ರಾಜಮೌಳಿ ರೆಕಾರ್ಡ್ ಮುರಿದ ಪ್ರಶಾಂತ್ ನೀಲ್: ಆ ದಾಖಲೆಗಳೇನು?
2022 ಏಪ್ರಿಲ್ 14ರಂದು ಬಹುನಿರೀಕ್ಷಿತ ಚಲನಚಿತ್ರ 'ಕೆಜಿಎಫ್ ಚಾಪ್ಟರ್ 2' ಅದ್ಧೂರಿಯಾಗಿ ಬಿಡುಗಡೆಯಾಗಿದೆ. 'ಕೆಜಿಎಫ್ 2' ಬಹು ಭಾಷೆಗಳಲ್ಲಿ ತೆರೆಗೆ ಬಂದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ವಿಶೇಷವಾಗಿ ಗಮನ ಸೆಳೆಯುತ್ತಿರುವುದು ಹಿಂದಿಯ ಗಳಿಕೆಯಲ್ಲಿ.
'ಕೆಜಿಎಫ್ 2' ಉತ್ತರ ಭಾರತದಲ್ಲಿ ಅಬ್ಬರಿಸುತ್ತಿದೆ. ಚಿತ್ರ ರಿಲೀಸ್‌ಗೂ ಮುನ್ನ ಇದ್ದ ನಿರೀಕ್ಷೆಗೂ ಮೀರಿ ದಾಖಲೆ ಮಾಡುತ್ತಿದೆ. 'ಕೆಜಿಎಫ್ 2' ದಾಖಲೆಗಳನ್ನು ಮುರಿದು, ನಿರೀಕ್ಷೆಗಳನ್ನು ಮೀರಿ ಮುನ್ನುಗ್ಗುತ್ತಿದೆ. ಹಿಂದಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಮೇಲೆ, ದಾಖಲೆ ಬರೆಯುತ್ತಿದೆ.
ರಿಲೀಸ್ ಆದಾಗಿನಿಂದಲೂ ದಾಖಲೆಯನ್ನು ಬರೆಯುತ್ತಿರುವ 'ಕೆಜಿಎಫ್ 2', ಈಗ ಮತ್ತೊಂದು ಇತಿಹಾಸ ಹುಟ್ಟು ಹಾಕುವತ್ತ ಸಾಗುತ್ತಿದೆ. ಒಂದೊಂದೆ ದಾಖಲೆಯನ್ನು ಉಡೀಸ್ ಮಾಡುತ್ತಾ ಬಂದ 'ಕೆಜಿಎಫ್ 2', ಇಂದು ಅತಿ ಹೆಚ್ಚು ಗಳಿಕೆ ಕಂಡ ಭಾರತದ ಎರಡನೇ ಚಿತ್ರ ಎನಿಸಿಕೊಂಡಿದೆ.

ಅತಿ ಹೆಚ್ಚು ಗಳಿಸಿದ ಭಾರತಿಯ 2ನೇ ಚಿತ್ರ KGF 2!
ದಿನ ಕಳೆದಂತೆ 'ಕೆಜಿಎಫ್ 2' ಚಿತ್ರ ಒಂದೊಂದೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ವಿಶ್ವದಾದ್ಯಂತ ಸದ್ದು ಮಾಡುತ್ತಿರುವ 'ಕೆಜಿಎಫ್' ರಿಲೀಸ್ ಆಗಿ ವಾರಗಳೇ ಕಳೆದರೂ, ಚಿತ್ರದ ಬಗ್ಗೆ ಇರುವ ಕ್ರೇಜ್ ಕುಂದಿಲ್ಲ. ಈಗ 'ಕೆಜಿಎಫ್ 2' ಮತ್ತೊಂದು ಮೆಟ್ಟಿಲು ಏರಿದೆ. ಈಗ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿ 'ಕೆಜಿಎಫ್ 2' ಹೊರ ಹೊಮ್ಮಿದೆ.

RRR ರೆಕಾರ್ಡ್ ಬ್ರೇಕ್ ಮಾಡಿದ KGF 2!
'ಬಾಹುಬಲಿ 2', 'RRR' ಚಿತ್ರದ ಬಳಿಕ 'ಕೆಜಿಎಫ್ 2' ಮೂರನೆ ಸ್ಥಾನದಲ್ಲಿ ಇತ್ತು. ಈಗ ಎರಡನೇ ಸ್ಥಾನಕ್ಕೆ ಬಂದು ಬಿಟ್ಟಿದೆ. RRR ಚಿತ್ರದ ರೆಕಾರ್ಡ್ ಧೂಳೀಪಟ ಮಾಡಿ 'ಕೆಜಿಎಫ್ 2' 2ನೇ ಸ್ಥಾನಕ್ಕೇರಿದೆ. ಹಾಗಾಗಿ 'ಬಾಹುಬಲಿ 2' ಮೊದಲ ಸ್ಥಾನದಲ್ಲಿ ಇದ್ದರೆ, 'ಕೆಜಿಎಫ್ 2' ಎರಡನೇ ಸ್ಥಾನದಲ್ಲಿ ರಾರಾಜಿಸುತ್ತಿದೆ.

'ಬಾಹುಬಲಿ 2' -1,810 ಕೋಟಿ, 'ಕೆಜಿಎಫ್ 2'- 1100 ಕೋಟಿ!
'ಬಾಹುಬಲಿ 2' ಚಿತ್ರದ ಒಟ್ಟಾರೆ ಗಳಿಕೆ 1,810 ಕೋಟಿ ಎಂದು ಅಧಿಕೃತವಾಗಿ ವಿಕಿಪೀಡಿಯಾದಲ್ಲಿ ಮಾಹಿತಿ ಇದೆ. ಈ ಮೂಲಕ 'ಬಾಹುಬಲಿ 2' ಮೊದಲ ಸ್ಥಾನದಲ್ಲಿ ಇದೆ. ಇದನ್ನು ಬಿಟ್ಟರೆ 'ಕೆಜಿಎಫ್ 2' ಈಗ 1,110 ಕೋಟಿ ಕಲೆ ಹಾಕಿದೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ನಿರ್ದೇಶನದ RRR ಸಿನಿಮಾ ಬಿಡುಗಡೆಯಾಗಿ 41 ದಿನಗಳಾಗಿದೆ. ಈ 41 ದಿನಗಳಲ್ಲಿ RRR ವರ್ಲ್ಡ್ ವೈಡ್ ಕಲೆಕ್ಷನ್ 1126 ಕೋಟಿ ಗಳಿಕೆ ಕಂಡಿದೆ. ಈಗಾಗಲೇ 22ನೇ ದಿನದ ಬುಕ್ಕಿಂಗ್ ಸೇರಿದರೆ 'ಕೆಜಿಎಫ್ 2' ಈ ದಾಖಲೆಯನ್ನು ಮುರಿದಂತೆಯೇ ಲೆಕ್ಕಾ.

ನಂಬರ್ 1 ಆಗಲು 'KGF 2'ಗೆ ಒಂದೇ ಮೆಟ್ಟಿಲು!
'ಬಾಹುಬಲಿ 2' ಸಿನಿಮಾ 100 ದಿನಗಳಿಗೂ ಹೆಚ್ಚಿನ ಕಾಲ ಪ್ರದರ್ಶನ ಕಂಡಿದೆ. ಹಾಗಾಗಿ ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ 'ಕೆಜಿಎಫ್ 2' ಚಿತ್ರಕ್ಕೆ ಇದು ಕೇವಲ 21ನೇ ದಿನ. ಹಾಗಾಗಿ 100 ದಿನಗಳ ವರೆಗೆ 'ಕೆಜಿಎಫ್ 2' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡರೆ 'ಬಾಹುಬಲಿ 2' ಮೀರಿಸಿ ಮೊದಲ ಸ್ಥಾನಕ್ಕೆ ಏರುವುದರಲ್ಲಿ ಅನುಮಾನವೇ ಇಲ್ಲ. ಭಾರತೀಯ ಚಿತ್ರರಂಗದ ನಂಬರ್ 1 ಸಿನಿಮಾ ಆಗಲು 'ಕೆಜಿಎಫ್ 2'ಗೆ ಇನ್ನೊಂದು ಮೆಟ್ಟಿಲು ಮಾತ್ರವೇ ಇದೆ.


Click it and Unblock the Notifications











