ಪ್ರಶಾಂತ್ ನೀಲ್‌ಗೆ ತೆಲುಗಿನಲ್ಲಿ ಭಾರಿ ಬೇಡಿಕೆ: ಮತ್ತೊಬ್ಬ ಹೀರೋ ಫಿಕ್ಸ್!

ಸಾಮಾನ್ಯವಾಗಿ ಸಿನಿಮಾರಂಗದಲ್ಲಿ ಸ್ಟಾರ್ ನಟರನ್ನು ನಿರ್ದೇಶಕರು ಹುಡುಕಿಕೊಂಡು ಬರುತ್ತಾರೆ. ನಟನ ಮುಂದಿನ ಸಿನಿಮಾಗೆ ಯಾರು ನಿರ್ದೇಶಕ ಎನ್ನುವ ಕುತೂಹಲಗಳು ಇರುತ್ತವೆ. ಆದರೆ ನಿರ್ದೇಶಕನನ್ನು ಹುಡುಕಿಕೊಂಡು ನಟರೇ ಬರುದು ಅಥವಾ ಒಬ್ಬ ನಿರ್ದೇಶಕ ಸಿನಿಮಾಗಳಲ್ಲಿ ನಟಿಸೋ ನಟ ಯಾರು ಎಂದು ನಿರೀಕ್ಷೆ ಮಾಡುವುದು ವಿರಳ. ಇದು ಎಲ್ಲರ ವಿಚಾರದಲ್ಲೂ ಸಾಧ್ಯ ಆಗುವುದಿಲ್ಲ.

ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ವಿಚಾರದಲ್ಲಿ ಇದು ನಿಜವಾಗಿದೆ. ಅಂದರೆ ಪ್ರಶಾಂತ್ ನೀಲ್ ಕೆಜಿಎಫ್ ಸರಣಿ ಸಿನಿಮಾಗಳನ್ನು ಮಾಡಿದ್ದೇ, ಮಾಡಿದ್ದು ಅವರ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಹಾಗಾಗಿ ಅವರ ಮುಂದಿನ ಸಿನಿಮಾಗಳಲ್ಲಿ ಯಾರು ಹೀರೋ ಎನ್ನುವುದೇ ಈಗ ಹೆಚ್ಚು ಚರ್ಚೆ ಆಗುತ್ತಿದೆ.

ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್‌ಗೆ ತೆಲುಗು ಚಿತ್ರರಂಗದಲ್ಲಿ ರೆಡ್ ಕಾರ್ಪೆಟ್ ಹಾಸಲಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟಿಸಲು ತೆಲುಗಿನ ಮತ್ತೊಬ್ಬ ಹೀರೋ ರೆಡಿಯಾಗಿದ್ದಾರೆ. ಅದು ಯಾರು ಎನ್ನುವ ಬಗ್ಗೆ ಮುಂದೆ ಓದಿ....

ಪ್ರಶಾಂತ್ ನೀಲ್ ಮುಂದಿನ ನಾಯಕ 'ನಾನಿ'!

ಪ್ರಶಾಂತ್ ನೀಲ್ ಮುಂದಿನ ನಾಯಕ 'ನಾನಿ'!

ನಿರ್ದೇಶಕ ಪ್ರಶಾಂತ್ ನೀಲ್‌ಗೆ ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಸಾಲು ಸಾಲು ನಟರು ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಲು ಕಾಯುತ್ತಾ ಇದ್ದಾರೆ. ಈಗಾಗಲೇ ಟಾಲಿವುಡ್‌ನ ಬಿಗ್ ಸ್ಟಾರ್ ನಟರ ಹೆಸರುಗಳು ಪ್ರಶಾಂತ್ ನೀಲ್ ಜೊತೆಗೆ ಕೇಳಿ ಬಂದಿವೆ. ಈ ಸಾಲಿಗೆ ಈಗ ನಟ ನಾಚ್ಯುರಲ್ ಸ್ಟಾರ್ ನಾನಿ ಸೇರಿಕೊಂಡಿದ್ದಾರೆ. ಹೌದು ಪ್ರಶಾಂತ್ ನಟ ನಾನಿಗೆ ನಿರ್ದೇಶನ ಮಾಡಲಿದ್ದಾರಂತೆ.

ಜೂ.ಎನ್‌ಟಿಆರ್ ಬಳಿಕ ನಾನಿ ಸಿನಿಮಾ ಶುರು!

ಜೂ.ಎನ್‌ಟಿಆರ್ ಬಳಿಕ ನಾನಿ ಸಿನಿಮಾ ಶುರು!

ಕೆಜಿಎಫ್ 2 ಸಿನಿಮಾದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್‌ನತ್ತ ಮುಖ ಮಾಡಿದ್ದು 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಸಲಾರ್' ಸಿನಿಮಾದ ಬಳಿಕ ಟಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಜೂನಿಯರ್ ಎನ್‌ಟಿಆರ್ 31ನೇ ಸಿನಿಮಾ ಫಸ್ಟ್ ಲುಕ್ ಲಾಂಚ್ ಆಗಿದೆ. ಇನ್ನು ಈ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ನಾನಿ ಸಿನಿಮಾ ಶುರು ಮಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ.

ಪ್ರಭಾಸ್, ಜೂ.ಎನ್‌ಟಿಆರ್, ರಾಮ್‌ಚರಣ್‌ಗೂ ಸಿನಿಮಾ!

ಪ್ರಭಾಸ್, ಜೂ.ಎನ್‌ಟಿಆರ್, ರಾಮ್‌ಚರಣ್‌ಗೂ ಸಿನಿಮಾ!

ತೆಲುಗಿನ ಸ್ಟಾರ್ ನಟರು ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಹಿಂದಿ ಬಿದ್ದಂತಿದೆ. ಪ್ರಶಾಂತ್ ನೀಲ್ ಮಾಡಿದ ಜಾದು ನೋಡಿ, ಬಹುತೇಕ ತೆಲುಗು ಸ್ಟಾರ್‌ ನಟರು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಅಭಿನಯಿಸಲು ಕಾಯುತ್ತಿದ್ದಾರೆ. ಇನ್ನು ಪ್ರಭಾಸ್ ಬಳಿಕ ಜೂ.ಎನ್‌ಟಿಆರ್, ರಾಮ್‌ಚರಣ್‌ಗೂ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್, ಈಗ ನಟ ನಾನಿ ಹೆಸರು ಕೂಡ ಸೇರಿಕೊಂಡಿದೆ.

ರಾಜಮೌಳಿ ಬಳಿಕ, ಪ್ರಶಾಂತ್ ನೀಲ್‌ಗೆ ಭಾರಿ ಬೇಡಿಕೆ!

ರಾಜಮೌಳಿ ಬಳಿಕ, ಪ್ರಶಾಂತ್ ನೀಲ್‌ಗೆ ಭಾರಿ ಬೇಡಿಕೆ!

ತೆಲುಗಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಿರ್ದೇಶಕ ಎಂದರೆ ಅದು ರಾಜಮೌಳಿ. ರಾಜಮೌಳಿ ಬಳಿಕ, ತೆಲುಗಿನಲ್ಲಿ ಈ ಮಟ್ಟಿಗಿನ ಬೇಡಿಕೆ ಪಡೆಯುತ್ತಿರುವ ನಿರ್ದೇಶಕ ಎಂದರೆ ಅದು ಪ್ರಶಾಂತ್ ನೀಲ್. ಸ್ಟಾರ್ ನಟರ ಸ್ಟಾರ್ ಬದಲಿಸುವ ಚಾಣಕ್ಯನಂತೆ ಕಂಗೊಳಿಸುತ್ತಾ ಇದ್ದರೆ. ಹಾಗಾಗಿ ಸಾಕಷ್ಟು ನಟರು ಮಾಂತ್ರಿಕನ ಹಿಂದೆ ಬಿದ್ದಿದ್ದಾರೆ.

More from Filmibeat

English summary
Prashanth Neel Has High Demand In Tollywood, His Next Hero Is Natural Star Nani, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X