For Quick Alerts
  ALLOW NOTIFICATIONS  
  For Daily Alerts

  ಮರಾಠಿಗೆ ಕನ್ನಡದ ಹಿಟ್ ಸಿನಿಮಾ 'ಉಗ್ರಂ'!

  |

  ಕನ್ನಡದಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ 'ಉಗ್ರಂ'. ಈ ಚಿತ್ರ ಯಾವುದೇ ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಬಂದು, ಸೂಪರ್ ಹಿಟ್ ಲಿಸ್ಟ್ ಸೇರಿದ ಸಿನಿಮಾ. 'ಉಗ್ರಂ' ಸಿನಿಮಾ ಎಷ್ಟೋ ಮಂದಿಗೆ ಸಿನಿಮಾದಲ್ಲಿ ನೆಲೆಯೂರಲು ಕಾರಣವಾದ ಸಿನಿಮಾ.

  ಇದು ಹಲವರಿಗೆ ಮೊದಲ ಹೆಜ್ಜೆಯಾಗಿತ್ತು. ನಿರ್ದೇಶಕ, ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಮಾತ್ರವಲ್ಲ, ನಾಯಕ ನಟನಿಗೂ ಈ ಸಿನಿಮಾ ಮರುಜೀವ ಕೊಟ್ಟ ಸಿನಿಮಾ. ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಬರೆದಿದೆ.

  ದರ್ಶನ್ ಬಗ್ಗೆ ಅಪ್ಪು ಫ್ಯಾನ್ಸ್ ಅಸಮಾಧಾನ: ನಡೆದಿದ್ದು ಏನು?ದರ್ಶನ್ ಬಗ್ಗೆ ಅಪ್ಪು ಫ್ಯಾನ್ಸ್ ಅಸಮಾಧಾನ: ನಡೆದಿದ್ದು ಏನು?

  ಈಗ ಈ ಚಿತ್ರದ ಬಗ್ಗೆ ಮಾತನಾಡಲು ಕಾರಣವಿದೆ. ಇತ್ತೀಚೆಗೆ ಕನ್ನಡದ ಸಿನಿಮಾಗಳಿಗೆ, ಕಲಾವಿದ, ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಸಿನಿಮಾಗೂ ಬೇಡಿಕೆ ಬಂದಿದ್ದು ಪರಭಾಷೆಯಲ್ಲಿ ರಿಮೇಕ್ ಆಗುತ್ತಿದ್ದೆ. ಮರಾಠಿಯಲ್ಲಿ 'ಉಗ್ರಂ' ಸಿನಿಮಾ ರೀಮೇಕ್ ಆಗುತ್ತಿದೆ. ಯಾರು ರಿಮೇಕ್ ಮಾಡುತ್ತಿದ್ದಾರೆ ಎನ್ನುವುದನ್ನು ಮುಂದೆ ಓದಿ....

  ಶ್ರೀ ಮುರಳಿ ಕಮ್ ಬ್ಯಾಕ್!

  ಶ್ರೀ ಮುರಳಿ ಕಮ್ ಬ್ಯಾಕ್!

  'ಉಗ್ರಂ' ಚಿತ್ರದ ಬಗ್ಗೆ ಹೊಸದಾಗಿ ಏನನ್ನೂ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚೊತ್ತಿದೆ. ಇದು ನಟ ಶ್ರೀ ಮುರುಳಿಗೆ ಮರು ಜನ್ಮವಿತ್ತ ಸಿನಿಮಾ ಎನ್ನಬಹುದು. ಅಂದರೆ ಸಾಲು ಸಾಲು ಸೋಲುಗಳನ್ನೇ ಕಾಣುತ್ತಿದ್ದ ನಟ ಶ್ರೀ ಮುರಳಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಇದು. 'ಉಗ್ರಂ' ಮೂಲಕ ನಟ ಶ್ರೀ ಮುರಳಿ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ಸಾಲು, ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  ಪ್ರಶಾಂತ್ ನೀಲ್ ಚೊಚ್ಚಲ ನಿರ್ದೇಶನ!

  ಪ್ರಶಾಂತ್ ನೀಲ್ ಚೊಚ್ಚಲ ನಿರ್ದೇಶನ!

  ವಿಶೇಷ ಎಂದರೆ 'ಉಗ್ರಂ' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾದ ಮೂಲಕವೇ ಪ್ರಶಾಂತ್ ನೀಲ್ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು. ಈ ಚಿತ್ರಕ್ಕೂ ಮುನ್ನ ಪ್ರಶಾಂತ್ ನೀಲ್ ಯಾರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಮೊದಲ ಚಿತ್ರದಲ್ಲೇ ಯಶಸ್ಸು ಕಂಡ ಪ್ರಶಾಂತ್ ನೀಲ್ ನಂತರ 'ಕೆಜಿಎಫ್' ಸರಣಿ ಸಿನಿಮಾಗಳನ್ನು ಯಶಸ್ಸು ದಕ್ಕಿಸಿಕೊಂಡು, ಸದ್ಯ ಪ್ರಭಾಸ್ ಜೊತೆಗೆ 'ಸಲಾರ್' ಸಿನಿಮ ಮಾಡುತ್ತಿದ್ದಾರೆ.

  ಮರಾಠಿಯಲ್ಲಿ 'ಉಗ್ರಂ' ರಿಮೇಕ್!

  ಮರಾಠಿಯಲ್ಲಿ 'ಉಗ್ರಂ' ರಿಮೇಕ್!

  'ಉಗ್ರಂ' ಸಿನಿಮಾ ಕನ್ನಡದಲ್ಲಿ 2014ರಲ್ಲಿ ತೆರೆಗೆ ಬಂತು. ಸಿನಿಮಾ ರಿಲೀಸ್ ಆಗಿ 8 ವರ್ಷಗಳೇ ಕಳೆದಿವೆ. ಇನ್ನು ಈ ಸಿನಿಮಾ ಸಿನಿಪ್ರೇಕ್ಷಕರ ಮನಸಲ್ಲಿ ಹಸಿರಾಗಿಯೇ ಉಳಿದಿದೆ. ಈ ಚಿತ್ರಕ್ಕೆ ಇನ್ನೂ ಬೇಡಿಕೆ ಇದೆ. ಈಗ 'ಉಗ್ರಂ' ಸಿನಿಮಾ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಈ ಚಿತ್ರವನ್ನು ಸುಮಿತ್ ಕಕ್ಕಡ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.

  'ಉಗ್ರಂ'ಗೆ ಶಾನ್ವಿ ಶ್ರೀವತ್ಸವ್ ನಾಯಕಿ!

  'ಉಗ್ರಂ'ಗೆ ಶಾನ್ವಿ ಶ್ರೀವತ್ಸವ್ ನಾಯಕಿ!

  ಮರಾಠಿಯಲ್ಲಿ ಬರಲಿರುವ 'ಉಗ್ರಂ' ಸಿನಿಮಾದ ಪಾತ್ರವರ್ಗ ಕೂಡ ಅಂತಿಮಗೊಂಡಿದೆಯಂತೆ. ವರದಿಗಳ ಪ್ರಕಾರ, ಕನ್ನಡದಲ್ಲಿ ನಟಿ ಹರಿಪ್ರಿಯ ನಟಿಸಿದ್ದ ಪಾತ್ರದಲ್ಲಿ ಶಾನ್ವಿ ಶ್ರೀವತ್ಸವ್ ನಟಿಸುತ್ತಿದ್ದಾರೆ. ಇನ್ನು ನಾಯಕನಾಗಿ ಶರದ್ ಖೇಳ್ಕರ್ ನಟಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡದ ಹಿಟ್ ಸಿನಿಮಾ ಮರಾಠಿಯಲ್ಲೂ ಹಿಟ್ ಲಿಸ್ಟ್ ಸೇರುತ್ತಾ ಅನ್ನೋದನ್ನು ನೋಡಬೇಕಿದೆ.

  Recommended Video

  'ವಿಕ್ರಾಂತ್ ರೋಣ' ಕಲೆಕ್ಷನ್ ಕಥೆ ಏನಾಯ್ತು? ದಿಢೀರ್ ಟಿಕೆಟ್ ದರ ಇಳಿಸಿದ್ದೇಕೆ? | Vikranth Rona | Filmibeat
  English summary
  Prashanth Neel First Directorial Movie Ugramm Remake In Marathi With shanvi Srivastava, Know More,
  Tuesday, August 9, 2022, 14:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X