Jr.NTR ಜೊತೆ ಪ್ರಶಾಂತ್ ನೀಲ್ ಸಿನಿಮಾ ಖಚಿತ: ಕಥೆಯ ಸುಳಿವು ಬಿಟ್ಟುಕೊಟ್ಟ ಬರ್ತಡೇ ವಿಶ್?

ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಚಿತ್ರಜಗತ್ತಿನಲ್ಲಿ ಖ್ಯಾತಿ ಪಡೆದ ನಿರ್ದೇಶಕ ಪ್ರಶಾಂತ್ ನೀಲ್ , ಸದ್ಯ ಚಾಪ್ಟರ್ 2 ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಪ್ರಶಾಂತ್ ಮುಂದಿನ ಚಿತ್ರ ಯಾವುದು ಎನ್ನುವ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿತ್ತು.

Recommended Video

Shwetha srivatsav playing with her cute daughter.

ತೆಲುಗು ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತು ವರ್ಷದಿಂದ ಕೇಳಿ ಬರುತ್ತಿತ್ತು. ಅದರಲ್ಲೂ ಪ್ರಶಾಂತ್ ನೀಲ್ ತೆಲುಗಿನ ಖ್ಯಾತ ನಟ ಜೂ.ಎನ್.ಟಿ.ಆರ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಹರಿದಾಡುತ್ತಿತ್ತು. ಆದರೀಗ ಈ ಮಾತು ನಿಜವಾಗಿದೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

Jr.NTR ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

Jr.NTR ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್

37ನೇ ವಸಂತಕ್ಕೆ ಕಾಲಿಟ್ಟ ನಟ Jr.NTR ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಅದ್ದೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಬಿದ್ದರೂ, ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿ ಇರುವ Jr.NTR ಮುಂದಿನ ಸಿನಿಮಾ ಕೆಜಿಎಫ್ ನಿರ್ದೇಶಕರ ಜೊತೆ ಎನ್ನುವುದು ಬಹಿರಂಗವಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

ಕುತೂಹಲ ಹೆಚ್ಚಿಸಿದೆ Jr.NTR-ಪ್ರಶಾಂತ್ ನೀಲ್ ಸಿನಿಮಾ

ಕುತೂಹಲ ಹೆಚ್ಚಿಸಿದೆ Jr.NTR-ಪ್ರಶಾಂತ್ ನೀಲ್ ಸಿನಿಮಾ

Jr.NTR ಮತ್ತು ಪ್ರಶಾಂತ್ ನೀಲ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇಬ್ಬರ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಜಮೌಳಿ, ಪ್ರಶಾಂತ್ ನೀಲ್ ಹೀಗೆ ಖ್ಯಾತ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಿರುವ ಜೂ.ಎನ್.ಟಿ.ಆರ್ ಮೇಲೆ ನಿರೀಕ್ಷೆ ಸಹ ದುಪ್ಪಟ್ಟಾಗಿದೆ. ಪ್ರಶಾಂತ್ ನೀಲ್ ಈ ವಿಚಾರ ಬಹಿರಂಗ ಪಡಿಸುತ್ತಿದ್ದಂತೆ ಅಭಿಮಾನಿಗಳು 'ಇಬ್ಬರ ಕಾಂಬಿನೇಷನ್ ನೋಡಲು ಕಾಯುತ್ತಿದ್ದೇವೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Jr.NTRಗೆ ಪ್ರಶಾಂತ್ ನೀಲ್ ಶುಭಾಶಯ

Jr.NTRಗೆ ಪ್ರಶಾಂತ್ ನೀಲ್ ಶುಭಾಶಯ

Jr.NTR ಹುಟ್ಟುಹಬ್ಬಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಶುಭಾಶಯ ತಿಳಿಸಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಪ್ರಶಾಂತ್ "ಕಡೆಗೂ ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದ್ದಲ್ಲಿ ಕುಳಿತರೆ ಹೇಗಾಗುತ್ತೆ ಎಂಬುದು ನನಗೆ ಗೊತ್ತಾಯಿತು. ಅಂತ ಕ್ರೇಜಿ ಎನರ್ಜಿಯ ಸುತ್ತ ಇರಲು, ಮುಂದಿನ ಬಾರಿ ನಾನು ನನ್ನ ರೇಡಿಯೇಶನ್ ಸೂಟ್ ತರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಸಹೋದರ ತಾರಕ್" ಎಂದು ವಿಶ್ ಮಾಡಿದ್ದಾರೆ.

ಕಥೆಯ ಸುಳಿವು ಬಿಟ್ಟು ಕೊಟ್ರಾ ಪ್ರಶಾಂತ್ ನೀಲ್?

ಕಥೆಯ ಸುಳಿವು ಬಿಟ್ಟು ಕೊಟ್ರಾ ಪ್ರಶಾಂತ್ ನೀಲ್?

ಪ್ರಶಾಂತ್ ನೀಲ್, ಜೂ.ಎನ್.ಟಿ.ಆರ್ ಗೆ ಮಾಡಿರುವ ವಿಶ್ ಸಿನಿಮಾದ ಕಥೆಯ ಸುಳಿವು ನೀಡಿದ್ಯಾ ಎನ್ನುವ ಅನುಮಾನ ಮೂಡಿಸಿದೆ. ಇದು ತಾರಕ್ ರಾಮ್ ಎನರ್ಜಿಯನ್ನು ಹೊಗಳಿದ್ದಾ ಅಥವಾ ಮುಂದಿನ ಸಿನಿಮಾದ ಕಥೆಯ ಸುಳಿವು ಇಬರಹುದಾ ಎನ್ನುವ ಅನುಮಾನ ಮೂಡಿಸಿದೆ. ಪ್ರಶಾಂತ್ ನೀಲ್ ಮುಂದಿನ ಸಿನಿಮಾ ನ್ಯೂಕ್ಲಿಯರ್ ಪ್ಲಾಂಟ್ ಬಗ್ಗೆ ಇರಲಿದೆಯಾ ಎನ್ನುವುದು ಕಾದು ನೋಡಬೇಕು.

ಯಾವಾಗ ಸೆಟ್ಟೇರಲಿದೆ ಸಿನಿಮಾ?

ಯಾವಾಗ ಸೆಟ್ಟೇರಲಿದೆ ಸಿನಿಮಾ?

ಪ್ರಶಾಂತ್ ನೀಲ್ ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತಾರಕ್ ರಾಮ್, ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರಗಳಾಗಿವೆ. ಈ ಎರಡೂ ಸಿನಿಮಾಗಳು ಮುಗಿದ ಬಳಿಕ ಪ್ರಶಾಂತ್ ನೀಲ್ ಮತ್ತು ತಾರಕ್ ರಾಮ್ ಸಿನಿಮಾ ಸೆಟ್ಟೇರಲಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಸಿನಿಮಾ ಪ್ರಾರಂಭವಾಗುವ ಸಾಧ್ಯತೆ ಇದೆ.

More from Filmibeat

English summary
Prashanth Neel next movie with Jr.NTR it's confirmed. Prashanth Neel birthday wish to Jr.NTR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X