For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಡ್ರಗ್ಸ್ ಕಿಂಗ್‌ಪಿನ್ ಜೊತೆ ಸ್ಯಾಂಡಲ್‌ವುಡ್‌ಗೆ ನಂಟು! ಪ್ರಶಾಂತ್ ಸಂಬರ್ಗಿ ಸ್ಫೋಟಕ ಆರೋಪ

  |

  ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ಸಿನಿಮಾ ವಿತರಕ ಪ್ರಶಾಂತ್ ಸಂಬರ್ಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

  Sandalwood Drug Mafia ಬಗ್ಗೆ Kannada film Chamber ವಿಶೇಷ ಪತ್ರಿಕಾಗೋಷ್ಠಿ | Filmibeat Kannada

  ಬಾಲಿವಡ್ ಡ್ರಗ್ಸ್ ಮಾಫಿಯಾದ ಕಿಂಗ್‌ಪಿನ್ ಇಮ್ತಿಯಾಜ್ ಖಾತ್ರಿ ಜೊತೆ ಕರ್ನಾಟಕದವರಿಗೆ ನಂಟು ಇದೆ, ಇಮ್ತಿಯಾಜ್ ಖಾತ್ರಿ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನವರು ಭಾಗಿಯಾಗಿದ್ದರು. ಬೆಂಗಳೂರಿಗೆ ಇಮ್ತಿಯಾಜ್ ಖಾತ್ರಿ ಬಂದಾಗ ಯಾರ ಕಾರಿನಲ್ಲಿ ಹೋದರು, ಯಾರ ಮನೆಯಲ್ಲಿ ಉಳಿದುಕೊಂಡರು ಎಂಬುದನ್ನು ಪತ್ತೆ ಹೆಚ್ಚಿ ಎಲ್ಲ ಸತ್ಯ ಹೊರಗೆ ಬರುತ್ತೆ ಎಂದು ದೂರಿದ್ದಾರೆ. ಮುಂದೆ ಓದಿ...

  ಇಮ್ತಿಯಾಜ್ ಖಾತ್ರಿ ಯಾರು?

  ಇಮ್ತಿಯಾಜ್ ಖಾತ್ರಿ ಯಾರು?

  ''ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಶ್ರುತಿ ಮೋದಿ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಅವರ ಪರ ವಕೀಲರು ಪ್ರೆಸ್‌ಮೀಟ್ ಮಾಡಿದ್ದರು. ಆ ಸಮಯದಲ್ಲಿ ಡ್ರಗ್ಸ್ ಆರೋಪಕ್ಕೆ ಸಂಬಂಧಪಟ್ಟಂತೆ ಇಮ್ತಿಯಾಜ್ ಖಾತ್ರಿ ಅವರ ಹೆಸರು ಪ್ರಸ್ತಾಪವಾಗಿದೆ. ಇಮ್ತಿಯಾಜ್ ಖಾತ್ರಿ ಯಾರು ಎನ್ನುವುದು ಸೂಕ್ಷ್ಮವಾಗಿ ತಿಳಿಯಿರಿ'' ಎಂದು ಮಾಹಿತಿ ನೀಡಿದ್ದಾರೆ.

  ಐಪ್ಯಾಡ್ -ಹಾರ್ಡ್‌ಡಿಸ್ಕ್ ತಗೊಂಡು ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್ ಲಂಕೇಶ್

  ಇಮ್ತಿಯಾಜ್ ಖಾತ್ರಿ-ಸಲ್ಮಾನ್ ಖಾನ್ ಗೆ ಏನು ಸಂಬಂಧ?

  ಇಮ್ತಿಯಾಜ್ ಖಾತ್ರಿ-ಸಲ್ಮಾನ್ ಖಾನ್ ಗೆ ಏನು ಸಂಬಂಧ?

  ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕೇಳಿಬರುವ ಇಮ್ತಿಯಾಜ್ ಖಾತ್ರಿಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಏನು ಸಂಬಂಧ ಹಾಗೂ ಸುಷ್ಮಿತಾ ಸೇನ್ ಹಾಗೂ ಇಮ್ತಿಯಾಜ್ ಖಾತ್ರಿಗೂ ಏನು ನಂಟು ಎಂಬುದನ್ನು ಗಮನಿಸಿದರೆ ಸ್ಪಷ್ಟ ಉತ್ತರ ಸಿಗಬಹುದು ಎಂದು ಪ್ರಶಾಂತ್ ಸಂಬರ್ಗಿ ಕೆಲವು ವಿಚಾರಗಳನ್ನು ಬಿಟ್ಟಿದ್ದಾರೆ.

  ಮುಂಬೈ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲ ಹೋಗಿದ್ದರು

  ಮುಂಬೈ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲ ಹೋಗಿದ್ದರು

  2017ರಲ್ಲಿ ಮುಂಬೈನಲ್ಲಿ ಇಮ್ತಿಯಾಜ್ ಖಾತ್ರಿ ಅವರ ಬರ್ತಡೇ ಪಾರ್ಟಿ ಆಗುತ್ತೆ. ಈ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲ ಹೋಗಿದ್ದರು ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸಿ ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಸಹ ಒಬ್ಬೊಬ್ಬರನ್ನೆ ಕರೆಸಿ ನೀವು ಹೋಗಿದ್ರಾ? ನೀವು ಹೋಗಿದ್ರಾ ಎಂದು ಕೇಳಲಿ ಎಂದು ತಿರಗೇಟು ನೀಡಿದ್ದಾರೆ.

  ಬಾಲಿವುಡ್-ಸ್ಯಾಂಡಲ್‌ವುಡ್‌ಗೂ ನಂಟಿದೆ

  ಬಾಲಿವುಡ್-ಸ್ಯಾಂಡಲ್‌ವುಡ್‌ಗೂ ನಂಟಿದೆ

  ಜೆಡಿಎಸ್ ಮುಖಂಡ, ಕಾಂಗ್ರೆಸ್ ಗೆ ಹೋಗಿ ಗೆದ್ದು ಅವರ 50ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ಚಿತ್ರರಂಗದವರು ಬೆಂಗಳೂರಿಗೆ ಕರೆಸಿಕೊಳ್ಳುತ್ತಾರೆ. ಈ ವೇಳೆ ಇಮ್ತಿಯಾಜ್ ಖಾತ್ರಿ ಸಹ ಇದ್ದರು. ಇಮ್ತಿಯಾಜ್ ಖಾತ್ರಿ ಬೆಂಗಳೂರಿಗೆ ಬಂದಾಗ ಯಾರು ಕಾರು ಬಳಸಿದರು, ಯಾರ ಮನೆಯಲ್ಲಿ ಇದ್ದರು ಎನ್ನುವುದು ತನಿಖೆ ಆಗಲಿ, ಇದರಿಂದ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಗೂ ಇರುವ ನಂಟನ್ನು ಅವರೇ ಹೇಳ್ತಾರೆ'' ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ.

  English summary
  Social activist Prashant Sambargi Calls for Press Meet Regarding Kannada Film Industry Hidden Truths.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X