್ಲಿ ಹಲವು ಹೊಸ ಮುಖಗಳ ಪ್ರವೇಶವಾಗಲಿದ್ದು, ಚಿತ್ರರಸಿಕರಿಗೆ ಮನರಂಜನೆಯ ಬಾಡೂಟ ಆಗಿರಲಿದೆ ಎಂಬ ನಿರೀಕ್ಷೆ ಇದೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ಅಂತಹ ಕಲಾವಿದರು ಕೆಜಿಎಫ್ ತಂಡ ಸೇರಿದ್ದಾರೆ.

  ಗುಟ್ಟಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಕೆಜಿಫ್ ನ ಇನಾಯತ್ ಖಲೀಲ್ | Filmibeat Kannada

  ಇಷ್ಟು ಪಾತ್ರಗಳ ನಡುವೆ ಮತ್ತೊಂದು ಪಾತ್ರ ಹೆಚ್ಚು ಚರ್ಚೆಯಲ್ಲಿದೆ. ಕೆಜಿಎಫ್‌ನ ನರಾಚಿಯನ್ನು ವಶಪಡಿಸಿಕೊಳ್ಳಬೇಕೆಂದು ಸಂಚು ಹಾಕಿ ಕೂತಿರುವ ಇನಾಯತ್ ಖಲೀಲ್ ಮುಂದುವರಿದ ಅಧ್ಯಾಯದಲ್ಲಿ ಹೆಚ್ಚು ಗಮನ ಸೆಳೆಯುವ ಪಾತ್ರವಾಗಿದೆ. ಈ ಕ್ಯಾರೆಕ್ಟರ್ ಬಗ್ಗೆ ಇದೀಗ, ನಿರ್ದೇಶಕ ಪ್ರಶಾಂತ್ ನೀಲ್ ಆಸಕ್ತಿದಾಯಕ ಸುಳಿವು ಬಿಟ್ಟುಕೊಟ್ಟಿದ್ದಾರೆ. ಮುಂದೆ ಓದಿ...

  ಇನಾಯತ್ ಖಲೀಲ್ ಪೋಸ್ಟರ್ ಬಿಡುಗಡೆ

  ಇನಾಯತ್ ಖಲೀಲ್ ಪೋಸ್ಟರ್ ಬಿಡುಗಡೆ

  ಕೆಜಿಎಫ್ ಚಿತ್ರದ ಇನಾಯತ್ ಖಲೀಲ್ ಪಾತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಇನಾಯತ್ ಖಲೀಲ್ ಪಾತ್ರ ನಿರ್ವಹಿಸಿರುವ ಬಾಲಕೃಷ್ಣ ಹುಟ್ಟುಹಬ್ಬದ ಹಿನ್ನೆಲೆ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಆ ಪಾತ್ರದ ಬಗ್ಗೆ ಕೆಲವು ಸುಳಿವು ನೀಡಿದ್ದಾರೆ ಪ್ರಶಾಂತ್ ನೀಲ್.

  ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?

  ಯಾರ ಜೊತೆ ಕೈ ಜೋಡಿಸಲಿದ್ದಾನೆ ಖಲೀಲ್

  ಯಾರ ಜೊತೆ ಕೈ ಜೋಡಿಸಲಿದ್ದಾನೆ ಖಲೀಲ್

  ಕೆಜಿಎಫ್ ಚಾಪ್ಟರ್2ರಲ್ಲಿ ಈಗ ನರಾಚಿ ಸಾರ್ವಭೌಮತ್ವಕ್ಕಾಗಿ ಹೋರಾಟ ನಡೆಯಲಿದೆ. ಅಧೀರ, ಇನಾಯತ್ ಖಲೀಲ್, ರಮಿಕಾ ಸೇನ್, ರಾಜೇಂದ್ರ ದೇಸಾಯಿ, ಆಂಡ್ರ್ಯೂ, ಕಮಲ್, ಹಾಗೂ ರಾಕಿ ಸೇರಿದಂತೆ ಹಲವರ ಕಣ್ಣು ನರಾಚಿ ಮೇಲಿದೆ. ಯಾರ ಕಣ್ಣಿಗೂ ಕಾಣಿಸದೇ ತಲೆಮರಿಸಿಕೊಂಡಿರುವ ಇನಾಯತ್ ಖಲೀಲ್ ನರಾಚಿಗಾಗಿ ಯಾರ ಕೈ ಜೋತೆ ಕೈ ಜೋಡಿಸಲಿದ್ದಾನೆ ಎನ್ನುವ ಪ್ರಶ್ನೆಯನ್ನಿಟ್ಟು ಮುಂದೆ ನಡೆಯಲಿರುವ ಘಟನೆ ಬಗ್ಗೆ ಸುಳಿವು ನೀಡಿದ್ದಾರೆ. 'ಯಾರಿಗೂ ತಿಳಿಯದ ಸ್ಥಳದಲ್ಲಿ ಇನಾಯತ್ ಖಲೀಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ' ಎಂಬ ಹೆಡ್‌ಲೈನ್ ಸಹ ಪೋಸ್ಟರ್‌ನಲ್ಲಿ ನೋಡಬಹುದು.

  ಇನಾಯತ್ ಪಾತ್ರದಲ್ಲಿ ಬಾಲಕೃಷ್ಣ

  ಇನಾಯತ್ ಪಾತ್ರದಲ್ಲಿ ಬಾಲಕೃಷ್ಣ

  ಇನಾಯತ್ ಖಲೀಲ್ ಪಾತ್ರದಲ್ಲಿ ಬಾಲಕೃಷ್ಣ ನೀಲಕಂಠಪುರಂ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಬಾಲಕೃಷ್ಣರ ಕುರಿತು ಹೆಚ್ಚು ಮಾಹಿತಿ ಎಲ್ಲಿಯೂ ಚರ್ಚೆಯಾಗಿಲ್ಲ. ಬಾಲಕೃಷ್ಣ ನೀಲಕಂಠಪುರಂ ಯುವ ನಟ ಆದರ್ಶ್ ಅವರ ತಂದೆ,

  'ಕೆಜಿಎಫ್ ಚಾಪ್ಟರ್ 1'ರಲ್ಲಿ ಬಚ್ಚಿಟ್ಟಿದ್ದ ಪಾತ್ರಗಳು ಇವರೇನಾ?'ಕೆಜಿಎಫ್ ಚಾಪ್ಟರ್ 1'ರಲ್ಲಿ ಬಚ್ಚಿಟ್ಟಿದ್ದ ಪಾತ್ರಗಳು ಇವರೇನಾ?

  ಜುಲೈ 16ಕ್ಕೆ ಬಿಡುಗಡೆ?

  ಜುಲೈ 16ಕ್ಕೆ ಬಿಡುಗಡೆ?

  ಸದ್ಯದ ವರದಿಗಳ ಪ್ರಕಾರ ಜುಲೈ 16ಕ್ಕೆ ಕೆಜಿಎಫ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆದರೆ, ಕೋವಿಡ್ ಪರಿಸ್ಥಿತಿ ನಿಯಂತ್ರಣ ಬಾರದ ಹಿನ್ನೆಲೆ ರಿಲೀಸ್ ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನುಳಿದಂತೆ ಅಧೀರನ ಪಾತ್ರದಲ್ಲಿ ಸಂಜಯ್ ದತ್, ಸಿಬಿಐ ಅಧಿಕಾರಿಯಾಗಿ ರವೀನಾ ಟಂಡನ್, ಪತ್ರಕರ್ತನ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ.

  English summary
  Prashant Neel Wishes KGF actor Bala Krishna on his birthday; revealed his character glimpse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X