Don't Miss!
- News
ಮುಂಬರುವ 5 ದಿನಗಳ ಕಾಲ ದೆಹಲಿಯ ಜನರಿಗೆ ಬಿಸಿಲಿನ ತಾಪದಿಂದ ಮುಕ್ತಿ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೋಲುಂಡ ಪ್ರಭಾಸ್ ಗೆಲ್ಲಿಸುವ ಜವಾಬ್ದಾರಿ ಪ್ರಶಾಂತ್ ನೀಲ್ ಹೆಗಲಿಗೆ!
ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಸಿನಿಮಾ ಜರ್ನಿಯಲ್ಲಿ 'ಬಹುಬಲಿ'ಗೂ ಮುನ್ನ ಮತ್ತು 'ಬಾಹುಬಲಿ' ನಂತರ ಎಂದು ವಿಂಗಡಿಸಲಾಗುತ್ತದೆ. ಯಾಕೆಂದರೆ 'ಬಾಹುಬಲಿ' ಡಾರ್ಲಿಂಗ್ ಪ್ರಭಾಸ್ ವೃತ್ತಿ ಬದುಕಿನಲ್ಲಿ ದೊಡ್ಡ ಮೈಲಿಗಲ್ಲು, ಬೇರೆ ನಟರಲ್ಲ ಸ್ವತಃ ಪ್ರಭಾಸ್‌ಗೆ 'ಬಾಹುಬಲಿ'ಯನ್ನು ಮೀರಿಸುವ ಸಿನಿಮಾ ಮಾಡಲು ಸಾಧ್ಯ ಆಗುವುದಿಲ್ಲ ಎಂದು ಕಾಣುತ್ತದೆ.
'ಬಾಹುಬಲಿ' ಬಳಿಕ ನಟ ಪ್ರಭಾಸ್ ಸಿನಿಮಾಗಳ ಮೇಲೆ ನಿರೀಕ್ಷೆಗಳು ದುಪ್ಪಟ್ಟು ಆಗಿವೆ. ಪ್ರಭಾಸ್ ಯಾವ ಸಿನಿಮಾ ಬಂದರು, ನಿರೀಕ್ಷೆಯಿಂದಲೇ ಜನ ಚಿತ್ರಮಂದಿರಕ್ಕೆ ಹೋಗುತ್ತಾರೆ. ಆದರೆ ಅದ್ಯಾಕೋ 'ಬಾಹುಬಲಿ' ಬಳಿಕ ಬಂದ ಎರಡೂ ಚಿತ್ರಗಳೂ ಅಂದುಕೊಂಡ ಮಟ್ಟಿಗೆ ಜಯ ಸಾಧಿಸಲು ಆಗಲೇ ಇಲ್ಲ.
ಕೆಜಿಎಫ್
3:
ರಾಕಿ
ಭಾಯ್
ಎದುರು
ರಾಣಾ
ದಗ್ಗುಬಾಟಿ
ವಿಲನ್?
ಹಾಗಾಗಿ ಪ್ರಭಾಸ್ ಮುಂದಿನ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟುಕೊಂಡಿದೆ. ನಿರೀಕ್ಷೆ ಮಾತ್ರ ಅಲ್ಲ, ಪ್ರಭಾಸ್ ಮತ್ತು ಚಿತ್ರತಂಡದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ಜವಾಬ್ದಾರಿ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಮೇಲೆಯೇ ಇದೆ. ಹೇಗೆ ಎನ್ನುವುದನ್ನು ಮುಂದೆ ಓದಿ...

ಪ್ರಭಾಸ್ ಮುಂದಿನ ಸಿನಿಮಾ 'ಸಲಾರ್'!
ಪ್ರಭಾಸ್ ಸದ್ಯ ಬ್ಯಾಕ್ ಟು, ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಆದರೆ ತೆರೆಗೆ ಬರಲಿರುವ ಪ್ರಭಾಸ್
ಮುಂದಿನ ಸಿನಿಮಾ 'ಸಲಾರ್' ಎನ್ನಲಾಗುತ್ತಿದೆ. ಹಾಗಾಗಿ ಈ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇದೆ. ಅದರಲ್ಲೂ ಹೇಳಿ ಕೇಳಿ 'ಸಲಾರ್' ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಸಿನಿಮಾ. ಇದು ಇನ್ನೊಂದು ಕೆಜಿಎಫ್ ಆಗಲು ಸಾಧ್ಯವಿಲ್ಲ. ಆದರೆ ನೀಲ್ ಮೇಲೆ ಸಿನಿಮಾ ಗೆಲ್ಲಿಸುವ ಜವಾಬ್ದಾರಿ ಅಂತು ಇದ್ದೇ ಇದೆ.
ಪ್ರಶಾಂತ್
ನೀಲ್
ಭಾರತೀಯ
ಚಿತ್ರರಂಗದ
ವೀರಪ್ಪನ್:
RGV
ಟ್ವೀಟ್
ಮೇಲೆ
ಟ್ವೀಟ್

'ಸಲಾರ್' ಬಳಿಕ 'ಆದಿಪುರುಷ್' ತೆರೆಗೆ!
'ಸಲಾರ್', 'ಆದಿಪುರುಷ್', 'ಪ್ರಾಜೆಕ್ಟ್ ಕೆ' ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಆದಿಪುರುಷ್' ಸಿನಿಮಾದ ಚಿತ್ರೀಕರಣವನ್ನು ಪ್ರಭಾಸ್ ಮಾಡಿ ಮುಗಿಸಿದ್ದಾರೆ. 'ಸಲಾರ್' ಸಿನಿಮಾದ ಶೂಟಿಂಗ್ ಇನ್ನೂ ಮುಗಿಲ್ಲ. ಆದರೆ ಈಗ ಎಷ್ಟು ಚಿತ್ರೀಕರಣ ಮುಗಿದಿದೆಯೋ, ಅಷ್ಟೂ ಪ್ರೋಸ್ಟ್ ಪ್ರೋಡಕ್ಷನ್ ಕೂಡ ಮುಗಿದೆ ಎನ್ನಲಾಗುತ್ತಿದೆ. ಹಾಗಾಗಿ ಮೊದಲು ತೆರೆಗೆ ಬರುವುದು 'ಸಲಾರ್'. ಬಳಿಕ 'ಆದಿಪುರುಷ್' ಮತ್ತು 'ಪ್ರಾಜೆಕ್ಟ್ ಕೆ' ಸಿನಿಮಾಗಳು ರಿಲೀಸ್ ಆಗಲಿವೆ.

ಅದ್ದೂರಿ ವೆಚ್ಚದಲ್ಲಿ ಸಲಾರ್ ನಿರ್ಮಾಣ!
'ಸಲಾರ್' ಸಿನಿಮಾವನ್ನು ಕನ್ನಡದ ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಡುತ್ತಿದೆ. ದೊಡ್ಡ ಬಜೆಟ್ ಸಿನಿಮಾ ಆದ ಕಾರಣ ಹೊಂಬಾಳೆ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲೇ ಬಂಡವಾಳ ಹೂಡುತ್ತಿದೆ. ಯಾಕೆಂದರೆ ನಿರ್ದೇಶಕ ಪ್ರಶಾಂತ್ ನೀಲ್ ಕಾಂಪ್ರಮೈಸ್ ಮಾಡಿಕೊಂಡು ಸಿನಿಮಾ ಮಾಡುವುದೇ ಇಲ್ಲ. ಹಾಗಾಗಿ ತೆರೆಯ ಮೇಲೆ ಸಿನಿಮಾ ಪರ್ಫೆಕ್ಟ್ ಆಗಿ ಮೂಡಿ ಬರುತ್ತದೆ. ಇನ್ನು 'ಸಲಾರ್' ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ 75 ಕೋಟಿ ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ.
ಕೆಜಿಎಫ್
3:
ರಾಕಿ
ಭಾಯ್
ಎದುರು
ರಾಣಾ
ದಗ್ಗುಬಾಟಿ
ವಿಲನ್?

ಪ್ರಭಾಸ್ ಮುಂದಿನ ಚಿತ್ರ ಗೆಲ್ಲುವ ಅನಿವಾರ್ಯತೆ!
'ಬಾಹುಬಲಿ' ನಂತರ ಬಂದ 'ಸಾಹೋ','ರಾಧೆ ಶ್ಯಾಮ್' ಚಿತ್ರಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅದರಲ್ಲೂ 'ರಾಧೆ ಶ್ಯಾಮ್' ಫ್ಯಾಪ್ ಸಿನಿಮಾಗಳ ಸಾಲು ಸೇರಿ ಬಿಟ್ಟಿತು. ಹಾಗಾಗಿ ಪ್ರಭಾಸ್ ಮುಂದಿನ ಸಿನಿಮಾ ಗೆಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅದು 'ಸಲಾರ್' ಆದ ಕಾರಣ ಸಿನಿಮಾ ಗೆದ್ದರೂ, ಸೋತರು ಅದು ನಿರ್ದೇಶಕನ ಹೊಣೆ ಆಗಿರುತ್ತದೆ. ಹಾಗಾಗಿ ಪ್ರಶಾಂತ್ ನಿಲ್ ಹೆಗಲಿಗೆ ಈಗ ದೊಡ್ಡ ಜವಾಬ್ದಾರಿ ಇದೆ.