For Quick Alerts
  ALLOW NOTIFICATIONS  
  For Daily Alerts

  ತಂದೆ ಹುಟ್ಟುಹಬ್ಬದ ಹಿನ್ನೆಲೆ ಕಣ್ಣಿನ ಆಸ್ಪತ್ರೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

  |

  'ಕೆಜಿಎಫ್ ಚಾಪ್ಟರ್ 2' ಬಳಿಕ ಪ್ರಶಾಂತ್ ನೀಲ್ ವರ್ಲ್ಡ್‌ ಫೇಮಸ್ ಆಗಿದ್ದಾರೆ. ಎಲ್ಲಿ ನೋಡಿದರೂ ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆನೇ ಮಾತು. 'ಕೆಜಿಎಫ್ 2' ದಾಖಲೆ ಬರೆಯುತ್ತಿದ್ದಂತೆ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗ ಎಲ್ಲರಿಗೂ 'ಸಲಾರ್' ಸಿನಿಮಾ ಬಗ್ಗೆ ಟಾಕ್ ಶುರುವಾಗಿದೆ.

  ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮೊದಲ ಕಾಂಬಿನೇಷನ್ 'ಸಲಾರ್'. ಈ ಸಿನಿಮಾ ಬಗ್ಗೆ ಇಡೀ ಇಂಡಿಯಾವೇ ಎದುರು ನೋಡುತ್ತಿದೆ. ಈ ಬೆನ್ನಲ್ಲೇ ಸ್ವಾತಂತ್ರ್ಯ ದಿನದ ಅಂಗವಾಗಿ 'ಸಲಾರ್' ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಆದರೆ, ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಶಾಂತ್ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ತನ್ನ ತಂದೆ ಹೆಸರಲ್ಲಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಅದೇನು ಅಂತ ನೋಡಲು ಮುಂದೆ ಓದಿ.

  Recommended Video

  ತಂದೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಮಾಡಿದ KGF ಡೈರೆಕ್ಟರ್ | Filmibeat Kannada

  'ಸಲಾರ್' ರಿಲೀಸ್ ದಿನಾಂಕ ಪ್ರಕಟ, ಇನ್ನೊಂದು ವರ್ಷ ಕಾಯಲೇ ಬೇಕು!'ಸಲಾರ್' ರಿಲೀಸ್ ದಿನಾಂಕ ಪ್ರಕಟ, ಇನ್ನೊಂದು ವರ್ಷ ಕಾಯಲೇ ಬೇಕು!

  ಕಣ್ಣಿನ ಆಸ್ಪತ್ರೆಗೆ 50ಲಕ್ಷ ರೂ. ನೀಡಿದ ಪ್ರಶಾಂತ್

  ದೇಶದೆಲ್ಲಡೆ 75ನೇ ಸ್ವಾತಂತ್ರ್ಯ ದಿನೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಜನರು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಇತ್ತ ಪ್ರಶಾಂತ್ ನೀಲ್ ತನ್ನ ಹುಟ್ಟೂರಾದ ನೀಲಕಂಠಪುರಂ ಎಂಬ ಹಳ್ಳಿಗೆ ವಿಸಿಟ್ ಹಾಕಿದ್ದರು. ಅದಕ್ಕೊಂದು ಕಾರಣವಿತ್ತು.

  ಈ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಎಲ್‌ ವಿ ಪ್ರಸಾದ್ ಐ ಹಾಸ್ಟಿಟಲ್‌ ನಿರ್ಮಾಣಕ್ಕೆ ಸುಮಾರು 50ಲಕ್ಷ ರೂ. ಹಣವನ್ನು ದೇಣಿಯಾಗಿ ನೀಡಿದ್ದಾರೆ. ಈ ವಿಷಯವನ್ನು ಅವರ ಸಂಬಂಧಿ ಡಾ.ಎನ್‌ ರಘುವೀರ ರೆಡ್ಡಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  ತಂದೆ ಹುಟ್ಟುಹಬ್ಬಕ್ಕೆ ಒಂದೊಳ್ಳೆ ಕೆಲಸ

  ಇದೇ ದಿನ ಒಳ್ಳೆಯ ಕೆಲಸ ಮಾಡಿದ್ದಕ್ಕೆ ಬಲವಾದ ಕಾರಣವಿದೆ. ಪ್ರಶಾಂತ್ ನೀಲ್ ತಂದೆ ಶುಭಾಷ್ ಹುಟ್ಟಿದ್ದೂ ಕೂಡ ಆಗಸ್ಟ್ 15ರಂದೇ. ಅಷ್ಟೇ ಅಲ್ಲ. ಪ್ರಶಾಂತ್ ನೀಲ್ ತಂದೆ ಹುಟ್ಟಿದ್ದು, ಆಗಸ್ಟ್ 15, 1947. ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನವೇ ಹುಟ್ಟಿದ್ದಾರೆ. ಈ ಕಾರಣಕ್ಕೆ ಈ ದಿನ ತುಂಬಾನೇ ಸ್ಪೆಷಲ್. ಹೀಗಾಗಿ ಅವರ 75ನೇ ಬರ್ತ್ ಅನಿವರ್ಸರಿಯಂದು ಒಂದೊಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ.

  Prashanth Neel Contributed 50 Lakhs to L V Prasad Eye Hospital

  ಆಂಧ್ರದ ನೀಲಕಂಠಂ ಇವರ ಹುಟ್ಟೂರು. ಈ ಕಾರಣಕ್ಕೆ ಅಲ್ಲಿನ ದೇವಾಲಯಕ್ಕೆ ಪ್ರಶಾಂತ್ ನೀಲ್ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿ ನಮ್ಮ ಊರಿನಲ್ಲಿ ಇಷ್ಟು ಸುಂದರವಾದ ದೇವಾಲಯ ನೋಡಿ ಖುಷಿಯಾಯಿತು. ನಮ್ಮ ಚಿಕ್ಕಪ್ಪನವರು ದೇವಾಲಯವನ್ನು ಚೆನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ನಮ್ಮ ಪೂರ್ವಜರು ಪೂಜೆ ಮಾಡಿದ ದೇವಾಲಯವಿದು. ಮತ್ತೆ ಇಲ್ಲಿಗೆ ಬಂದಿದ್ದು ಖುಷಿಯ ಸಂಗತಿ ಎಂದಿದ್ದಾರೆ.

  English summary
  Prashanth Neel Contributed 50 Lakhs to L V Prasad Eye Hospital, Know More.
  Monday, August 15, 2022, 23:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X