For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಸಂಭಾವನೆ ಬಗ್ಗೆ ಮಾತನಾಡಿದ 'ಕೆಜಿಎಫ್' ಪ್ರಶಾಂತ್ ನೀಲ್

  |

  ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ್ಮೇಲೆ ನಿರ್ದೇಶಕ ಪ್ರಶಾಂತ್ ನೀಲ್ ಸಂಭಾವನೆ ವಿಚಾರ ಬಹಳ ಚರ್ಚೆಯಾಗುತ್ತಿದೆ. ಪ್ರಭಾಸ್ ಮತ್ತು ಎನ್‌ಟಿಆರ್ ಪ್ರಾಜೆಕ್ಟ್‌ಗಳು ಓಕೆ ಆದ್ಮೇಲಂತೂ ನೀಲ್ ಚಿತ್ರವೊಂದಕ್ಕೆ ಎಷ್ಟು ಪಡೆಯುತ್ತಾರೆ ಎಂಬುದು ಸೌತ್ ದುನಿಯಾದ ಪ್ರಮುಖ ಪ್ರಶ್ನೆಯಾಯಿತು.

  ಪ್ರಶಾಂತ್ ನೀಲ್ ಸಂಭಾವನೆ ಈಗಿನ ಸ್ಟಾರ್ ನಿರ್ದೇಶಕರನ್ನು ಮೀರಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಸಹಜವಾಗಿ ಚಿತ್ರಜಗತ್ತಿನಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ. ರಾಜಮೌಳಿ, ಶಂಕರ್, ಪೂರಿ ಜಗನ್ನಾಥ್, ತ್ರಿವಿಕ್ರಮ್ ಶ್ರೀನಿವಾಸ್, ಕೊರಟಾಲ ಶಿವ ಅಂತಹ ನಿರ್ದೇಶಕರ ಸಾಲಿಗೆ ಪ್ರಶಾಂತ್ ನೀಲ್ ಸೇರಿದ್ದು, ಸ್ಟಾರ್ ಡೈರೆಕ್ಟರ್ ಪಟ್ಟ ಪಡೆದುಕೊಂಡಿದ್ದಾರೆ ಎಂಬ ವರದಿಗಳು ಪ್ರಕಟವಾದವು. ಆದರೆ, ಅಂಕಿ-ಅಂಶಗಳು ಎಲ್ಲಿಯೂ ಅಧಿಕೃತವಾಗಿಲ್ಲ. ಇದೀಗ, ಸ್ವತಃ ಪ್ರಶಾಂತ್ ನೀಲ್ ತಮ್ಮ ಸಂಭಾವನೆ ಕುರಿತು ಮಾತನಾಡಿದ್ದಾರೆ. ಮುಂದೆ ಓದಿ...

  'ಸಲಾರ್' ನಂತರ ಪ್ರಶಾಂತ್ ನೀಲ್ ಮುಂದಿದೆ 4 ಪ್ಯಾನ್ ಇಂಡಿಯಾ ಪ್ರಾಜೆಕ್ಟ್?'ಸಲಾರ್' ನಂತರ ಪ್ರಶಾಂತ್ ನೀಲ್ ಮುಂದಿದೆ 4 ಪ್ಯಾನ್ ಇಂಡಿಯಾ ಪ್ರಾಜೆಕ್ಟ್?

  15 ಕೋಟಿ ಪಡೆದ್ರಾ?

  15 ಕೋಟಿ ಪಡೆದ್ರಾ?

  ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸಲಿರುವ 31ನೇ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹಾಕಲಿದ್ದಾರೆ. ಟಾಲಿವುಡ್‌ನಲ್ಲಿ ಸದ್ಯ ಹರಿದಾಡುತ್ತಿರುವ ಸುದ್ದಿ ಪ್ರಕಾರ, 15 ಕೋಟಿ ರೂಪಾಯಿ ಚೆಕ್ ಪಡೆದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

  ದಕ್ಷಿಣದ ದುಬಾರಿ ನಿರ್ದೇಶಕ

  ದಕ್ಷಿಣದ ದುಬಾರಿ ನಿರ್ದೇಶಕ

  ಮೈತ್ರಿ ಮೂವಿ ಮೇಕರ್ಸ್ 15 ಕೋಟಿ ಕೊಟ್ಟಿದ್ದು ನಿಜವೇ ಆದರೆ ಪ್ರಶಾಂತ್ ನೀಲ್ ದಕ್ಷಿಣ ಭಾರತದ ದುಬಾರಿ ನಿರ್ದೇಶಕ. ಕನ್ನಡ ಇಂಡಸ್ಟ್ರಿ ಪಾಲಿಗೆ ಈ ಸಂಭಾವನೆ ಯಾವ ನಿರ್ದೇಶಕನೂ ಪಡೆದಿಲ್ಲ. ನೀಲ್ ಬೇಡಿಕೆ ನೋಡಿದ್ರೆ ಕನ್ನಡ ನಿರ್ಮಾಪಕರಿಗೆ ಕಬ್ಬಿಣದ ಕಡಲೆಯಾಗಲಿದ್ದಾರೆ.

  ಪ್ರಶಾಂತ್ ನೀಲ್ ಏನಂದ್ರು?

  ಪ್ರಶಾಂತ್ ನೀಲ್ ಏನಂದ್ರು?

  ಈ ಕುರಿತು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರಶಾಂತ್ ನೀಲ್ ''ಇದು ನನ್ನ ವೈಯಕ್ತಿಕ ವಿಚಾರ. ಪ್ರಸ್ತುತ ನಾನು ಅತಿ ಹೆಚ್ಚು ಪಡೆಯುವ ನಿರ್ದೇಶಕ ಎನ್ನುವುದನ್ನು ನಾನು ನಂಬುವುದಿಲ್ಲ. ಚರ್ಚೆಗೆ ಇದು ಮೊದಲ ವಿಷಯವಾಗಿರಬೇಕು ಎಂದು ಸಹ ನಾನು ಭಾವಿಸುವುದಿಲ್ಲ'' ಎಂದಿರುವುದಾಗಿ ಟಾಲಿವುಡ್‌.ನೆಟ್ ವೆಬ್‌ಸೈಟ್ ವರದಿ ಮಾಡಿದೆ.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada
  ನೀಲ್ ಮುಂದಿನ ಪ್ರಾಜೆಕ್ಟ್‌ಗಳು

  ನೀಲ್ ಮುಂದಿನ ಪ್ರಾಜೆಕ್ಟ್‌ಗಳು

  ಕೆಜಿಎಫ್ ಚಾಪ್ಟರ್ 2 ಸಂಪೂರ್ಣವಾಗಿ ಮುಗಿದಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಪ್ರಭಾಸ್ ಜೊತೆ ಸಲಾರ್ ಆರಂಭಿಸಿದ್ದು ಚಿತ್ರೀಕರಣ ಸಾಗ್ತಿದೆ. ಜೂನಿಯರ್ ಎನ್‌ಟಿಆರ್ ಜೊತೆ ಹೊಸ ಸಿನಿಮಾ ಅಧಿಕೃತವಾಗಿ ಪ್ರಕಟವಾಗಿದೆ. ಅದಾದ ಮೇಲೆ ಗೀತಾ ಆರ್ಟ್ಸ್ ಜೊತೆ, ಬಾಹುಬಲಿ ನಿರ್ಮಾಪಕ ಡಿವಿವಿ ದಾನಯ್ಯ ಜೊತೆ ಹಾಗೂ ದಿಲ್ ರಾಜು ಜೊತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

  English summary
  KGF Director Prashanth Neel opens up on his remuneration in recent interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X