ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ಯಶ್, ಶ್ರೀ ಮುರಳಿ: ಕಥೆ ಏನು?
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಾಲು, ಸಾಲಾಗಿ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. 'ಕೆಜಿಎಫ್' ಬಳಿಕ ಟಾಲಿವುಡ್ ಸ್ಟಾರ್ ನಟರು ಪ್ರಶಾಂತ್ ಹಿಂದೆ ಬಿದ್ದಿದ್ದಾರೆ. ಇತ್ತ ಪ್ರಶಾಂತ್ ನೀಲ್ ಕೂಡ ತೆಲುಗಿನ ಸ್ಟಾರ್ ನಟರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಮಾಡಿರುವುದು 3 ಚಿತ್ರಗಳು ಮಾತ್ರ. 'ಉಗ್ರಂ', 'ಕೆಜಿಎಫ್', 'ಕೆಜಿಎಫ್ 2 ನಿರ್ದೇಶಿಸಿದ್ದಾರೆ. ಮೂರು ಸಿನಿಮಾಗಳಲ್ಲೇ ಬಿಗ್ ಚಿತ್ರಗಳ ನಿರ್ದೇಶಕ ಎನಿಸಿಕೊಂಡಿದ್ದಾರೆ ಪ್ರಶಾಂತ್. ಇನ್ನು ತೆಲುಗಿನಲ್ಲಿ ಬ್ಯುಸಿ ಆಗಲಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ 'ಕೆಜಿಎಫ್' ಚಿತ್ರದ ರೂವಾರಿ. ಚಿತ್ರದ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಚಿತ್ರದ ಕೆಲಸಗಳು ಭರದಿಂದ ಸಾಗಿದೆ. 'ಕೆಜಿಎಫ್' ಚಿತ್ರಕ್ಕೆ ಮುಖ್ಯ ಸೂತ್ರಧಾರ ಅಂದರೆ ಅದು ನಿರ್ದೇಶಕ ಪ್ರಶಾಂತ್ ನೀಲ್. ತಮ್ಮ ಪರಿಕಲ್ಪನೆಯಲ್ಲಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಈಗ ಈ ಸಾಲಿನಲ್ಲಿ 'ಕೆಜಿಎಫ್ 2' ರೆಡಿಯಾಗಿದೆ.
'ಕೆಜಿಎಫ್ 2' ಬಳಿಕ ನಿರ್ದೇಶ ಪ್ರಶಾಂತ್ ನೀಲ್ ಕನ್ನಡದ ಯಾವ ಚಿತ್ರ ಮಾಡುತ್ತಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ ಪ್ರಶಾಂತ್ ನಿರ್ದೇಶನ ಮಾಡಲಿರುವ ಮುಂದಿನ ನಟ ಯಾರು ಎನ್ನುವ ಬಗ್ಗೆಯೂ ಸಾಕಷ್ಟು ಮೂಡಿದೆ. ಈ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಗುಸು, ಗುಸು ಹಬ್ಬಿದೆ.

ಪ್ರಶಾಂತ್ ನೀಲ್ ಮುಂದಿನ ಚಿತ್ರಕ್ಕೆ ಹೀರೋ ಯಾರು?
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಮಾಡಿರುವುದು ಕೇವಲ ಮೂರೆ ಚಿತ್ರಗಳು. 'ಉಗ್ರಂ', 'ಕೆಜಿಎಫ್ 1', 'ಕೆಜಿಎಫ್ 2'. ಆದರೆ ಅದಾಗಲೇ ಯಶಸ್ಸಿನ ಉತ್ತುಂಗವನ್ನು ಏರಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯ ನಿರ್ದೇಶಕ ಕೂಡ ಆಗಿ ಬಿಟ್ಟಿದ್ದಾರೆ. ತೆಲುಗಿನಲ್ಲಿ ಸಾಲು, ಸಾಲು ಸ್ಟಾರ್ ನಟರ ಸಿನಿಮಾಗಳನ್ನು ಒಪ್ಪಿದ್ದಾರೆ. ಆದರೆ ಕನ್ನಡದಲ್ಲಿ ಯಾವ ನಟನಿಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಆದ್ರೀಗ ನಟ ಶ್ರೀ ಮುರಳಿ ಹೆಸರು ಕೇಳಿ ಬರುತ್ತಿದೆ.

ಪ್ರಶಾಂತ್ ನೀಲ್ ಚಿತ್ರದಲ್ಲಿ ಯಶ್-ಶ್ರೀ ಮುರಳಿ?
ಪ್ರಶಾಂತ್ ನೀಲ್ ಮುಂದಿನ ಕನ್ನಡ ಚಿತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಇರುತ್ತದೆ ಎನ್ನಲಾಗಿದೆ. ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾದಲ್ಲಿ ಯಶ್ ಮತ್ತು ಶ್ರೀ ಮುರಳಿಯನ್ನು ಜೊತೆಗೂಡಿಸಿ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಇಬ್ಬರು ನಟರು, ಪ್ರಶಾಂತ್ ನಿರ್ದೇಶನದಲ್ಲಿ ಒಂದಾದರೆ ಮತ್ತೊಂದು ಇತಿಹಾಸ ಪಕ್ಕಾ.
Recommended Video


ಪ್ರಶಾಂತ್ ನೀಲ್‌ಗೆ ತೆಲುಗಿನಲ್ಲಿ ಎಲ್ಲಿಲ್ಲದ ಬೇಡಿಕೆ!
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಾಲು, ಸಾಲಾಗಿ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. 'ಕೆಜಿಎಫ್' ಬಳಿಕ ಟಾಲಿವುಡ್ ಸ್ಟಾರ್ ನಟರು ಪ್ರಶಾಂತ್ ಹಿಂದೆ ಬಿದ್ದಿದ್ದಾರೆ. ಪ್ರಶಾಂತ್ ನೀಲ್ ಕೂಡ ತೆಲುಗಿನ ಸ್ಟಾರ್ ನಟರ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ಬಿಗ್ ಹಿಟ್ ಆದ್ಮೇಲಂತೂ ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಲಿದ್ದಾರೆ.

ತೆಲುಗು ಸ್ಟಾರ್ ನಟರಿಗೆ ನೀಲ್ ನಿರ್ದೇಶನ!
ಇನ್ನು ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ಜೊತೆಗೂ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಜೂ.ಎನ್‌ಟಿಆರ್ ಚಿತ್ರದ ಬಗ್ಗೆ ಸುದ್ದಿ ಹೊರ ಬಂದಿದೆ. 'ಸಲಾರ್' ಸರಣಿ ನಂತರ ಜೂ.ಎನ್‌ಟಿಅರ್ ಚಿತ್ರವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಬಳಿಕ ನಟ ರಾಮ್ ಚರಣ್ ತೇಜ್ ಚಿತ್ರವನ್ನು ಶುರುಮಾಡಲಿದ್ದಾರೆ. ಇನ್ನು ಮತ್ಯಾವ ತೆಲುಗು ಸ್ಟಾರ್ ನಟನ ಚಿತ್ರ ಒಪ್ಪಿಕೊಳ್ಳತ್ತಾರೆ ಅಂತ ನೋಡ್ಬೇಕು.


Click it and Unblock the Notifications











