Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!
ರಾಕಿಂಗ್ ಸ್ಟಾರ್ ಯಶ್ ನಟಿಸಿದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕಂಡ ಬಹುದೊಡ್ಡ ಸಕ್ಸಸ್ ನೋಡಿದ್ಮೇಲೆ, ಆ ಸಿನಿಮಾದಲ್ಲಿ ನಾನೊಂದು ಸಣ್ಣ ಪಾತ್ರ ಮಾಡಬೇಕಿತ್ತು ಎಂಬ ಆಸೆ ಅನೇಕರಲ್ಲಿದೆ. ಇಂತಹ ಅನೇಕರು ಕೆಜಿಎಫ್ ನಿರ್ದೇಶಕ ಅಥವಾ ನಿರ್ಮಾಪಕರನ್ನ ಸಂಪರ್ಕಿಸುವ ಪ್ರಯತ್ನವನ್ನು ಮಾಡಿರುವುದು ನಿಜ.
ಕೆಜಿಎಫ್ ಚಿತ್ರದ ಇದೇ ಯಶಸ್ಸನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನವೂ ಸಾಗಿದೆ ಎಂಬ ಮಾಹಿತಿ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿತ್ತು. ಇದೀಗ, ಈ ವಿಷಯ ಖುದ್ದು ನಿರ್ದೇಶಕರಿಂದಲೇ ಬಹಿರಂಗವಾಗಿದೆ.
ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಬಾಸ್' ಯಾರು?
ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ಇದೆ, ಆಡಿಷನ್ ಗೆ ಬನ್ನಿ ಎಂಬ ಜಾಹೀರಾತು ನೀಡಿ, ಪ್ರತಿಭಾನ್ವಿತರನ್ನ ದಾರಿತಪ್ಪಿಸುವ ಕೆಲಸ ನಡೆಯುತ್ತಿದೆ, ಎಚ್ಚರದಿಂದಿರಿ...! ಎಂದು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
''[email protected]'' ಎಂಬ ನಕಲಿ ಮೇಲ್ ಬಳಸಲಾಗುತ್ತಿದೆ. ಈ ಮೇಲ್ ಬಳಸಿ ಕೆಜಿಎಫ್ ಆಡಿಷನ್ ಇದೆ ಎಂಬ ಮೇಲ್ ಗಳನ್ನ ಕಳಹಿಸಲಾಗುತ್ತಿದೆ. ಇಂತಹ ಮೇಲ್ ಬಂದರೆ ಅದನ್ನು ದಯವಿಟ್ಟು ನಿರ್ಲಕ್ಷಿಸಿ....ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟ ಯಾವುದೇ ಆಡಿಷನ್ ಇದ್ದರೂ ಹೊಂಬಾಳೆ ಫಿಲಂಸ್ ಕಡೆಯಿಂದಲೇ ಮಾಹಿತಿ ನೀಡಲಾಗುತ್ತೆ'' ಎಂದು ಸ್ಪಷ್ಟಪಡಿಸಿದ್ದಾರೆ.
ಊರ್ವಶಿ ಚಿತ್ರಮಂದಿರದಲ್ಲಿ 'ಕೆಜಿಎಫ್' ಸ್ಪೆಷಲ್ ಶೋ: ಟಿಕೆಟ್ ಬೆಲೆಯಲ್ಲಿ ಆಫರ್
ಸದ್ಯ, ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ನಡೆಯುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾದ ಮುಂದುವರಿದ ಭಾಗದ ಮೇಲೆ ಭಾರಿ ನಿರೀಕ್ಷೆ ಇದೆ. ಯಶ್, ಶ್ರೀನಿಧಿ ಶೆಟ್ಟಿ ಜೊತೆ ಈ ಸಲ ಬಾಲಿವುಡ್ ನಟ ಸಂಜಯ್ ದತ್ ಕೂಡ ಸಾಥ್ ಕೊಟ್ಟಿರುವುದು ಚಿತ್ರಕ್ಕೆ ಬಲ ತುಂಬಿದೆ.