For Quick Alerts
  ALLOW NOTIFICATIONS  
  For Daily Alerts

  ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 'ಆರೆಂಜ್' ನಿರ್ದೇಶಕ ಪ್ರಶಾಂತ್ ರಾಜ್

  |

  ಲವ್ ಗುರು ಸಿನಿಮಾ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ನಿರ್ದೇಶಕ ಪ್ರಶಾಂತ್ ರಾಜ್ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಕೃತಕ ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದಾರೆ.

  ನಿರ್ದೇಶಕ Prashanth Raj ಅವರಿಗೆ ಏನಾಯ್ತು ? | Filmibeat Kannada

  ಕೃತಕ ಆಕ್ಸಿಜನ್ ಮೂಲಕ ಉಸಿರಾಡುತ್ತಿರುವ ವಿಡಿಯೋವನ್ನು ಪ್ರಶಾಂತ್ ರಾಜ್ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿ ಆನೇಕರು ಆತಂಕ ಪಟ್ಟುಕೊಂಡಿದ್ದು, ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅಂದಹಾಗೆ ವಿಡಿಯೋ ಜೊತೆಗೆ ಪ್ರಶಾಂತ್ 'ಆಲ್ ಈಸ್ ವೆಲ್' ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿದ ಭಾಮ ಹರೀಶ್, ಜೆಕೆ

  ಪ್ರಶಾಂತ್ ರಾಜ್ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ತರಣ್ ಸುಧೀರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಶೀಘ್ರ ಗುಣಮುಖರಾಗಿ ಎಂದು ಕಾಮೆಂಟ್ ಮಾಡಿದ್ದಾರೆ.

  ವಿಡಿಯೋ ಶೇರ್ ಮಾಡುವ ಮೊದಲು ಪ್ರಶಾಂತ್ ರಾಜ್ ಟ್ವೀಟ್ ಮಾಡಿ, 'ನಾನು ಅಪಾಯದಿಂದ ಪಾರಾಗಿದ್ದೀನಿ. ಎರಡು ದಿನಗಳಲ್ಲಿ ನಾನು ಸಂಪೂರ್ಣವಾಗಿ ಗುಣಮುಖವಾಗುವ ಬಗ್ಗೆ ಖಚಿತವಾಗಲಿದೆ. ಆದಷ್ಟು ಬೇಗ ಹಿಂತಿರುಗುತ್ತೇನೆ. ನನ್ನ ಕೆಲಸವನ್ನು ಪ್ರಾರಂಭಮಾಡುತ್ತೇನೆ' ಎಂದು ಹೇಳಿದ್ದರು.

  ಪ್ರಶಾಂತ್ ರಾಜ್ ಗೆ ಏನಾಗಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಪ್ರಶಾಂತ್ ರಾಜ್ ಟ್ವೀಟ್ ನೋಡಿದ್ರೆ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ.

  ಪ್ರಶಾಂತ್ ರಾಜ್ ಲವ್ ಗುರು, ಗಾನ ಬಜಾನಾ, ಜೂಮ್, ದಳಪತಿ ಮತ್ತು ಆರೆಂಜ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕೊನೆಯದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಆರೆಂಜ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಮತ್ತೆ ಗಣೇಶ್ ಜೊತೆ ಕೆಲಸ ಮಾಡುತ್ತಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದು.

  English summary
  Director Prashant Raj shares A video of depending on oxygen. He says all is well.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X