'ವಿಕ್ರಂ' ಬಗ್ಗೆ ಪ್ರಶಾಂತ್ ನೀಲ್ ಟ್ವೀಟ್: '777 ಚಾರ್ಲಿ' ನೋಡಿ ಎಂದು ಕನ್ನಡಿಗರು ಕ್ಲಾಸ್!

ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸದ್ಯ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. 'ಉಗ್ರಂ' ಸಿನಿಮಾ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ ಪ್ರಶಾಂತ್ ನೀಲ್ ಕೆಜಿಎಫ್ ಸಿನಿಮಾದ ಬಳಿಕ ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮಿದ್ದಾರೆ.

ಕೆಜಿಎಫ್ ಮೂಲಕ ವಿಶ್ವದ ಗಮನ ಸೆಳೆದು, ಪ್ಯಾನ್ ಇಂಡಿಯಾ ನಿರ್ದೇಶಕನಾದ ಪ್ರಶಾಂತ್ ನೀಲ್‌ಗೆ ತೆಲುಗಿನಿಂದ ಸಾಕಷ್ಟು ಸಿನಿಮಾಗಳ ಆಫರ್ ಬಂದಿದೆ. ಸದ್ಯ 'ಸಲಾರ್' ಸಿನಿಮಾದಲ್ಲಿ ಪ್ರಶಾಂತ್ ನೀಲ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಜೂನಿಯರ್ ಎನ್‌ಟಿಆರ್ ಸಿನಿಮಾ ಅಧಿಕೃತವಾಗಿ ಪ್ರಕಟಗೊಂಡಿದೆ.

ಕನ್ನಡದ ನಿರ್ದೇಶಕ ಈ ಮಟ್ಟಿಗೆ ಬೆಳೆದಿರುವುದು, ಕನ್ನಡಿಗರಿಗೆ ಖುಷಿಯ ವಿಚಾರವೆ. ಹಾಗಾಗಿ ಕನ್ನಡಿಗರು ಇವರನ್ನು ಹೊತ್ತು ಮೆರೆಸಿದ್ದಾರೆ. ಆದರೆ ಇದೀಗ ಕನ್ನಡಿಗರು ಪ್ರಶಾಂತ್ ನೀಲ್‌ಗೆ ಕನ್ನಡ ಪಾಠ ಮಾಡುವ ಸಮಯ ಬಂದಿದೆ. ಕನ್ನಡವನ್ನು ಮರಿಬೇಡಿ ನೀಲ್ ಎನ್ನುತ್ತಿದ್ದಾರೆ ಕನ್ನಡಿಗರು. ಅದು ಯಾಕೆ ಎನ್ನುವುದನ್ನು ಮುಂದೆ ಓದಿ...

'ವಿಕ್ರಂ' ನೋಡಿ ವಾವ್ ಎಂದ ಪ್ರಶಾಂತ್ ನೀಲ್!

'ವಿಕ್ರಂ' ನೋಡಿ ವಾವ್ ಎಂದ ಪ್ರಶಾಂತ್ ನೀಲ್!

ಕಮಲ್ ಹಾಸನ್ ನಟನೆಯ ತಮಿಳು ಸಿನಿಮಾ 'ವಿಕ್ರಂ' ಸೂಪರ್ ಹಿಟ್ ಲಿಸ್ಟ್ ಸೇರಿಕೊಂಡಿದೆ. ಬಾಕ್ಸಾಫೀಸನ್ನು ಧೂಳೆಬ್ಬಿಸಿದೆ ಹೊಸ ದಾಖಲೆಯನ್ನು ಬರೆದಿದೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಹಾಗಾಗಿ 'ವಿಕ್ರಂ' ಚಿತ್ರವನ್ನು ನೋಡಿದ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಮಲ್ ಹಾಸನ್ ಬಗ್ಗೆ, ಸಿನಿಮಾ ನಿರ್ದೇಶಕ ಮತ್ತು ಪಾತ್ರಧಾರಿಗಳ ಬಗ್ಗೆ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

'ವಿಕ್ರಂ' ಬಗ್ಗೆ ಪ್ರಶಾಂತ್ ನೀಲ್ ಟ್ವೀಟ್!

'ವಿಕ್ರಂ' ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ ಪ್ರಶಾಂತ್ ನೀಲ್. "ಇಡೀ 'ವಿಕ್ರಂ' ಸಿನಿಮಾ ತಂಡಕ್ಕೆ ಶುಭಾಷಯಗಳು. ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅವರನ್ನು ಒಟ್ಟಿಗೆ ನೋಡುವುದೇ ಹಬ್ಬ. ನಿರ್ದೇಶಕ ಲೋಕೇಶ್ ಕನಕರಾಜ್ ಕೆಲಸದ ಪರಿಗೆ ಅಭಿಮಾನಿ, ಸಂಗೀತ ನಿರ್ದೇಶಕ ಅನಿರುದ್ಧ್ ನೀವು ರಾಕ್ ಸ್ಟಾರ್, ನಮ್ಮ ಮಾಸ್ಟರ್ ಅನ್ಬರಿವು ಬಗ್ಗೆ ಬಹಳ ಹೆಮ್ಮೆ ಇದೆ. ಸೂರ್ಯ ಸರ್ ರೋಲೆಕ್ಸ್ ಪಾತ್ರ ಮರೆಯಲು ಸಾಧ್ಯವಿಲ್ಲ" ಎಂದು ಪ್ರಶಾಂತ್ ನೀಲ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಚಾರ್ಲಿ ಸಿನಿಮಾ ನೋಡಿ ಎಂದ ಕನ್ನಡಿಗರು!

ಚಾರ್ಲಿ ಸಿನಿಮಾ ನೋಡಿ ಎಂದ ಕನ್ನಡಿಗರು!

ಇನ್ನು ನಿರ್ದೇಶಕ ಪ್ರಶಾಂತ್ ನೀಲ್ ಈ ರೀತಿಯಾ 'ವಿಕ್ರಂ' ಚಿತ್ರದ ಬಗ್ಗೆ ಟ್ವೀಟ್ ಮಾಡಿ, ಕನ್ನಡಿಗರ ಕಣ್ಣು ಕೆಂಪಾಗಿಸಿದ್ದಾರೆ. ಹಾಗಂತ 'ವಿಕ್ರಂ' ಸಿನಿಮಾ ನೋಡಿ, ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ತಪ್ಪಲ್ಲ. ಆದ್ರೆ ಕನ್ನಡ ಚಿತ್ರವನ್ನೂ ನೋಡಿ ಎನ್ನುತ್ತಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ನೋಡಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ '777 ಚಾರ್ಲಿ'ಯ ಬಗ್ಗೆ ನೀವೂ ಯಾಕೆ ಮಾತನಾಡಿಲ್ಲ. ಕನ್ನಡವನ್ನು ಕಡೆಗಣಿಸಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

ನೀಲ್ ಮುಂದಿನ ಕನ್ನಡ ಸಿನಿಮಾ ಯಾವಾಗ!

ನೀಲ್ ಮುಂದಿನ ಕನ್ನಡ ಸಿನಿಮಾ ಯಾವಾಗ!

ಇನ್ನು ಪ್ರಶಾಂತ್ ನೀಲ್ ಸಂಪೂರ್ಣವಾಗಿ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಂತ ಕನ್ನಡ ಮರೆದಿದ್ದಾರೆ ಎಂದಲ್ಲ. ಯಾಕೆಂದರೆ ಅವರು ಮಾಡುತ್ತಿರುವ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳೇ ಹಾಗಾಗಿ ಈ ಚಿತ್ರಗಳು ಕನ್ನಡದಲ್ಲಿಯೂ ಬರಲಿವೆ. ಸದ್ಯ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಆ ಬಳಿಕ ರಾಮ್ ಚರಣ್‌ಗೆ ಪ್ರಶಾಂತ್ ನೀಲ್ ಆಕ್ಷನ್-ಕಟ್ ಹೇಳ್ತಾರೆ ಎನ್ನಲಾಗುತ್ತಿದೆ. ಆದರೆ ಕೆಜಿಫ್ 3 ಬಿಟ್ಟರೆ, ಮುಂದಿನ ಕನ್ನಡ ಸಿನಿಮಾ ಯಾವಗ ಮತ್ತು ಯಾವುದು ಎನ್ನುವ ಬಗ್ಗೆ ಸುಳಿವೇ ಇಲ್ಲ.

More from Filmibeat

English summary
Prashanth Neel Appreciate Vikram Movie, But Kannadigas Ask why Not 777 Charlie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X