ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!

ರಾಕಿಂಗ್ ಸ್ಟಾರ್ ಯಶ್ ನಟಿಸಿದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕಂಡ ಬಹುದೊಡ್ಡ ಸಕ್ಸಸ್ ನೋಡಿದ್ಮೇಲೆ, ಆ ಸಿನಿಮಾದಲ್ಲಿ ನಾನೊಂದು ಸಣ್ಣ ಪಾತ್ರ ಮಾಡಬೇಕಿತ್ತು ಎಂಬ ಆಸೆ ಅನೇಕರಲ್ಲಿದೆ. ಇಂತಹ ಅನೇಕರು ಕೆಜಿಎಫ್ ನಿರ್ದೇಶಕ ಅಥವಾ ನಿರ್ಮಾಪಕರನ್ನ ಸಂಪರ್ಕಿಸುವ ಪ್ರಯತ್ನವನ್ನು ಮಾಡಿರುವುದು ನಿಜ.

ಕೆಜಿಎಫ್ ಚಿತ್ರದ ಇದೇ ಯಶಸ್ಸನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನವೂ ಸಾಗಿದೆ ಎಂಬ ಮಾಹಿತಿ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿತ್ತು. ಇದೀಗ, ಈ ವಿಷಯ ಖುದ್ದು ನಿರ್ದೇಶಕರಿಂದಲೇ ಬಹಿರಂಗವಾಗಿದೆ.

ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ, ಆಡಿಷನ್ ಗೆ ಬನ್ನಿ ಎಂಬ ಜಾಹೀರಾತು ನೀಡಿ, ಪ್ರತಿಭಾನ್ವಿತರನ್ನ ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ, ಎಚ್ಚರದಿಂದಿರಿ...! ಎಂದು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.

Prashanth Neel Mail Id Is Misusing

''[email protected]'' ಎಂಬ ನಕಲಿ ಮೇಲ್ ಬಳಸಲಾಗುತ್ತಿದೆ. ಈ ಮೇಲ್ ಬಳಸಿ ಕೆಜಿಎಫ್ ಆಡಿಷನ್ ಇದೆ ಎಂಬ ಮೇಲ್ ಗಳನ್ನ ಕಳಹಿಸಲಾಗುತ್ತಿದೆ. ಇಂತಹ ಮೇಲ್ ಬಂದರೆ ಅದನ್ನು ದಯವಿಟ್ಟು ನಿರ್ಲಕ್ಷಿಸಿ....ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟ ಯಾವುದೇ ಆಡಿಷನ್ ಇದ್ದರೂ ಹೊಂಬಾಳೆ ಫಿಲಂಸ್ ಕಡೆಯಿಂದಲೇ ಮಾಹಿತಿ ನೀಡಲಾಗುತ್ತೆ'' ಎಂದು ಸ್ಪಷ್ಟಪಡಿಸಿದ್ದಾರೆ.

Prashanth Neel Mail Id Is Misusing

ಸದ್ಯ, ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ನಡೆಯುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗದ ಮೇಲೆ ಭಾರಿ ನಿರೀಕ್ಷೆ ಇದೆ. ಯಶ್, ಶ್ರೀನಿಧಿ ಶೆಟ್ಟಿ ಜೊತೆ ಈ ಸಲ ಬಾಲಿವುಡ್ ನಟ ಸಂಜಯ್ ದತ್ ಕೂಡ ಸಾಥ್ ಕೊಟ್ಟಿರುವುದು ಚಿತ್ರಕ್ಕೆ ಬಲ ತುಂಬಿದೆ.

More from Filmibeat

English summary
'Prashanthneelconnectgmail.com'' is using prashanth neel identity and trying to scam the talents in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X